More

    ರಾಮನೇ ಆಯ್ಕೆ ಮಾಡಿರುವ ಭಕ್ತ ಮೋದಿ: ಆಡ್ವಾಣಿ ಪ್ರಶಂಸೆ

    ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದು ವಿಧಿ ಲಿಖಿತವೇ ಆಗಿತ್ತು ಎಂದು ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಸಂತಸ ವ್ಯಕ್ತಪಡಿಸಿದ್ದಾರೆ.

    ಗುಜರಾತ್‌ನ ಸೋಮನಾಥದಲ್ಲಿ 1990ರ ಸೆಪ್ಟೆಂಬರ್‌ 25ರಂದು ಆರಂಭವಾದ ವಿವಾದಾತ್ಮಕ ರಥಯಾತ್ರೆಯನ್ನು ಮುನ್ನಡೆಸಿದ “ಸಾರಥಿ” ತಾವೇ ಎಂಬ ಅಡ್ವಾಣಿ ಹೇಳಿದ್ದಾರೆ. ಇದಾದ ನಂತರ 1992ರ ಡಿಸೆಂಬರ್ 6ರಂದು ಅಡ್ವಾಣಿ ಅವರ ಉಪಸ್ಥಿತಿಯಲ್ಲಿಯೇ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಲಾಗಿತ್ತು.

    “ಎಲ್ಲಾ ಭಾರತೀಯರನ್ನು ಭಗವಾನ್ ರಾಮನ ಗುಣಗಳನ್ನು ಅಳವಡಿಸಿಕೊಳ್ಳಲು ಈ ದೇವಾಲಯ ಪ್ರೇರೇಪಿಸುತ್ತದೆ” ಎಂದು ಅವರು ಆಶಿಸಿದ್ದಾರೆ.

    “ಸೆಪ್ಟೆಂಬರ್ 1990ರ ರಥ ಯಾತ್ರೆಯ ಸಮಯದಲ್ಲಿಯೇ ನಾನು, ಅಯೋಧ್ಯೆಯಲ್ಲಿ ಒಂದು ದಿನ ಭವ್ಯವಾದ ರಾಮ ಮಂದಿರವನ್ನು ನಿರ್ಮಿಸುವುದು ಎಂದು ವಿಧಿ ಲಿಖಿತವಾಗಿದೆ ಎಂದು ಭಾವಿಸಿದ್ದೆ, … ಈಗ ಇದು ಕೆಲ ಕಾಲದಲ್ಲಿಯೇ ನೆರವೇರಲಿದೆ. ಈ ರಥಯಾತ್ರೆ ಪ್ರಾರಂಭವಾದ ಕೆಲವೇ ದಿನಗಳಲ್ಲಿ, ನಾನು ಕೇವಲ ಸಾರಥಿ ಎಂದು ಅರಿತುಕೊಂಡಿದ್ದೆ. ಅದು ರಾಮನ ಜನ್ಮಸ್ಥಳಕ್ಕೆ ಹೋಗುತ್ತಿರುವ ಕಾರಣ ಅದು ಪೂಜೆಗೆ ಅರ್ಹವಾದ ‘ರಥ’ವಾಗಿತ್ತು” ಎಂದು ಅವರು ಹೇಳಿದರು.

    ಪತ್ರಿಕೆಯೊಂದರ ಜತೆ ಮಾತನಾಡಿದ ಅವರು, ಅವರು ಪ್ರಧಾನ ಮಂತ್ರಿಯವರಿಗೆ ತಮ್ಮ ಅಭಿನಂದನೆಗಳನ್ನು ಅರ್ಪಿಸಿದರು. ಮೋದಿ ಅವರನ್ನು ಉಲ್ಲೇಖಿಸಿದ ಅವರು, “ಈ ದೇವಾಲಯವನ್ನು ನವೀಕರಿಸಲು ಭಗವಾನ್ ರಾಮನಿಂದ ಆಯ್ಕೆಯಾದ ಭಕ್ತ” ಎಂದು ಕರೆದರು.

    “ನಾವು ಯಾತ್ರೆಯನ್ನು ಪ್ರಾರಂಭಿಸಿದ ಭಗವಾನ್ ರಾಮನ ಮೇಲಿನ ನಮ್ಮ ನಂಬಿಕೆಯು ದೇಶದಲ್ಲಿ ಒಂದು ಚಳವಳಿ ರೂಪವನ್ನು ತೆಗೆದುಕೊಳ್ಳುತ್ತದೆ ಎಂದು ನಮಗೆ ಆಗ ತಿಳಿದಿರಲಿಲ್ಲ ” ಎಂದು ಅವರು ಹೇಳಿದರು,

    “ಯಾತ್ರೆಯ ಸಮಯದಲ್ಲಿ ನನ್ನ ಜೀವನದ ಮೇಲೆ ಪ್ರಭಾವ ಬೀರಿದ ಅನುಭವಗಳು ಹಲವಾರು. ದೂರದ ಹಳ್ಳಿಗಳಿಂದ ಅಪರಿಚಿತ ಹಳ್ಳಿಗರು ರಥವನ್ನು ನೋಡಿ ಭಾವೋದ್ವೇಗಕ್ಕೆ ಒಳಗಾಗಿ ನನ್ನ ಬಳಿಗೆ ಬಂದರು. ಅವರು ನಮಸ್ಕರಿಸುತ್ತಾ, ‘ರಾಮ’ ಎಂದು ಜಪಿಸುತ್ತಾ ಹೋದರು. ರಾಮ ಮಂದಿರದ ಕನಸು ಕಂಡವರು ಬಹಳ ಜನ ಇದ್ದಾರೆ ಎಂದು” ಎಂದು ಅವರು ರಥಯಾತ್ರೆಯ ದಿನಗಳನ್ನು ಸ್ಮರಿಸಿದರು.

    ಅಡ್ವಾಣಿ ಅವರು ಜನವರಿ 22 ರ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದು ಈ ವಾರದವರೆಗೂ ಅನಿಶ್ಚಿತವಾಗಿತ್ತು, ಅದರೆ, 96 ವರ್ಷ ವಯಸ್ಸಿನ ಅಡ್ವಾಣಿ ಅವರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ನಾಯಕ ಅಲೋಕ್ ಕುಮಾರ್ ಖಚಿತಪಡಿಸಿದ್ದಾರೆ.

    3ನೇ ತ್ರೈಮಾಸಿಕದಲ್ಲಿ ರೂ 4,350 ಕೋಟಿ ಲಾಭ ಗಳಿಸಿದ ಎಚ್​ಸಿಎಲ್​: ಶಿವ ನಾಡರ್ ಈ​ ಕಂಪನಿ ಆರಂಭಿಸಿದ್ದು ಗ್ಯಾರೇಜ್​ನಲ್ಲಿ…

    ಮೂರನೇ ತ್ರೈಮಾಸಿಕ: ವಿಪ್ರೊ ಲಾಭ ಶೇಕಡಾ 12ರಷ್ಟು ಕುಸಿತ

    ಸ್ಮಾಲ್ ಕ್ಯಾಪ್‌ನಿಂದ ಮಿಡ್ ಕ್ಯಾಪ್​ಗೆ ಬಡ್ತಿ: ಈ ಸ್ಟಾಕ್​ಗಳನ್ನು ನೀವು ಹೊಂದಿದ್ದರೆ ಭರ್ಜರಿ ಲಾಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts