More

    PHOTOS | ಸಿಎಸ್‌ಕೆ ಶಿಬಿರಕ್ಕಾಗಿ ಚೆನ್ನೈಗೆ ಆಗಮಿಸಿದ ಎಂಎಸ್ ಧೋನಿ ಬಳಗ

    ಚೆನ್ನೈ: ಸರಿಸುಮಾರು ಒಂದು ವರ್ಷದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ ಆಡಲು ಸಜ್ಜಾಗುತ್ತಿರುವ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇತರ ಸದಸ್ಯರು ಶುಕ್ರವಾರ ಚೆನ್ನೈಗೆ ಆಗಮಿಸಿದರು. ಐಪಿಎಲ್ ಟೂರ್ನಿಗಾಗಿ ಯುಎಇಗೆ ಪ್ರಯಾಣಿಸುವುದಕ್ಕೆ ಪೂರ್ವಭಾವಿಯಾಗಿ ಶನಿವಾರದಿಂದ 6 ದಿನಗಳ ಕಾಲ ಸಿಎಸ್‌ಕೆ ತಂಡದ ತರಬೇತಿ ಶಿಬಿರ ನಡೆಯಲಿದೆ.

    PHOTOS | ಸಿಎಸ್‌ಕೆ ಶಿಬಿರಕ್ಕಾಗಿ ಚೆನ್ನೈಗೆ ಆಗಮಿಸಿದ ಎಂಎಸ್ ಧೋನಿ ಬಳಗ

    ಎಂಎಸ್ ಧೋನಿ ಜತೆಗೆ ಸುರೇಶ್ ರೈನಾ, ದೀಪಕ್ ಚಹರ್, ಪೀಯುಷ್ ಚಾವ್ಲಾ ಮತ್ತು ಕೇದಾರ್ ಜಾಧವ್ ಶುಕ್ರವಾರ ಚೆನ್ನೈಗೆ ಆಗಮಿಸಿದರು. ಶನಿವಾರದಿಂದ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸಿಎಸ್‌ಕೆ ತಂಡದ ತರಬೇತಿ ಶಿಬಿರ ನಡೆಯಲಿದೆ. ಚೆನ್ನೈಗೆ ಆಗಮಿಸುವುದಕ್ಕೆ ಮುನ್ನ ನಡೆದ ಕರೊನಾ ಪರೀಕ್ಷೆಯಲ್ಲಿ ತಂಡದ ಎಲ್ಲ ಸದಸ್ಯರ ವರದಿ ನೆಗೆಟಿವ್ ಬಂದಿದೆ.

    PHOTOS | ಸಿಎಸ್‌ಕೆ ಶಿಬಿರಕ್ಕಾಗಿ ಚೆನ್ನೈಗೆ ಆಗಮಿಸಿದ ಎಂಎಸ್ ಧೋನಿ ಬಳಗ

    ‘ಸಿಎಸ್‌ಕೆ ತಂಡದ 16 ಭಾರತೀಯ ಆಟಗಾರರ ಪೈಕಿ 13-14 ಆಟಗಾರರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಗಸ್ಟ್ 21ರಂದು ಯುಎಇಗೆ ಪ್ರಯಾಣಿಸುವುದಕ್ಕೆ 72 ಗಂಟೆ ಮುನ್ನ ಎಲ್ಲ ಆಟಗಾರರು ಮತ್ತೊಮ್ಮೆ ಕೋವಿಡ್-19 ಪರೀಕ್ಷೆಗೆ ಒಳಗಾಗಲಿದ್ದಾರೆ’ ಎಂದು ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಬೆಂಗಳೂರಿನಲ್ಲಿ ಆರ್‌ಸಿಬಿ ಆಟಗಾರರ ಕ್ವಾರಂಟೈನ್ ಶುರು

    39 ವರ್ಷದ ಎಂಎಸ್ ಧೋನಿ 2019ರ ಏಕದಿನ ವಿಶ್ವಕಪ್ ಸೆಮಿೈನಲ್ ಪಂದ್ಯದ ಬಳಿಕ ಯಾವುದೇ ಸ್ಪರ್ಧಾತ್ಮಕ ಪಂದ್ಯ ಆಡಿಲ್ಲ. ಆಲ್ರೌಂಡರ್ ರವೀಂದ್ರ ಜಡೇಜಾ ವೈಯಕ್ತಿಕ ಕಾರಣದಿಂದಾಗಿ ಸಿಎಸ್‌ಕೆ ತಂಡದ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಈಗಾಗಲೆ ಖಚಿತಪಡಿಸಿದ್ದಾರೆ.

    PHOTOS | ಸಿಎಸ್‌ಕೆ ಶಿಬಿರಕ್ಕಾಗಿ ಚೆನ್ನೈಗೆ ಆಗಮಿಸಿದ ಎಂಎಸ್ ಧೋನಿ ಬಳಗ

    PHOTOS | ಸಿಎಸ್‌ಕೆ ಶಿಬಿರಕ್ಕಾಗಿ ಚೆನ್ನೈಗೆ ಆಗಮಿಸಿದ ಎಂಎಸ್ ಧೋನಿ ಬಳಗ

    PHOTOS | ಸಿಎಸ್‌ಕೆ ಶಿಬಿರಕ್ಕಾಗಿ ಚೆನ್ನೈಗೆ ಆಗಮಿಸಿದ ಎಂಎಸ್ ಧೋನಿ ಬಳಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts