More

    LIVE: ದೆಹಲಿ ವಿಧಾನಸಭೆ ಚುನಾವಣೆ-ಮತ ಎಣಿಕೆ; ಕೇಜ್ರಿವಾಲ್​ರನ್ನು ಅಭಿನಂದಿಸಿದ ಪ್ರಧಾನಿ ಮೋದಿ​

     

    ಬಹಳಷ್ಟು ಕುತೂಹಲ ಕೆರಳಿಸಿರುವ ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಿದೆ. ಫೆಬ್ರವರಿ 8ರಂದು ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಒಟ್ಟು ಮತದಾನ ಪ್ರಮಾಣ ಶೇಕಡ 62.59 ಆಗಿತ್ತು ಎಂದು ಚುನಾವಣಾ ಆಯೋಗ ಘೋಷಿಸಿತ್ತು. 2015ಕ್ಕೆ ಹೋಲಿಸಿದರೆ ಇದು ಶೇಕಡ 5 ಕಡಿಮೆ. ಎಕ್ಸಿಟ್ ಪೋಲ್​ಗಳಲ್ಲಿ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ ಮತ್ತೆ ಅಧಿಕಾರದ ಗದ್ದುಗೆ ಏರಲಿದ್ದಾರೆ. ಆದರೆ, ಮತದಾರರು ಯಾರನ್ನು ಗದ್ದುಗೆ ಕೂರಿಸುತ್ತಾರೆ ಎಂಬುದು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.
    ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಪೂರ್ವ ದೆಹಲಿಯ ತ್ರಿಲೋಕಪುರಿ, ಕೊಂಡ್ಲಿ, ಪಾತ್​ಪರಗಂಜ್​, ಲಕ್ಷ್ಮಿನಗರ, ಕೃಷ್ಣನಗರ, ಗಾಂಧಿನಗರ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಅಕ್ಷರಧಾಮ್​ ಟೆಂಪಲ್ ಸಮೀಪದ ಕಾಮನ್​ ವೆಲ್ತ್​ ಗೇಮ್ಸ್​ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ನಲ್ಲಿ ನಡೆಯಲಿದೆ. ಇದೇ ರೀತಿ ನೈಋತ್ಯ ದೆಹಲಿಯ ವಿಕಾಸಪುರಿ, ಮಟಿಯಾಲ, ನಜಾಫ್​ಗಢ, ಪಾಲಂ, ಉತ್ತಮ್ ನಗರ, ದ್ವಾರಕಾ, ಬಿಜ್ವಾಸಾನ್​ಗಳ ಮತ ಎಣಿಕೆ ದ್ವಾರಕಾ ಸೆಕ್ಟರ್ 9ರ ಐಐಟಿಯಲ್ಲಿ, ಎಸ್​ಸಿಇಆರ್​ಟಿ ದ್ವಾರಕಾ ಸೆಕ್ಟರ್ 6ರಲ್ಲಿ ಉಳಿದವುಗಳ ಮತ ಎಣಿಕೆ ನಡೆಯಲಿದೆ. ಮತ ಎಣಿಕೆಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

    06.45 PM: ದೆಹಲಿ ವಿಧಾನಸಭೆಯಲ್ಲಿ ಭರ್ಜರಿ ಜಯ ದಾಖಲಿಸಿದ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

    05.51 PM: ದೆಹಲಿ ವಿಧಾನಸಭೆಯಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಪೂಜೆ ಸಲ್ಲಿಸಲು ಆಂಜನೇಯಸ್ವಾಮಿ ದೇವಾಲಯಕ್ಕೆ ತೆರಳಿದರು.

    05.12 PM: ದೆಹಲಿಯಲ್ಲಿ ಅಧಿಕ ಅಭಿವೃದ್ಧಿಗಾಗಿ ಜನರು ನಿರೀಕ್ಷೆ ಹೊಂದಿದ್ದಾರೆ. ಸಿಎಂ ಕೇಜ್ರಿವಾಲ್​ ಅಭಿವೃದ್ಧಿ ಕಡೆಗಣಿಸಬಾರದು, ಕೇಜ್ರಿವಾಲ್​ಗೆ ಅಭಿನಂದನೆಗಳು: ಸುದ್ದಿಗೋಷ್ಠಿಯಲ್ಲಿ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್​ ತಿವಾರಿ.

    03.45 PM: ಪಕ್ಷದ ಗೆಲುವು ಹೊಸ ರಾಜಕೀಯ ಯುಗವನ್ನು ಸೃಷ್ಟಿಸಿದೆ. ಅಭಿವೃದ್ಧಿಗಾಗಿ ದೆಹಲಿ ಜನರು ಆಮ್​ ಆದ್ಮಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ ಸಿಎಂ ಅರವಿಂದ್​ ಕೇಜ್ರಿವಾಲ್​

    02.55 PM: ಆಮ್​ ಆದ್ಮಿ ಪಕ್ಷದ ಮನೀಷ್​ ಸಿಸೋಡಿಯಾ ಅವರು ಅಂತಿಮವಾಗಿ ಜಯಗಳಿಸಿದ್ದಾರೆ.     

    02.25 PM: 13ನೇ ಸುತ್ತಿನ ಎಣಿಕೆಯ ನಂತರ ಆಮ್ ಆದ್ಮಿ ಪಕ್ಷದ ಮನೀಷ್​ ಸಿಸೋಡಿಯಾ 3129 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

    02.13 PM: ಇಂದು ಅರವಿಂದ ಕೇಜ್ರಿವಾಲ ಅವರಿಗೆ ಡಬಲ್​ ಧಮಾಕ. ಅವರ ಪತ್ನಿ ಸುನೀತಾ ಅವರ ಹುಟ್ಟುಹಬ್ಬ.  ಗೆಲುವಿನ ಸಂಭ್ರಮದಲ್ಲಿರುವ ಸಿಎಂ ಮಡದಿ ಜತೆ ಕೇಕ್​ ಕಟ್​ ಮಾಡಿ ಸಂಭ್ರಮಿಸಿದರು.

    02.05 PM: 10ನೇ ಸುತ್ತಿನ ಎಣಿಕೆಯ ನಂತರ ಆಮ್ ಆದ್ಮಿ ಪಕ್ಷದ ಮನೀಷ್​ ಸಿಸೋಡಿಯಾ 1223 ಮತಗಳಿಂದ ಬಿಜೆಪಿಯ ರವಿ ನೇಗಿ ಅವರಿಗಿಂತ ಹಿಂದಿದ್ದಾರೆ.

    02.00 PM: ದೆಹಲಿಯ ಫಲಿತಾಂಶವನ್ನು ಸ್ವೀಕರಿಸುತ್ತೇವೆ. ಮುಂದಿನ ಚುನಾವಣೆಗಾಗಿ ಒಳ್ಳೆಯ ಕೆಲಸ ಮಾಡುತ್ತೇವೆ. ಈ ಚುನಾವಣೆಯಲ್ಲಿ ಶಿಕ್ಷಣ ಮತ್ತು ಅಭಿವೃದ್ಧಿಗಳೇ ವಿಷಯಗಳಾಗಿದ್ದರೆ ಶಿಕ್ಷಣ ಸಚಿವ ಮನೀಷ್​ ಸಿಸೋಡಿಯಾ ಗೆಲುವಿಗೆ ಏಕೆ ಇಷ್ಟು ಕಷ್ಟ ಪಡಬೇಕಿತ್ತು? ಎಂದು ಬಿಜೆಪಿ ಸಂಸದ ಪರ್ವೆಶ್​ ವರ್ಮಾ ಪ್ರಶ್ನಿಸಿದ್ದಾರೆ.

    01.37 PM: ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಆರನೇ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ.

    01.26 PM: ಆಪ್​ 57 ಮತ್ತು ಬಿಜೆಪಿ 13 ಸ್ಥಾನಗಳಲ್ಲಿ ಮುನ್ನಡೆ.

    01.19 PM: “ಈ ಫಲಿತಾಂಶವನ್ನು ನಾವು ಒಪ್ಪುತ್ತೇವೆ. ಅರವಿಂದ ಕೇಜ್ರಿವಾಲ ಅವರಿಗೆ ಮತ್ತು ದೆಹಲಿ ಜನತೆಗೆ ಅಭಿನಂದನೆಗಳು. ನಮ್ಮ ಪ್ರಯತ್ನ ನಾವು ಮಾಡಿದ್ದೇವು. ನಾವು ದೆಹಲಿ ಮತದಾರರ ಮನವೊಲಿಸುವಲ್ಲಿ ಸೋತಿದ್ದೇವೆ. ಸಿಎಂ ಕೇಜ್ರಿವಾಲ ಅವರಿಂದ ದೆಹಲಿ ಅಭಿವೃದ್ಧಿಯಾಗುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಬಿಜೆಪಿ ಸಂಸದ ಗೌತಮ್​ ಗಂಭೀರ್​ ಹೇಳಿದರು.

    01.00 PM: ಆಪ್​ ಕಚೇರಿಯಲ್ಲಿ ದೆಹಲಿ ಮುಖ್ಯಮಂತ್ರಿ ಜತೆ ರಾಜಕೀಯ ತಂತ್ರಜ್ಞ ಪ್ರಶಾಂತ್​ ಕಿಶೋರ್​ ಸಂಭ್ರಮದಲ್ಲಿ ಭಾಗಿಯಾದರು. 

    12.58 AM: ಆಪ್​ನ ಗೆಲುವಿನ ಓಟಕ್ಕೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿನಂದಿಸಿದ್ದಾರೆ. “ಅಭಿವೃದ್ಧಿ ಮಾತ್ರ ಕೆಲಸ ಮಾಡುವುದು. ದೆಹಲಿ ಜನತೆ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಸಿಎಎ, ಎನ್​ಆರ್​ಸಿ ಮತ್ತು ಎನ್​ಪಿಆರ್​ ತಿರಸ್ಕಾರವಾಗಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

    12.46 AM: ಆಪ್​ನ ಕಚೇರಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರು ಇತರ ಮುಖಂಡರೊಡನೆ ಚರ್ಚಿಸಿದರು. ಸದ್ಯ ಆಪ್​ 56 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

    12.35 AM: ಆಪ್​ ಸಂಸದ ಸಂಜಯ್​ ಸಿಂಗ್​ ಮತ್ತು ಮುಖಂಡರಾದ ಎನ್​.ಡಿ.ಗುಪ್ತಾ ಹಾಗೂ ಸುಶೀಲ್​ ಗುಪ್ತಾ ಆಪ್​ ಕಚೇರಿಯ ಸಂಭ್ರಮಾಚರಣೆಯಲ್ಲಿ ಭಾಗಿಯಾದರು. ಈ ವೇಳೆ “ಇಂದು ಹಿಂದುಸ್ತಾನಿನ ಗೆಲುವಾಯಿತು” ಎಂದು ಸಂಜಯ್​ ಸಿಂಗ್​ ಅಭಿಪ್ರಾಯ ವ್ಯಕ್ತಪಡಿಸಿದರು.

    12.17 AM: ನಮಗೆ ಕಾಂಗ್ರೆಸ್​ ಸ್ಥಿತಿಯ ಬಗ್ಗೆ ಅರಿವಿದೆ. ಆದರೆ ಮುಖ್ಯ ಪ್ರಶ್ನೆ ಎಂದರೆ ದೊಡ್ಡ ದೊಡ್ಡ ಮಾತುಗಳಾನ್ನಾಡುತ್ತಿದ್ದ ಬಿಜೆಪಿಗೆ ಏನಾಯಿತು? ಎಂದು ಟಾಂಗ್​ ನೀಡಿದ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್​ನಾಥ್​.

    12.17 AM: ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಬಿಜೆಪಿಯ ರವೀಂದರ್ ಸಿಂಗ್ ನೇಗಿ ಅವರ ನಡುವೆ  ತೀವ್ರ ಸೆಣಸಾಟ.

    LIVE: ದೆಹಲಿ ವಿಧಾನಸಭೆ ಚುನಾವಣೆ-ಮತ ಎಣಿಕೆ; ಕೇಜ್ರಿವಾಲ್​ರನ್ನು ಅಭಿನಂದಿಸಿದ ಪ್ರಧಾನಿ ಮೋದಿ​

    12.12 AM: ಆಪ್​ 58 ಮತ್ತು ಬಿಜೆಪಿ 12 ಸ್ಥಾನಗಳಲ್ಲಿ ಮುನ್ನಡೆ.

    12.09 AM: ಪಕ್ಷದ ಸೋಲಿನ ಜವಾಬ್ದಾರಿಯನ್ನು ನಾನು ಹೋರುತ್ತೇನೆ. ನಾವು ಈ ಬಗ್ಗೆ ವಿಮರ್ಶೆ ನಡೆಸುತ್ತೇವೆ. ಬಿಜೆಪಿ ಮತ್ತು ಆಪ್​ನಿಂದಾಗಿ ನಮ್ಮ ಮತಗಳು ಕುಸಿದಿವೆ. – ದೆಹಲಿ ಕಾಂಗ್ರೆಸ್​ ಮುಖ್ಯಸ್ಥ ಸುಭಾಷ್​ ಚೋಪ್ರಾ.

    11.53 AM:  ಜನಕಪುರಿ ಕ್ಷೇತ್ರದಲ್ಲಿ ಆಪ್​ನ ರಾಜೇಶ್​ ರಿಷಿ ಅವರು ಬಿಜೆಪಿಯ ಆಶಿಷ್​ ಸೂದ್​ ಅವರಿಗಿಂತ ಮತ ಪಡೆವಲ್ಲಿ ಮುಂದಿದ್ದಾರೆ. ಇಲ್ಲಿಯವರೆಗೆ 7 ಸುತ್ತಿನ ಮತ ಎಣಿಕೆ ಕಾರ್ಯ ಮುಗಿದಿದೆ.

    11.45 AM: ದೆಹಲಿಯಲ್ಲಿ ಆಪ್​ ಸರ್ಕಾರ ಮುನ್ನಡೆ ಹಿನ್ನೆಲೆಯಲ್ಲಿ ಮುಂಬೈನ ಅಂಧೇರಿಯಲ್ಲಿ ಆಪ್​ ಕಾರ್ಯಕರ್ತರ  ಸಂಭ್ರಮಾಚರಣೆ.

    11.39 AM:  ಹರಿನಗರ ಕ್ಷೇತ್ರದಲ್ಲಿ 5ನೇ ಸುತ್ತಿನ ಮತ ಎಣಿಕೆ ನಂತರ ಆಪ್​ನ ರಾಜಕುಮಾರಿ ಧಿಲ್ಲೋನ ಅವರು ಬಿಜೆಪಿಯ ತಜೀಂದರ್​ ಪಾಲ್​ ಸಿಂಗ್​ ಬಗ್ಗಾ ಅವರಿಗಿಂತ ಮತ ಗಳಿಕೆಯಲ್ಲಿ ಮುಂದಿದ್ದಾರೆ.

    11.32 AM:  ದೆಹಲಿ ಉಪ ಮುಖ್ಯಮಂತ್ರಿ ಮನೀಷ್​ ಸಿಸೋಡಿಯಾ ಬಿಜೆಪಿಯ ರವಿ ನೇಗಿ ಅವರಿಗಿಂತ 1427 ಮತಗಳ ಅಂತರದಲ್ಲಿ ಹಿಂದುಳಿದಿದ್ದಾರೆ.

    11.10 AM:  ದೆಹಲಿಯಲ್ಲಿ ಜಯದ ಹಾದಿಯಲ್ಲಿರುವ ಆಪ್​ ಸರ್ಕಾರ ಮುನ್ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್​ನ ಅಮೃತಸರದಲ್ಲಿ ಆಪ್​ ಕಾರ್ಯಕರ್ತರು ಸಿಹಿ ವಿತರಿಸಿ ಸಂಭ್ರಮಿಸಿದರು.

    11.06 AM: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಬಗ್ಗೆ ಒಲವು ತೋರಿದ ಎಲ್ಲರಿಗೂ ಧನ್ಯವಾದಗಳು. ಮತದಾರರು ಜನಪರ ಸರ್ಕಾರಕ್ಕೆ ಒಲವು ತೋರಿದ್ದಾರೆ. ದೆಹಲಿ ಜನತೆ ಅಭಿವೃದ್ಧಿಗೆ ಮತ ಹಾಕಿದ್ದಾರೆ ಎಂದು ಆಪ್​ ಅಭ್ಯರ್ಥಿ ಅಖಿಲೇಶ್​ ಪಾಟಿ ತ್ರಿಪಾಠಿ ಹೇಳಿದ್ದಾರೆ.

    10.40 AM: ಮೂರನೇ ಸಲವೂ ಆಪ್ ಅಧಿಕಾರಕ್ಕೇರುತ್ತದೆ ಎಂಬುದು ಎಲ್ಲರಿಗೂ ಗೊತ್ತಿದ್ದ ವಿಚಾರ. ಕಾಂಗ್ರೆಸ್ ಪಕ್ಷದ ಸೋಲು ಖಚಿತವಾಗಿ ಒಳ್ಳೆಯ ಸಂದೇಶ ರವಾನಿಸುವುದಿಲ್ಲ. ಬಿಜೆಪಿ ವಿರುದ್ಧ ಆಪ್​ ಗೆಲುವು ಮಹತ್ವಪೂರ್ಣವಾದುದು ಎಂದ ಕಾಂಗ್ರೆಸ್ ಸಂಸದ ಎ ಆರ್ ಚೌಧರಿ.

    10.35 AM:  ಚುನಾವಣಾ ಆಯೋಗದ ಅಧಿಕೃತ ಮಾಹಿತಿ ಪ್ರಕಾರ, ಆಮ್ ಆದ್ಮಿ ಪಾರ್ಟಿ 45 ಸ್ಥಾನಗಳಲ್ಲೂ, ಬಿಜೆಪಿ 19 ಸ್ಥಾನಗಳಲ್ಲೂ ಮುನ್ನಡೆಯಲ್ಲಿದೆ.

    10.28 AM: ಸದ್ಯದ ಟ್ರೆಂಡ್ ಪ್ರಕಾರ ಆಮ್ ಆದ್ಮಿ ಪಾರ್ಟಿ ಗೆಲುವು ಖಚಿತವಾದ ಕಾರಣ ದೆಹಲಿಯಲ್ಲಿರುವ ಆಪ್ ಕಚೇರಿ ಕಾಂಪೌಂಡ್​ನಲ್ಲಿ ಹೊಸ ಪೋಸ್ಟರ್ ಕಾಣಿಸಿಕೊಂಡಿದೆ. ಅದರಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಸಲಹೆ ನೀಡಿ ಎಂಬ ಸಂದೇಶವಿದ್ದು, ಹೊಸ ಸಹಾಯವಾಣಿ ನಂಬರ್ ಕೂಡ ಇದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    LIVE: ದೆಹಲಿ ವಿಧಾನಸಭೆ ಚುನಾವಣೆ-ಮತ ಎಣಿಕೆ; ಕೇಜ್ರಿವಾಲ್​ರನ್ನು ಅಭಿನಂದಿಸಿದ ಪ್ರಧಾನಿ ಮೋದಿ​

    10.23 AM: ಆಪ್​ 39 ಮತ್ತು ಬಿಜೆಪಿ 19 ಸ್ಥಾನಗಳಲ್ಲಿ ಮುನ್ನಡೆ.

    10.15 AM: ಆಪ್​ ಸದ್ಯದ ಪ್ರಕಾರ ಆಪ್​ ಮತ್ತು ಬಿಜೆಪಿ ಮಧ್ಯೆ ಅಂತರವಿದೆ. ಆದರೆ ಇನ್ನು ಸಮಯಾವಕಾಶವಿದೆ. ನಮಗೆ ಭರವಸೆ ಇದೆ. ಫಲಿತಾಂಶ ಏನಾದರೂ ಆಗಲಿ, ರಾಜ್ಯದ ಮುಖ್ಯಸ್ಥನಾಗಿ ನಾನು ಹೊಣೆ ಹೋರುತ್ತೇನೆ ಎಂದು ಮಾಧ್ಯಮಗಳಿಗೆ ಹೇಳಿದ ಮನೋಜ್​ ತಿವಾರಿ.

    10.05 AM: ಆಪ್​ 32 ಮತ್ತು ಬಿಜೆಪಿ 16 ಸ್ಥಾನಗಳಲ್ಲಿ ಮುನ್ನಡೆ.

    10.00 AM: ಆಪ್​ ಆಭ್ಯರ್ಥಿ ಹಾಗೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ 2026 ಮತಗಳಿಂದ ಮುನ್ನಡೆ.

    LIVE: ದೆಹಲಿ ವಿಧಾನಸಭೆ ಚುನಾವಣೆ-ಮತ ಎಣಿಕೆ; ಕೇಜ್ರಿವಾಲ್​ರನ್ನು ಅಭಿನಂದಿಸಿದ ಪ್ರಧಾನಿ ಮೋದಿ​

    9.55 AM: ಆಪ್​ 22 ಮತ್ತು ಬಿಜೆಪಿ 14 ಸ್ಥಾನಗಳಲ್ಲಿ ಮುನ್ನಡೆ.

    9.34 AM: ಆಪ್​ ಮತ್ತು ಬಿಜೆಪಿ ತಲಾ 10 ಸ್ಥಾನಗಳಲ್ಲಿ ಮುನ್ನಡೆ.

    9.24 AM:  ಆಪ್​ ಅಭ್ಯರ್ಥಿ ಸೌರಭ್​ ಭಾರದ್ವಾಜ್​ ಅವರು ಗ್ರೇಟರ್​ ಕೈಲಾಶ್​ ಕ್ಷೇತ್ರದಲ್ಲಿ 1505 ಮತಗಳಿಂದ ಮುನ್ನಡೆ. ​

    9.12 AM: ಗೋಲೆ ಮಾರ್ಕೆಟ್​ ಪ್ರದೇಶದ ಮತ ಎಣಿಕೆ ಕೇಂದ್ರದಲ್ಲಿ ಆಪ್​ ಅಭ್ಯರ್ಥಿ ರಾಘವ್​ ಚಾಧಾ.

    9.12 AM: ಆಪ್​ ಮುನ್ನಡೆ ಕಾಯ್ದುಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರ ಸಂಭ್ರಮ.

    9.08 AM: ಅಂತಿಮ ಸುತ್ತಿನವರೆಗೆ ಕಾಯಿರಿ. ನೋಡಿ ಅಭೂತಪೂರ್ವ ಗೆಲುವು ನಮ್ಮದಾಗಲಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಆಪ್​ ಸಂಸದ ಸಂಜಯ್​ ಸಿಂಗ್​.

    9.04 AM: ಶಾಸ್ತ್ರಿನಗರ ಮತ ಎಣಿಕೆ ಕೇಂದ್ರದಲ್ಲಿ ಸುಗಮವಾಗಿ ಮುನ್ನಡೆಯುತ್ತಿರುವ ಮತ ಎಣಿಕೆ.

    8.57 AM:  ಒಟ್ಟು 13 ಸುತ್ತುಗಳ ಎಣಿಕೆ ಕಾರ್ಯ ನಡೆಯುತ್ತಿದೆ. ಅಂಚೆ ಮತಪತ್ರಗಳನ್ನು ಎಣಿಸಲಾಯಿತು. ಮೊದಲ ಸುತ್ತಿನ ಎಣಿಕೆ ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಪೂರ್ಣಗೊಳ್ಳುತ್ತದೆ. ತ್ರಿಲೋಕಪುರಿ ರಿಟರ್ನಿಂಗ್​ ಅಧಿಕಾರಿ ಸಂಜೀವ್​ ಕುಮಾರ್​ ಮಾಹಿತಿ.

    8.44 AM:  ಅಕ್ಷರಧಾಮ ಮತ ಎಣಿಕೆ ಕೇಂದ್ರಲ್ಲಿ ಉಪ ಮುಖ್ಯಮಂತ್ರಿ ಮತ್ತು ಬಿಜೆಪಿಯ ರವಿ ನೇಗಿ.

    8.40 AM:  ಆಪ್​ ಕೇಂದ್ರ ಕಚೇರಿಯನ್ನು ಸಂಭ್ರಮದಿಂದ ಕಾರ್ಯಕರ್ತರು ಸಿಂಗರಿಸುತ್ತಿದ್ದಾರೆ. ಮುಖಂಡ ಅರವಿಂದ ಕೇಜ್ರಿವಾಲ್​ ಕಚೇರಿ ಕಡೆಗೆ ಧಾವಿಸುತ್ತಿದ್ದಾರೆ.

    8.33 AM: ಆಪ್​ 50, ಬಿಜೆಪಿ 16 ಹಾಗೂ ಕಾಂಗ್ರೆಸ್​ 1 ಸ್ಥಾನದಲ್ಲಿ ಮುಂದಿವೆ.​

    8.00 AM: ದೆಹಲಿ ವಿಧಾನಸಭೆಯ ಮತ ಎಣಿಕೆ ಕಾರ್ಯ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts