More

    ಮಗನಿಗೆ ಸಂಬಂಧಿತ ಕಂಪನಿಗೆ ಅಕ್ರಮವಾಗಿ 850 ಕೋಟಿ ರೂ. ಲಾಭ ಮಾಡಿಕೊಟ್ಟ ಮುಖ್ಯ ಕಾರ್ಯದರ್ಶಿ!

    ನವದೆಹಲಿ: ಸರ್ಕಾರದ ಮುಖ್ಯ ಕಾರ್ಯದರ್ಶಿ ತನ್ನ ಮಗನಿಗೆ ಸಂಬಂಧಿತ ಕಂಪನಿಯೊಂದಕ್ಕೆ ಅಕ್ರಮವಾಗಿ 850 ಕೋಟಿ ರೂ. ಲಾಭ ಮಾಡಿಕೊಟ್ಟ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮುಖ್ಯಮಂತ್ರಿಯವರಿಗೆ 670 ಪುಟಗಳ ಪ್ರಾಥಮಿಕ ವರದಿ ಕೂಡ ಸಲ್ಲಿಕೆ ಆಗಿದೆ.

    ಈ ಪ್ರಕರಣದಲ್ಲಿ ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಆರೋಪಿ. ದ್ವಾರಕಾ ಎಕ್ಸ್​ಪ್ರೆಸ್​ವೇ ಯೋಜನೆಯಲ್ಲಿ ನರೇಶ್ ತಮ್ಮ ಪುತ್ರನಿಗೆ ಸಂಬಂಧಿತ ಕಂಪನಿಗೆ ಅಕ್ರಮವಾಗಿ 850 ಕೋಟಿ ರೂ. ಲಾಭ ಮಾಡಿಕೊಟ್ಟಿದ್ದಾರೆ ಎಂದು ಸಿಎಂ ಅರವಿಂದ ಕೇಜ್ರಿವಾಲ್ ಅವರಿಗೆ ಸಲ್ಲಿಸಲಾದ 670 ಪುಟಗಳ ಪ್ರಾಥಮಿಕ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೆಹಲಿ ವಿಜಿಲೆನ್ಸ್ ಮಿನಿಸ್ಟರ್ ಅತಿಷಿ ಈ ಕುರಿತ ತನಿಖೆಗೆ ಆದೇಶಿಸಿದ್ದರು.

    ಇದನ್ನೂ ಓದಿ: ಹೋರಿ ಬೆದರಿಸುವ ಸ್ಪರ್ಧೆ: ಹಬ್ಬದಲ್ಲಿ ಪಾಲ್ಗೊಂಡ ಹೋರಿಯೇ ಪರಾರಿ; ಆಮೇಲೇನಾಯ್ತು!

    ಮುಖ್ಯ ಕಾರ್ಯದರ್ಶಿ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳು ಸುಳ್ಳು ಹಾಗೂ ಆಧಾರರಹಿತ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಶ್ವಿನಿ ಕುಮಾರ್ ಸುದ್ದಿಗೋಷ್ಠಿ ನಡೆಸಿ ಸಮಜಾಯಿಷಿ ನೀಡಿದ ಬೆನ್ನಿಗೇ ಈ ಪ್ರಕರಣಕ್ಕೆ ಸಂಬಂಧಿತ ಪ್ರಾಥಮಿಕ ವರದಿ ಹೊರಬಿದ್ದಿದೆ. ಅದಾಗ್ಯೂ ಈ ವಿಷಯವಾಗಿ ಮುಖ್ಯ ಕಾರ್ಯದರ್ಶಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಇದನ್ನೂ ಓದಿ: ವಿಶ್ವಕಪ್​ ಪಂದ್ಯಗಳಲ್ಲಿ ಸೋಲು; ಪಾಕಿಸ್ತಾನ ಕ್ರಿಕೆಟ್​ ತಂಡದಲ್ಲಿ ಏನಾಗಲಿದೆ ಬದಲಾವಣೆ?

    ದ್ವಾರಕಾ ಎಕ್ಸ್​ಪ್ರೆಸ್​ವೇ ಸಲುವಾದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನರೇಶ್ ಕುಮಾರ್ ಮತ್ತು ಡಿಸಿ ಹೇಮಂತ್ ಕುಮಾರ್ ಮತ್ತು ಭೂಮಾಲೀಕರ ಮಧ್ಯೆ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ನರೇಶ್ ಕುಮಾರ್ ಪುತ್ರ ಕರಣ್ ಚೌಹಾನ್​ಗೆ ಸಂಬಂಧಿತ ಕಂಪನಿಗೆ ಕೋಟಿಗಟ್ಟಲೆ ರೂ. ಮೌಲ್ಯದ ಅನುಕೂಲವನ್ನು ಅಕ್ರಮವಾಗಿ ಮಾಡಿರುವುದನ್ನೂ ಉಲ್ಲೇಖಿಸಲಾಗಿದೆ.

    ಈ ವ್ಯವಹಾರದಲ್ಲಿ 850 ಕೋಟಿ ರೂ. ಮೊತ್ತದ ಅಕ್ರಮವಾಗಿದ್ದರೂ ಈ ಹಗರಣ ಬರೀ 312 ಕೋಟಿ ರೂ. ಮೊತ್ತದ್ದು ಎಂದು ತೋರಿಸುವ ನಿಟ್ಟಿನಲ್ಲಿಯೂ ವಿಜಿಲೆನ್ಸ್​ನ ಕೆಲವು ಅಧಿಕಾರಿಗಳೊಂದಿಗೆ ನರೇಶ್ ಕುಮಾರ್ ಪ್ರಯತ್ನ ನಡೆಸಿದ್ದಾರೆಂದೂ ಹೇಳಲಾಗುತ್ತಿದೆ.

    ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?

    ನನ್ನ ಆಯ್ಕೆ ಅವರ ತೀರ್ಮಾನ, ಇದಕ್ಕೆ ಯಾರದ್ದೂ ವಿರೋಧವಿಲ್ಲ: ಬಿ.ವೈ.ವಿಜಯೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts