More

    ‘ಥಗ್ಸ್ ಆಫ್ ರಾಮಘಡ’ ಚಿತ್ರತಂಡಕ್ಕೆ ‘ಡಾಲಿ’ ಧನಂಜಯ್​ ಸಾಥ್ …

    ಬೆಂಗಳೂರು: ‘ಥಗ್ಸ್ ಆಫ್ ರಾಮಘಡ’ ಎಂಬ ಹೊಸಬರ ಹೊಸ ಸಿನಿಮಾ ಜನವರಿ 6ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಭಾನುವಾರ ಸಂಜೆ ಚಿತ್ರದ ಟ್ರೈಲರ್​ ಬಿಡುಗಡೆಯಾಗಲಿದ್ದು, ‘ಡಾಲಿ’ ಧನಂಜಯ್​ ಚಿತ್ರತಂಡಕ್ಕೆ ಸಾಥ್​ ನೀಡಿದ್ದಾರೆ.

    ಇದನ್ನೂ ಓದಿ: ‘ಟೈಟಾನಿಕ್​’ ಚಿತ್ರದಲ್ಲಿ ನಾಯಕ ಸಾಯುವುದೇಕೆ? ಪ್ರಯೋಗದ ಮೂಲಕ ಸಾಬೀತು ಮಾಡಲು ಹೊರಟ ಕ್ಯಾಮರಾನ್​

    ಈ ಮಧ್ಯೆ, ‘ಥಗ್ಸ್ ಆಫ್ ರಾಮಘಡ’ ಚಿತ್ರತಂಡದವರು ವಿಭಿನ್ನ ರೀತಿಯ ಪ್ರಚಾರ ಮಾಡುವುದಕ್ಕೆ ಮುಂದಾಗಿದ್ದಾರೆ. ಕನ್ನಡದ ಜನಪ್ರಿಯ ಟ್ಯಾಬ್ಲಾಯ್ಡ್​ಗಳನ್ನು ಹೋಲುವ ಪತ್ರಿಕೆಗಳನ್ನು ಡಿಸೈನ್​ ಮಾಡಿಸಿ, ಅದರ ಮೂಲಕ ಚಿತ್ರದ ಕೆಲವು ಪ್ರಮುಖ ಪಾತ್ರಗಳನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಈ ಪೋಸ್ಟರ್​ಗಳು ಸೋಷಿಯಲ್​ ಮೀಡಿಯಾದಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

    ಕಾರ್ತಿಕ್ ಮಾರಲಭಾವಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮೊದಲ ಚಿತ್ರ ‘ಥಗ್ಸ್ ಆಫ್ ರಾಮಘಡ’. ಉತ್ತರ ಕರ್ನಾಟಕ ಭಾಗದಲ್ಲಿ 1995ರಲ್ಲಿ ನಡೆದ ಸತ್ಯ ಘಟನೆ ಆಧರಿಸಿದ ಸಿನಿಮಾವಿದು. ಅದಕ್ಕೆ ಒಂದಿಷ್ಟು ಸಿನಿಮೀಯ ಸ್ಪರ್ಶ ಕೊಟ್ಟು, ಕ್ರೈಂ ಥ್ರಿಲ್ಲರ್​ ಮಾಡಿದ್ದಾರೆ ಕಾರ್ತಿಕ್. ಉತ್ತರ ಕರ್ನಾಟಕದ ಚಿಕ್ಕ ಹಳ್ಳಿಯಲ್ಲಿ ನಡೆಯುವ ಕಥೆ ಇದಾಗಿದ್ದು, ನೈಜತೆಗೆ ಹತ್ತಿರವಾಗಿರಲೆಂದು ಪೂರ್ತಿ ಸಿನಿಮಾವನ್ನು ಉತ್ತರ ಕರ್ನಾಟಕ ಭಾಗದಲ್ಲೇ ಸೆರೆ ಹಿಡಿಯಲಾಗಿದೆ.

    ಇದನ್ನೂ ಓದಿ: ಧನಂಜಯ್​ ಯಾಕೆ ಅಷ್ಟೊಂದು ಸಿನಿಮಾಗಳನ್ನು ಮಾಡ್ತಾರೆ? ಅವರೇ ಉತ್ತರ ಹೇಳ್ತಾರೆ ಕೇಳಿ …

    ‘ಥಗ್ಸ್ ಆಫ್ ರಾಮಘಡ’ ಚಿತ್ರದಲ್ಲಿ ಚಂದನ್ ರಾಜ್, ಅಶ್ವಿನ್ ಹಾಸನ್, ಮಹಾಲಕ್ಷ್ಮೀ, ಸೂರ್ಯ ಕಿರಣ್, ಪ್ರಭು ಹೊಸದುರ್ಗ, ಟೈಗರ್ ಗಂಗ, ಜಗದೀಶ್, ಸೂರ್ಯಕಿರಣ್​ ಮುಂತಾದವರು ನಟಿಸಿದ್ದು, ಭಾರತ್ ಟಾಕೀಸ್ ನಡಿ ಜಯಕುಮಾರ್ ಮತ್ತು ಕೀರ್ತಿರಾಜ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜಿಸಿದ್ದಾರೆ.

    ಚರ್ಚೆ ಆಗಬೇಕಿರುವುದು ಬಣ್ಣವಲ್ಲ … ಸೆನ್ಸಾರ್​ ಬೋರ್ಡ್​ಗೆ ಭೀಷ್ಮ ತರಾಟೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts