More

    “ಅಯ್ಯಪ್ಪಸ್ವಾಮಿ ಭಕ್ತರನ್ನು ಲಾಠಿಗಳಿಂದ ಸ್ವಾಗತಿಸಲಾಗಿದೆ” – ಕೇರಳದಲ್ಲಿ ಮೋದಿ

    ತಿರುವನಂತಪುರಂ : ಏಪ್ರಿಲ್ 6 ರಂದು ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯಲಿರುವ ಕೇರಳದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪರ ಪ್ರಚಾರ ಮಾಡಿದರು. ಕೇರಳದಲ್ಲಿ ಯುಡಿಎಫ್​ ಮತ್ತು ಎಲ್​ಡಿಎಫ್​ಗಳು ಏಳು ಪಾಪಗಳನ್ನು ಮಾಡಿವೆ ಎನ್ನುತ್ತಾ ವಾಕ್​ಪ್ರಹಾರ ನಡೆಸಿದರು.

    ಕೇರಳದ ಪತ್ತಣಂತಿಟ್ಟದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ಅವರು (ಎಲ್​ಡಿಎಫ್​ ಮತ್ತು ಯುಡಿಎಫ್)​ ವಂಶಪಾರಂಪರ್ಯವಾದ ರಾಜಕಾರಣವನ್ನು ಉತ್ತೇಜಿಸುತ್ತಾರೆ. ಎರಡೂ ಮೈತ್ರಿಗಳಲ್ಲಿ ಡೈನಾಸ್ಟಿ ಆಳ್ವಿಕೆಯ ವ್ಯಾಮೋಹವಿದೆ, ಉಳಿದಂತೆ ಎಲ್ಲವನ್ನೂ ಬದಿಗೊತ್ತಿ ಬಿಡುತ್ತಾರೆ” ಎಂದರು.

    ಇದನ್ನೂ ಓದಿ: “ಡೊನಾಲ್ಡ್ ಟ್ರಂಪ್ ರೀತಿಯಲ್ಲಿ ವರ್ತಿಸುತ್ತಿರುವ ಮಮತಾ”

    “ಈ ದಬ್ಬಾಳಿಕೆಯ ವಿರುದ್ಧ ಜನರು ಒಗ್ಗಟ್ಟಿನ ಸಂದೇಶ ಕಳುಹಿಸುತ್ತಿರುವುದನ್ನು ನಾನು ಕೇರಳದಲ್ಲಿ ಇಂದು ಕಾಣುತ್ತಿದ್ದೇನೆ. ಜನರು ಬಿಜೆಪಿಯ ಅಭಿವೃದ್ಧಿಯ ಪ್ರಣಾಳಿಕೆಯನ್ನು ನೋಡುತ್ತಿದ್ದಾರೆ, ನಮ್ಮ ನೀತಿಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ” ಎಂದು ಮೋದಿ ಹೇಳಿದರು. ನಾಲ್ಕು ದಶಕಗಳಿಂದ ಎಲ್​ಡಿಎಫ್​ ಇಲ್ಲವೇ ಯುಡಿಎಫ್​ನ ಸರ್ಕಾರ ಕೇರಳದಲ್ಲಿದ್ದು, ಜನರಿಗೆ ಸಾಕಾಗಿದೆ. ಈ ಬಾರಿ ಬಿಜೆಪಿ ಮತ್ತು ಎನ್​ಡಿಎ ಸರ್ಕಾರ ಎಂದು ನಿರ್ಧರಿಸಿದ್ದಾರೆ ಎಂದರು.

    ತಮ್ಮ ಭಾಷಣವನ್ನು ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಮೂರು ಸಲಿ ಘೋಷಣೆ ಕೂಗುತ್ತಾ ಆರಂಭಿಸಿದ ಮೋದಿ ಅವರು, “ಕೇರಳದಲ್ಲಿ ಎಲ್​ಡಿಎಫ್​ ಸರ್ಕಾರ ಏನು ಮಾಡಿದೆ? ಮೊದಲು ಕೇರಳದ ಚಿತ್ರವನ್ನು ವಿರೂಪಗೊಳಿಸಲು ಪ್ರಯತ್ನಿಸಿದರು, ನಂತರ ತಮ್ಮ ಏಜೆಂಟರ ಮೂಲಕ ಪವಿತ್ರ ಸ್ಥಳಗಳನ್ನು ನಾಶಪಡಿಸಿದರು. ಹೂವಿನೊಂದಿಗೆ ಸ್ವಾಗತಿಸಬೇಕಾದ ಭಗವಾನ್ ಅಯ್ಯಪ್ಪನ ಭಕ್ತರನ್ನು ಲಾಠಿಗಳೊಂದಿಗೆ ಸ್ವಾಗತಿಸಲಾಗಿದೆ; ಅವರು ಕ್ರಿಮಿನಲ್​ಗಳಲ್ಲ” ಎಂದರು.

    ಇದನ್ನೂ ಓದಿ: ಈ ಮಹಾನಗರದಲ್ಲಿ ಎತ್ತರದ ಕಟ್ಟಡಗಳಲ್ಲಿ ವಾಸಿಸುವವರಿಗಿಂತ ಕೊಳೆಗೇರಿ ನಿವಾಸಿಗಳೇ ವಾಸಿ!: ಹೀಗಂದಿದ್ಯಾರು, ಯಾಕೆ?

    ಜೊತೆಗೆ ಮೆಟ್ರೊಮ್ಯಾನ್ ಈ.ಶ್ರೀಧರನ್ ಅವರ ಬಗ್ಗೆ ಉಲ್ಲೇಖಿಸುತ್ತಾ, “ಬಿಜೆಪಿ ಸುಶಿಕ್ಷಿತ ಜನರವನ್ನು ರಾಜಕೀಯಕ್ಕೆ ತರುವಂತಹ ಪಕ್ಷ. ಅವರು ಎಷ್ಟೊಂದು ಕೆಲಸ ಮಾಡಿದ್ದಾರೆ. ಈಗ ಸಮಾಜದ ಸೇವೆ ಮಾಡಲು ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ” ಎಂದರು. (ಏಜೆನ್ಸೀಸ್)

    ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಒತ್ತಾಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

    ಟೆನ್ನಿಸ್ ದಿಗ್ಗಜ ರೋಜರ್ ಫೆಡರರ್ ಜನ್ಮದಿನಕ್ಕೆ ಸ್ವಿಸ್ ಜನರ ಕಾಣಿಕೆ ಏನು ಗೊತ್ತೆ ?!

    ಪ್ರಿಯಾಂಕಾ ಗಾಂಧಿ ಚುನಾವಣಾ ಪ್ರವಾಸ ರದ್ದು; ಕಾರಣ ಏನು ಗೊತ್ತೆ ?

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts