More

    ಹೈಡ್ರೋಜನ್​ ಬಲೂನ್​ಗಳ ಜತೆ ನಾಯಿಯನ್ನು ಕಟ್ಟಿ ಹಾರಲು ಬಿಟ್ಟ ಯೂಟ್ಯೂಬರ್​ ಅರೆಸ್ಟ್​!

    ನವದೆಹಲಿ: ಮಹಾಮಾರಿ ಕರೊನಾ ವೈರಸ್​ನಿಂದ ಇಡೀ ವಿಶ್ವವೇ ತತ್ತರಿಸಿದರೂ ಕೆಲವರಿಗೆ ಇನ್ನು ಮಾತ್ರ ತಿಳುವಳಿಕೆ ಬಂದಿಲ್ಲ. ದೆಹಲಿ ಮೂಲದ ಯೂಟ್ಯೂಬರ್​ ಓರ್ವ ಹೈಡ್ರೋಜನ್​ ತುಂಬಿದ ಬಲೂನ್​ಗಳ ಜತೆಯಲ್ಲಿ ನಾಯಿಯನ್ನು ಕಟ್ಟಿ ಆಕಾಶದಲ್ಲಿ ಹಾರಿಸುವ ಮೂಲಕ ಅಮಾನವೀಯತೆ ಪ್ರದರ್ಶಿಸಿ, ಇದೀಗ ಜೈಲು ಪಾಲಾಗಿದ್ದಾನೆ.

    ಆರೋಪಿಯನ್ನು ಗೌರವ್​ ಜಾನ್​ ಎಂದು ಗುರುತಿಸಲಾಗಿದೆ. ತನ್ನ ಯೂಟ್ಯೂಬ್​ ಚಾನೆಲ್​ಗಾಗಿ ಸಾಕುನಾಯಿಯ ಜೀವವನ್ನು ಪಣಕ್ಕಿಟ್ಟು ಉದ್ಧಟತನ ಪ್ರದರ್ಶಿಸಿದ್ದಾನೆ. ದೆಹಲಿಯ ಪಾರ್ಕ್​ ಒಂದರಲ್ಲಿ ಅನೇಕ ಹೈಡ್ರೋಜನ್​ ಬಲೂನ್​ಗಳ ಜತೆಯಲ್ಲಿ ನಾಯಿಯನ್ನು ಕಟ್ಟಿ ಹಾರಾಡಲು ಬಿಟ್ಟಿದ್ದನು.

    ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಗೌರವ್​ ಅಪ್​ಲೋಡ್​ ಮಾಡಿದ್ದ. ವಿಡಿಯೋ ಪ್ರಾಣಿ ಹಕ್ಕುಗಳ ಸಂಸ್ಥೆಯ ಗಮನಕ್ಕೆ ಬಂದು, ದೂರು ನೀಡಿದ ಬಳಿಕ ವಿಡಿಯೋವನ್ನು ಯೂಟ್ಯೂಬ್​ನಿಂದ ಡಿಲೀಟ್​ ಮಾಡಲಾಗಿದೆ.

    ಗೌರವ್​ ವಿರುದ್ಧ ಮಾಳವೀಯ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪೀಪಲ್​ ಫಾರ್​ ಅನಿಮಲ್​ (ಪಿಎಫ್​ಎ) ಸಂಸ್ಥೆ ವಿಡಿಯೋ ನೋಡಿ ಸಮಸ್ಯೆಯನ್ನು ಬೆಳಕಿಗೆ ತಂದಿದ್ದರು. ಇದೀಗ ಪ್ರಾಣಿ ದೌರ್ಜನ್ಯ ಕಾಯ್ದೆಯ ಸೆಕ್ಷನ್​ 188, 269 ಮತ್ತು 34ರ ಅಡಿಯಲ್ಲಿ ಗೌರವ್​ ಮತ್ತು ಬೆಂಬಲ ನೀಡಿದ ಆತನ ತಾಯಿ ವಿರುದ್ಧ ದೂರು ದಾಖಲಾಗಿದೆ.

    ದೂರು ದಾಖಲಾಗುತ್ತಿದ್ದಂತೆ ಯೂಟ್ಯೂಬ್​ನಲ್ಲಿದ್ದ ಹಳೆಯ ಮತ್ತು ಹೊಸ ವಿಡಿಯೋ ಡಿಲೀಟ್​ ಮಾಡಿ, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೆವು ಎಂದು ಗೌರವ್​ ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದ. ಆದರೂ ಬಂಧನದಿಂದ ಮಾತ್ರ ಆತ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. (ಏಜೆನ್ಸೀಸ್​)

    PNB Scam: ದೇಶಬಿಟ್ಟು ಪರಾರಿಯಾಗಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಡೊಮಿನಿಕಾದಲ್ಲಿ ಬಂಧನ

    ಬಿಎಸ್​ವೈ ವಿರುದ್ಧ ಬಿಜೆಪಿಯೊಳಗೇ ಪ್ರತಿಪಕ್ಷ; ಸಿಎಂ ಬದಲಾವಣೆ ನೆಪದಲ್ಲಿ ಕಮಲವೇ ಖೆಡ್ಡಕ್ಕೆ, ಯಡಿಯೂರಪ್ಪ ಬೆನ್ನಿಗೆ ನಿಂತ ಡೆಲ್ಲಿ ವರಿಷ್ಠರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts