More

    ದೀಪಿಕಾ ಹೇಳಿಕೊಂಡ ತಮ್ಮ ರಿಯಲ್ ಲೈಫ್​ ಲವ್ ಸ್ಟೋರಿ …

    ರಾಮಾಯಣದಲ್ಲಿ ರಾಮ ಮತ್ತು ಸೀತೆ ಹೇಗೆ ಮೊದಲ ಬಾರಿಗೆ ಮುಖಾಮುಖಿಯಾಗುತ್ತಾರೆ, ನಂತರ ಏನೆಲ್ಲಾ ಆಗುತ್ತದೆ ಎಂಬುದು ಗೊತ್ತೇ ಇದೆ. ಆದರೆ, ‘ರಾಮಾಯಣ’ ಖ್ಯಾತಿಯ ಸೀತೆ (ದೀಪಿಕಾ) ತಮ್ಮ ರಿಯಲ್ ಲೈಫ್​ರಾಮನನ್ನ ಮೊದಲ ಬಾರಿಗೆ ಮೀಟ್ ಮಾಡಿದ್ದು ಎಲ್ಲಿ ಮತ್ತು ಹೇಗೆ ಗೊತ್ತಾ? ಇದನ್ನು ದೀಪಿಕಾ ಅವರೇ ಸ್ವತಃ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

    ಈ ಬಗ್ಗೆ ಮೂರು ಕಂತುಗಳಲ್ಲಿ ಬರೆದುಕೊಂಡಿರುವ ದೀಪಿಕಾ, ತಮ್ಮ ರಿಯಲ್ ಲೈಫ್​ ರಾಮನನ್ನು ಮೊದಲಿಗೆ ಮೀಟ್ ಮಾಡಿದ್ದು ಎಲ್ಲಿ ಮತ್ತು ಆ ನಂತರ ಅವರಿಬ್ಬರ ಮದುವೆ ಹೇಗಾಯಿತು ಎಂಬುದನ್ನು ತಮ್ಮ ಇನ್‌ಸ್ಟಾಗ್ರಾಮ್ ಅಭಿಮಾನಿಗಳಿಗೆ ವಿವರಿಸಿದ್ದಾರೆ.

    ಇದನ್ನೂ ಓದಿ: ಬಾಲಿವುಡ್​ನ ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿಧನ

    ‘ನಾನು ‘ರಾಮಾಯಣ’ದಲ್ಲಿ ನಟಿಸುವ ಮೊದಲೇ ನನ್ನ ಗಂಡ ಹೇಮಂತ್ ಅವರನ್ನು ಮೊದಲ ಬಾರಿಗೆ ನೋಡಿದ್ದೆ. ಅದು ನನ್ನ ಮೊದಲ ಚಿತ್ರ ‘ಸುನ್ ಮೇರಿ ಲೈಲಾ’ ಸೆಟ್‌ನಲ್ಲಿ. ಆ ಚಿತ್ರದಲ್ಲಿ ನಾನು ಒಂದು ಆ್ಯಡ್ ಫಿಲ್ಮಗೆ ಮಾಡಲಿಂಗ್ ಮಾಡುವ ಒಂದು ದೃಶ್ಯವಿದೆ. ಅದು ಶೃಂಗಾರ್ ಕಾಸ್ಮೆಟಿಕ್ಸ್‌ನ ಜಾಹೀರಾತು. ಹೇಮಂತ್ ಅವರ ಕುಟುಂಬ 1961ರಿಂದ ಶೃಂಗಾರ್ ಕಾಸ್ಮೆಟಿಕ್ಸ್ ಉತ್ಪಾದಿಸುತ್ತಿದ್ದು, ಜಾಹೀರಾತಿನ ಶೂಟಿಂಗ್ ನೋಡುವುದಕ್ಕೆ ಹೇಮಂತ್ ಬಂದಿದ್ದರು. ನಾನು ಅವರನ್ನು ಮೊದಲ ಬಾರಿಗೆ ನೋಡಿದ್ದು ಅಲ್ಲೇ …’ ಎಂದು ನೆನಪಿಸಿಕೊಂಡಿದ್ದಾರೆ ದೀಪಿಕಾ.

    ಆ ಸಂದರ್ಭದಲ್ಲಿ ಅವರಿಬ್ಬರೂ ಸ್ವಲ್ಪ ಹೊತ್ತು ಮಾತನಾಡಿದರಂತೆ. ಆ ನಂತರ ಇಬ್ಬರೂ ತಮ್ತಮ್ಮ ಕೆಲಸಗಳಲ್ಲಿ ಮುಳುಗಿ ಹೋಗಿದ್ದಾರೆ. ಒಂದು ಕಡೆ ದೀಪಿಕಾಗೆ ‘ರಾಮಾಯಣ’ ಹೆಸರು ತಂದುಕೊಟ್ಟರೆ, ಇನ್ನೊಂದು ಕಡೆ ಹೇಮಂತ್ ಬಿಜಿನೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. 1991ರ ಏಪ್ರಿಲ್ 28ರಂದು ಹೇಮಂತ್ ಮತ್ತು ದೀಪಿಕಾ ಇಬ್ಬರೂ, ತಮ್ಮ ಕಾಮನ್ ಫ್ರೆಂಡ್​ ಒಬ್ಬರ ಮನೆಯಲ್ಲಿ ಮತ್ತೊಮ್ಮೆ ಭೇಟಿಯಾಗಿದ್ದಾರೆ.

    ಇದನ್ನೂ ಓದಿ: ಬಾಲಿವುಡ್​ ನಟ ಅರ್ಷದ್​ ವಾರ್ಸಿ ಚಾಲಕರಾಗಿ ಕೆಲಸ ಮಾಡಿದ್ದ ಬಿಗ್​ ಬಿ ಪುತ್ರ ಅಭಿಷೇಕ್​ ಬಚ್ಚನ್​

    ‘ಭೇಟಿ ಮಾಡಿ ಮಾತನಾಡುವಾಗ, ಇಬ್ಬರೂ ಸುಮಾರು ಎರಡು ಗಂಟೆಗಳ ಕಾಲ ಮಾತನಾಡಿದ್ದೆವು. ಅಷ್ಟರಲ್ಲಿ ಇಬ್ಬರಿಗೂ ನಾವು ಮದುವೆಯಾಗಬೇಕೆಂದು ಸ್ಪಷ್ಟವಾಗಿತ್ತು. ಇಬ್ಬರೂ ಮನೆಗೆ ಹೋಗಿ ಮದುವೆಯಾಗುತ್ತಿರುವ ವಿಷಯವನ್ನು ಹೇಳಿದೆವು. ಏಪ್ರಿಲ್ 29ಕ್ಕೆ ನನ್ನ ಹುಟ್ಟುಹಬ್ಬದಂದು ಒಂದು ಸಣ್ಣ ನಿಶ್ಚಿತಾರ್ಥವಾಗಿ, ಅದೇ ವರ್ಷ ನಾವಿಬ್ಬರೂ ಮದುವೆಯಾದೆವು’ ಎಂದು ಹೇಳಿಕೊಂಡಿದ್ದಾರೆ ದೀಪಿಕಾ.

    ಅವರಿಬ್ಬರೂ ಮದುವೆಯಾಗಿ 29 ವರ್ಷವಾಗಿದ್ದು, ಮುಂದಿನ ವರ್ಷ 30ನೇ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ.

    ಮಾನ್ವಿತಾ-ಆಶಿಕಾಗೆ ಹ್ಯಾಕರ್ಸ್ ಕಾಟ; ನಮ್ ಹುಷಾರಲ್ಲಿ ನಾವು ಇರಬೇಕಷ್ಟೇ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts