More

    ಚರ್ಚೆ ಆಗಬೇಕಿರುವುದು ಬಣ್ಣವಲ್ಲ … ಸೆನ್ಸಾರ್​ ಬೋರ್ಡ್​ಗೆ ಭೀಷ್ಮ ತರಾಟೆ …

    ಮುಂಬೈ: ಶಾರೂಖ್​ ಖಾನ್​ ಅಭಿನಯದ ‘ಪಠಾಣ್​’ ಚಿತ್ರದ ‘ಬೇಷರಮ್​ ರಂಗ್​’ ಹಾಡು ಬಿಡುಗಡೆಯಾಗಿದ್ದು ಸಾಕಷ್ಟು ವೈರಲ್​ ಆಗಿದೆ. ಈ ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿ ತೊಟ್ಟು ದೀಪಿಕಾ ಪಡುಕೋಣೆ ಮೈಮಾಟ ತೋರಿಸಿದ್ದಾರೆ. ಕೇಸರಿ ಬಣ್ಣದ ಬಿಕಿನಿ ತೋರಿಸಿರುವುದು ಹಿಂದುಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಕೆಲವರು ಈ ಚಿತ್ರವನ್ನು ನಿಷೇಧಿಸುವುದಕ್ಕೆ ಹೊರಟಿದ್ದಾರೆ. ಅಷ್ಟೇ ಅಲ್ಲ, ‘Boycott Pathaan’ ಎನ್ನುವ ಅಭಿಯಾನ ಸಹ ಶುರು ಮಾಡಿದ್ದಾರೆ.

    ಇದನ್ನೂ ಓದಿ: ‘ಉಳಿದವರಾರು’ ಮೂಲಕ ಜೀವನ ಅಂದ್ರೆ ಏನು ಅಂತ ಹೇಳೋಕೆ ಹೊರಟಿದ್ದಾರೆ ಹೊಸಬರು

    ಆದರೆ, ಚರ್ಚೆ ಆಗಬೇಕಿರುವುದು ಬಿಕಿನಿಯ ಬಣ್ಣವಲ್ಲ, ಬೇರೆ ವಿಷಯವೇ ಚರ್ಚೆ ಆಗಬೇಕು ಎಂದು ಹಿರಿಯ ನಟ ಹಾಗೂ ಮ ‘ಮಹಾಭಾರತ’ ಧಾರಾವಾಹಿಯ ಭೀಷ್ಮ ಪಾತ್ರಧಾರಿ ಮುಕೇಶ್​ ಖನ್ನಾ ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲ, ‘ಬೇಷರಮ್​ ದಿಲ್​’ ಹಾಡು ಅಶ್ಲೀಲವಾಗಿರುವುದಷ್ಟೇ ಅಲ್ಲ, ಬಹಳ ಪ್ರಚೋದನಕಾರಿಯಾಗಿದೆ ಎಂದು ಹೇಳಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ‘ಕೆಲವರಿಗೆ ತಲೆ ಕೆಟ್ಟಿದೆ ಎಂದನಿಸುತ್ತಿದೆ. ಇದು ಬಣ್ಣದ ಅಥವಾ ಧಾರ್ಮಿಕ ವಿಷಯವಲ್ಲ. ಆ ಹಾಡು ಅಶ್ಲೀಲವಷ್ಟೇ ಅಲ್ಲ, ಬಹಳ ಪ್ರಚೋದನಕಾರಿಯಾಗಿದೆ. ಅಂತಹ ಹಾಡನ್ನು ಹೇಗೆ ಬಿಡುವುದಕ್ಕೆ ಸಾಧ್ಯ? ಎಲ್ಲವನ್ನೂ ಬಿಟ್ಟು ಬಿಡೋಕೆ ನಾವು ಸ್ಪೇನ್​ ಅಥವಾ ಸ್ವೀಡನ್​ನಲ್ಲಿ ಇಲ್ಲ. ನಾವಿರೋದು ಭಾರತದಲ್ಲಿ. ಇಂಥದ್ದನ್ನೆಲ್ಲಾ ಸೆನ್ಸಾರ್ ಮಾಡುವಾಗ ಸ್ವಲ್ಪ ವಿವೇಚನೆ ಇರಬೇಕು. ಪ್ರಚೋದಿಸುವಂತಹ ಚಿತ್ರಗಳನ್ನು ಸೆನ್ಸಾರ್​ ಬೋರ್ಡ್​ ಪಾಸ್​ ಮಾಡಬಾರದು. ಆ ಹಾಡು ಯುವಕರ ನಿದ್ದೆ ಗೆಡಿಸುವುದಷ್ಟೇ ಅಲ್ಲ, ಹಾದಿ ತಪ್ಪಿಸುತ್ತದೆ. ಆ ಹಾಡು ಓಟಿಟಿಗೆ ಮಾಡಿದ್ದಲ್ಲ, ಚಿತ್ರಮಂದಿರಕ್ಕೆ ಮಾಡಿದ್ದು? ಇದನ್ನು ಸೆನ್ಸಾರ್​ನವರು ಬಿಡುವುದಕ್ಕೆ ಹೇಗೆ ಸಾಧ್ಯ?’ ಎಂದು ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಮೊದಲ ದಿನ ‘ಅವತಾರ್ 2​’ ಚಿತ್ರ ಭಾರತದಲ್ಲಿ ಗಳಿಸಿದ್ದೆಷ್ಟು ಗೊತ್ತಾ?

    ‘ಪಠಾಣ್​’ ಚಿತ್ರದಲ್ಲಿ ಶಾರೂಖ್​ ಖಾನ್​, ದೀಪಿಕಾ ಪಡುಕೋಣೆ, ಜಾನ್​ ಅಬ್ರಹಾಂ ಮುಂತಾದವರು ನಟಿಸಿದ್ದು, ಸಿದ್ಧಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಯಶ್​ರಾಜ್​ ಫಿಲಂಸ್​ ನಿರ್ಮಿಸಿದೆ.

    ಧನಂಜಯ್​ ಯಾಕೆ ಅಷ್ಟೊಂದು ಸಿನಿಮಾಗಳನ್ನು ಮಾಡ್ತಾರೆ? ಅವರೇ ಉತ್ತರ ಹೇಳ್ತಾರೆ ಕೇಳಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts