More

    ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಒತ್ತಾಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

    ದಾವಣಗೆರೆ: ರಾಜ್ಯದಲ್ಲಿ‌ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕು ಎಂದು ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಕುರುಬರ ವಿದ್ಯಾವರ್ಧಕ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ಪಕ್ಷದಲ್ಲಿರುವರೇ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುವ ಬಗ್ಗೆ ದೂರುತ್ತಿದ್ದಾರೆ. ಅಂದ್ರೆ, ಸರ್ಕಾರದ ವಿರುದ್ಧ ಹೇಳುತ್ತಿರುವರು ಸತ್ಯ ಹೇಳುತ್ತಿದ್ದಾರೆ ಅಂತಾ ಆಯ್ತು. ಕೂಡಲೇ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

    ಯಡಿಯೂರಪ್ಪ ಸರ್ಕಾರದಲ್ಲಿ ವಿದ್ಯಾಸಿರಿ‌ ಯೋಜನೆ ಸ್ಥಗಿತಗೊಂಡಿದೆ. ಅನ್ನಭಾಗ್ಯಕ್ಕೆ ಕತ್ತರಿ ಬಿದ್ದಿದೆ. ಇಂದಿರಾ ಕ್ಯಾಂಟೀನ್ ಬಂದ್ ಮಾಡುವ ಹಂತಕ್ಕೆ ತಂದಿದ್ದಾರೆ. ಬಡವರು, ಎರಡು ಹೊತ್ತು‌ ಊಟ ಮಾಡೋದು ಬಿಜೆಪಿ ಸರ್ಕಾರಕ್ಕೆ ಇಷ್ಟವಿಲ್ಲ ಎಂದರು.

    ದಿವಂಗತ ಮಾಜಿ ಸಂಸದ ಚನ್ನಯ್ಯ ಒಡೆಯರ್ ನಂತರ ಈವರೆಗೆ ಕುರುಬ ಸಮಾಜದವರು ಸಂಸದರಾಗಿಲ್ಲ. ನಮ್ಮಲ್ಲಿ ಅನೇಕರು ಶಿಕ್ಷಣದಿಂದ ವಂಚಿತರಾಗಿದ್ರು. ಗುಲಾಮಗಿರಿ ಅಂತ್ಯಕ್ಕೆ ಶಿಕ್ಷಣ ಅತ್ಯಗತ್ಯ. ಎಲ್ಲರೂ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹೇಳಿದರು.

    ಕರೊನಾ ಮಾರ್ಗಸೂಚಿ ಎರ್ರಾಬಿರ್ರಿ ಮಾಡಿದ್ರೆ ಹುಷಾರ್​, ಸರ್ಕಾರಕ್ಕೇ ಎಚ್ಚರಿಕೆ ನೀಡಿದ ಡಿಕೆಶಿ!

    ಸಿಡಿ ಲೇಡಿ ಪರವಾಗಿ ಕೋರ್ಟ್​ನಲ್ಲಿ ವಾದಿಸುತ್ತಿರುವುದು ಜಗದೀಶ್ ಅಲ್ಲ, ಸುಮ್ಮನೇ ಬೀದಿ ರಂಪಾಟ: ಎಸ್​ಐಟಿ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts