More

    ವಿಮಾನದಲ್ಲಿ ಪೈಲಟ್‌ಗೆ ಕಪಾಳಮೋಕ್ಷ ಮಾಡಿದ ಪ್ರಯಾಣಿಕ; ‘ನೊ-ಫ್ಲೈ ಲಿಸ್ಟ್’ಗೆ ಸೇರಿಸಲು ಸಿದ್ಧತೆ

    ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ವಿಳಂಬದ ಕುರಿತು ಘೋಷಿಸುತ್ತಿದ್ದ ಇಂಡಿಗೋ ಏರ್‌ಲೈನ್‌ನ ಪೈಲಟ್ ಮೇಲೆ ಪ್ರಯಾಣಿಕರೊಬ್ಬರು ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ಕೂಡ ಹೊರಬಿದ್ದಿದ್ದು, ಇದರಲ್ಲಿ ಪ್ರಯಾಣಿಕ ಪೈಲಟ್ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು. ಪೊಲೀಸರು ಇದೀಗ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಂಡಿಗೋ ವಿಮಾನದ ಸಹ ಪೈಲಟ್ ಅನುಪ್ ಕುಮಾರ್ ಮೇಲೆ ಹಲ್ಲೆ ನಡೆಸಿದ ಪ್ರಯಾಣಿಕನನ್ನು ಸಾಹಿಲ್ ಕಟಾರಿಯಾ ಎಂದು ಗುರುತಿಸಲಾಗಿದೆ.

    ಐಜಿಐ ಏರ್‌ಪೋರ್ಟ್ ಪೊಲೀಸರ ಪ್ರಕಾರ, ಇಂಡಿಗೋ ವಿಮಾನದ ಸಹ ಪೈಲಟ್ ಅನುಪ್ ಕುಮಾರ್ ಅವರ ದೂರಿನ ಮೇರೆಗೆ ಪೊಲೀಸರು ಐಪಿಸಿಯ ಸೆಕ್ಷನ್ 323, 341, 290 ಮತ್ತು 22 ಏರ್‌ಕ್ರಾಫ್ಟ್ ನಿಯಮಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಸ್ತುತ ಪ್ರಯಾಣಿಕ ಸಾಹಿಲ್ ಕಟಾರಿಯಾಗೆ ಸಿಆರ್‌ಪಿಸಿ 41 ರ ಅಡಿಯಲ್ಲಿ ವಿಚಾರಣೆಗಾಗಿ ನೋಟಿಸ್ ನೀಡಲಾಗಿದೆ. ಸಾಹಿಲ್ ವಿರುದ್ಧ ವಿಧಿಸಲಾಗಿರುವ ಸೆಕ್ಷನ್‌ಗಳು ಜಾಮೀನು ನೀಡಬಲ್ಲವಂತಹವು ಎಂದು ಪೊಲೀಸರು ತಿಳಿಸಿದ್ದಾರೆ.

    ದೆಹಲಿಯಿಂದ ಗೋವಾಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಗಲಾಟೆ
    ದೂರಿನ ಪ್ರಕಾರ, ಪ್ರಯಾಣಿಕ ಸಹ ಪೈಲಟ್ ಮೇಲೆ ಹಲ್ಲೆ ನಡೆಸಿ ದೆಹಲಿಯಿಂದ ಗೋವಾಗೆ ಇಂಡಿಗೋ ವಿಮಾನ ಸಂಖ್ಯೆ 6E2175 ನಲ್ಲಿ ಗಲಾಟೆ ಮಾಡಿದ್ದಾನೆ. ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘಟನೆಯ ನಂತರ ಪೈಲಟ್ ಮೇಲೆ ದಾಳಿ ಮಾಡಿದ ಪ್ರಯಾಣಿಕನ ಮೇಲೆ ಸಿಬ್ಬಂದಿ ಸದಸ್ಯರು ಕೂಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಂಜಿನಿಂದಾಗಿ ಇಂಡಿಗೋ ವಿಮಾನ ತಡವಾಯಿತು ಎಂದು ನಂಬಲಾಗಿದೆ. ಇದರಿಂದಾಗಿ ಪ್ರಯಾಣಿಕ ಕೋಪಗೊಂಡಿದ್ದಾನೆ.

    ‘ನೊ-ಫ್ಲೈ ಲಿಸ್ಟ್’ನಲ್ಲಿ ಸೇರ್ಪಡೆಗೊಳ್ಳಲು ಸಿದ್ಧತೆ
    ಪ್ರಯಾಣಿಕನ ವಿರುದ್ಧ ಇಂಡಿಗೋ ದೂರು ದಾಖಲಿಸಿದೆ ಎಂದು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಡಿಸಿಪಿ ತಿಳಿಸಿದ್ದಾರೆ. ದೂರನ್ನು ಸ್ವೀಕರಿಸಿ ಸೂಕ್ತ ಕಾನೂನು ಕ್ರಮ ಜರುಗಿಸುತ್ತಿದ್ದೇವೆ. ಈ ಬಗ್ಗೆ ತನಿಖೆ ನಡೆಸಲು ಇಂಡಿಗೋ ಆಂತರಿಕ ಸಮಿತಿಯನ್ನೂ ರಚಿಸಿದೆ. ಈ ವಿಷಯವನ್ನು ಸಮಿತಿಗೆ ಕಳುಹಿಸಲಾಗಿದೆ. ಆರೋಪಿಗಳನ್ನು ‘ನೋ-ಫ್ಲೈ ಲಿಸ್ಟ್’ಗೆ ಸೇರಿಸಿ ಕ್ರಮ ಕೈಗೊಳ್ಳಲು ಸಿದ್ಧತೆಯೂ ನಡೆದಿದೆ. 

    ಇಂದು ಭಾರತೀಯ ಸೇನೆಗೆ ಬಹಳ ವಿಶೇಷವಾದ ದಿನ; ಸೈನಿಕರಿಗೆ ಶುಭ ಹಾರೈಸಿದ ಮೋದಿ, ದ್ರೌಪದಿ ಮುರ್ಮು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts