More

    ಸೆಂಟ್ರಲ್ ವಿಸ್ತಾ ಅವೆನ್ಯೂ ​​ನಿರ್ಮಾಣ ಕಾರ್ಯಕ್ಕೆ ತಡೆ ಇಲ್ಲ : ದೆಹಲಿ ಹೈಕೋರ್ಟ್

    ನವದೆಹಲಿ : ದೆಹಲಿಯಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಸೆಂಟ್ರಲ್ ವಿಸ್ತಾ ಪ್ರಾಜೆಕ್ಟ್​ಅನ್ನು ರಾಷ್ಟ್ರೀಯ ಮಹತ್ವ ಹೊಂದಿರುವ ಅವಶ್ಯಕ ಯೋಜನೆ ಎಂದು ದೆಹಲಿ ಹೈಕೋರ್ಟ್ ಬಣ್ಣಿಸಿದೆ. ಕರೊನಾ ಉಲ್ಬಣವಾಗಿರುವ ಸಮಯದಲ್ಲಿ ಸೆಂಟ್ರಲ್​ ವಿಸ್ತಾ ಅವೆನ್ಯೂ ನಿರ್ಮಾಣ ಕಾಮಗಾರಿಗೆ ತಡೆ ನೀಡಬೇಕೆಂದು ಕೋರಿದ್ದ ರಿಟ್​ ಅರ್ಜಿಯನ್ನು ದಂಡ ವಿಧಿಸಿ ವಜಾ ಮಾಡಿದೆ.

    ಆನ್ಯ ಮಲ್ಹೋತ್ರ ಎಂಬ ಅನುವಾದಕಿ ಮತ್ತು ಸೊಹೈಲ್ ಹಶ್ಮಿ ಎಂಬ ಇತಿಹಾಸಕಾರ-ಸಾಕ್ಷ್ಯಚಿತ್ರ ನಿರ್ಮಾಪಕ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, ಯೋಜನಾ ಸ್ಥಳದಲ್ಲಿ ಕರೊನಾ ಸೂಪರ್​ಸ್ಪ್ರೆಡ್​ ಆಗುವ ಸಂಭವವಿದೆ. ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರನ್ನು ಪ್ರತಿದಿನವೂ ಸೋಂಕಿಗೆ ಒಡ್ಡಿದಂತಾಗಿದೆ ಎಂದು ಹೇಳಲಾಗಿತ್ತು. ಈ ಯೋಜನೆ ಕಾಮಗಾರಿ ಯಾವುದೇ ಅಗತ್ಯ ಸೇವೆಯಲ್ಲದಿರುವುದರಿಂದ ದೆಹಲಿಯಲ್ಲಿ ಲಾಕ್​ಡೌನ್​ ಹಿನ್ನೆಲೆಯಲ್ಲಿ ನಡೆಯುವ ಹಾಗಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

    ಇದನ್ನೂ ಓದಿ: ಲಾಕ್​ಡೌನ್​ ವೇಳೆ ಗುಟ್ಟಾಗಿ ಮದ್ವೆಯಾದ ನಟಿ ಪ್ರಣಿತಾ! ಫೋಟೋ ವೈರಲ್​ ಆದ್ರೂ ಬಾಯಿಬಿಟ್ಟಿಲ್ಲ ನಟಿ

    ಮೇ 17 ರಂದು ಅರ್ಜಿಯ ವಿಚಾರಣೆ ನಡೆಸಿ, ತೀರ್ಪಿಗೆ ಕಾಯ್ದಿರಿಸಿಕೊಳ್ಳಲಾಗಿತ್ತು. ಇಂದು ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ವಿಭಾಗೀಯ ಪೀಠವು ತನ್ನ ತೀರ್ಪು ಪ್ರಕಟಿಸಿತು. ಅರ್ಜಿಯನ್ನು ವಜಾ ಮಾಡಿದ ಹೈಕೋರ್ಟ್​, “ಇದು ಪ್ರೇರಿತವಾದ ಅರ್ಜಿಯಾಗಿದ್ದು, ನಿಜವಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲ” ಎಂದು ಅರ್ಜಿದಾರರ ಮೇಲೆ 1 ಲಕ್ಷ ರೂ.ಗಳ ವೆಚ್ಚವನ್ನು ವಿಧಿಸಿತು.

    ಸೆಂಟ್ರಲ್ ವಿಸ್ತಾ ಅವೆನ್ಯೂ ರೀಡೆವಲಪ್​ಮೆಂಟ್ ಕಾಮಗಾರಿಯು ಸೆಂಟ್ರಲ್ ವಿಸ್ತಾ ಯೋಜನೆಯ ಭಾಗವಾಗಿದ್ದು, ಸಾರ್ವಜನಿಕ ಮಹತ್ವ ಹೊಂದಿದೆ ಎಂದ ನ್ಯಾಯಪೀಠ, “ಸಂಸತ್ತಿನ ಸಾರ್ವಭೌಮ ಕಾರ್ಯಗಳನ್ನು ಸಹ ಅಲ್ಲಿ ನಡೆಸಲಾಗುವುದು ಮತ್ತು ಸಾರ್ವಜನಿಕರು ಇದರ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಮೇಲಾಗಿ ಯೋಜನೆಯ ಕಾನೂನುಬದ್ಧತೆಯನ್ನು ಸುಪ್ರೀಂ ಕೋರ್ಟ್ ಈಗಾಗಲೇ ಎತ್ತಿಹಿಡಿದಿದೆ” ಎಂದಿತು. ದೆಹಲಿ ಡಿಸಾಸ್ಟರ್​ ಮ್ಯಾನೇಜ್​ಮೆಂಟ್​ ಅಥಾರಿಟಿಯು, ಕಾರ್ಮಿಕರು ಕಾಮಗಾರಿಯ ಸ್ಥಳದಲ್ಲೇ ವಾಸಿಸುತ್ತಿರುವ ಸಂದರ್ಭದಲ್ಲಿ ನಿರ್ಮಾಣ ಚಟುವಟಿಕೆಯನ್ನು ನಿರ್ಬಂಧಿಸಿಲ್ಲ. ಹೀಗಾಗಿ “ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರೆಲ್ಲಾ ಸ್ಥಳದಲ್ಲೇ ನೆಲೆಸಿರುವುದರಿಂದ ಅದಕ್ಕೆ ತಡೆ ವಿಧಿಸುವ ಪ್ರಶ್ನೆ ಇಲ್ಲ” ಎಂದಿತು.

    ಇದನ್ನೂ ಓದಿ: ಕರೊನಾ : ಹೊಸ ಪ್ರಕರಣಗಳಿಗಿಂತ ಗುಣಮುಖರ ಸಂಖ್ಯೆ ಅಧಿಕ

    ಸೆಂಟ್ರಲ್ ಅವೆನ್ಯೂ ಕಾರ್ಯ ನವೆಂಬರ್​ಗೆ ಮುಂಚೆ ಪೂರ್ಣಗೊಳ್ಳಬೇಕಿದ್ದು, ಸಮಯವು ಒಪ್ಪಂದದ ಮೂಲತತ್ವವಾಗಿದೆ. ಆದ್ದರಿಂದ ನಿಗದಿತ ವೇಳಾಪಟ್ಟಿಯೊಳಗೆ ಕೆಲಸವನ್ನು ಪೂರ್ಣಗೊಳಿಸಬೇಕಾಗುತ್ತದೆ ಎಂದ ಕೋರ್ಟ್, “ಕಾರ್ಮಿಕರು ಸ್ಥಳದಲ್ಲೇ ಉಳಿದುಕೊಂಡಿದ್ದು, ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ; ಕೋವಿಡ್​ ಪ್ರೋಟೋಕಾಲ್​ಗಳನ್ನು ಪಾಲಿಸುತ್ತಾ ಕೋವಿಡ್​ಗೆ ಸೂಕ್ತವಾದ ನಡವಳಿಕೆ ಅನುಸರಿಸಲಾಗುತ್ತಿದೆ ಎಂದ ಮೇಲೆ ನ್ಯಾಯಾಲಯವು ಈ ಯೋಜನೆಯನ್ನು ನಿಲ್ಲಿಸಲು ಯಾವುದೇ ಕಾರಣಗಳಿಲ್ಲ” ಎಂದಿತು. (ಏಜೆನ್ಸೀಸ್)

    ಸೋಂಕು ಕಡಿಮೆ ಆಗ್ತಿದೆ, ಈಗ ಮೈಮರೆಯಬೇಡಿ : ಗೃಹ ಸಚಿವ ಬೊಮ್ಮಾಯಿ

    ಬಿಗ್​ಬಾಸ್​ ಸ್ಪರ್ಧಿ ನಟಿ ಯುವಿಕ ಚೌಧರಿ ವಿರುದ್ಧ ಅಟ್ರೊಸಿಟೀಸ್​ ಕೇಸು

    ಮತ್ತೆ ಏರಿತು ಪೆಟ್ರೋಲ್-ಡೀಸೆಲ್ ದರ : ಈ ಮಹಾನಗರದಲ್ಲಿ ದಾಟಿತು ಶತಕ !

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts