More

    ಮೊದಲ ತೆಲುಗು ಚಿತ್ರಕ್ಕೆ ದೀಪಿಕಾ ಪಡೆಯುತ್ತಿರುವ ಸಂಭಾವನೆ ಇಷ್ಟೊಂದಾ!?

    ದೀಪಿಕಾ ಪಡುಕೋಣೆ ದಶಕದ ಬಳಿಕ ಸೌತ್​ ಸಿನಿಮಾ ಇಂಡಸ್ಟ್ರಿಯತ್ತ ಹೊರಳಿದ್ದಾರೆ. ಬಹುಭಾಷೆಗಳಲ್ಲಿ ಸಿದ್ಧವಾಗುತ್ತಿರುವ ಚಿತ್ರಕ್ಕೆ ನಾಯಕಿಯಾಗಿ ದೀಪಿಕಾ ಆಯ್ಕೆಯಾಗಿದ್ದಾರೆ. ಬಾಹುಬಲಿ ಮೂಲಕ ಪ್ಯಾನ್​ ಇಂಡಿಯಾ ಸೆನ್ಸೆಷನ್​ ಸೃಷ್ಟಿಸಿದ್ದ ನಟ ಪ್ರಭಾಸ್​ ಮುಂದಿನ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ದೀಪಿಕಾ ನಟಿಸುವುದು ಅಧಿಕೃತವಾಗಿದ್ದು, ಸ್ವತಃ ಚಿತ್ರತಂಡವೇ ಈ ಸುದ್ದಿಯನ್ನು ಭಾನುವಾರವಷ್ಟೇ ಹೊರಹಾಕಿತ್ತು. ಹೀಗಿರುವಾಗ ಈ ಚಿತ್ರಕ್ಕೆ ನಟಿ ದೀಪಿಕಾ ಪಡೆದ ಸಂಭಾವನೆ ಎಷ್ಟಿರಬಹುದು?

    ಇದನ್ನೂ ಓದಿ: ಕನ್ಯತ್ವ ಕಳೆದುಕೊಳ್ಳುವುದು ಯುವತಿಯ ಆಯ್ಕೆಯೇ ಹೊರತು ಒತ್ತಡ ಅಲ್ಲ!; ಊರ್ವಶಿ ರೌಟೇಲಾ

    ನಿಜಕ್ಕೂ ಈ ಪ್ರಶ್ನೆ ಅಚ್ಚರಿ ಮೂಡಿಸುತ್ತದೆ. ಬಾಲಿವುಡ್​ನಲ್ಲಿಯೇ ಸೆಟಲ್​ ಆಗಿರುವ ಕನ್ನಡತಿ ದೀಪಿಕಾ ಪಡುಕೋಣೆ, ಸದ್ಯ ಟಾಪ್​ ನಟಿಯರ ಪಟ್ಟಿಯಲ್ಲಿ ಟಾಪ್​ನಲ್ಲಿಯೇ ಇದ್ದಾರೆ. ನಟನೆ, ನಿರ್ಮಾಣ, ಜಾಹೀರಾತು ಹೀಗೆ ಬಂದಿಲ್ಲೊಂದು ಕ್ಷೇತ್ರದಲ್ಲಿ ಪಾರಮ್ಯ ಮೆರೆಯುತ್ತಿದ್ದಾರೆ. ಅವರ ಸಂಭಾವನೆಯೂ ಹತ್ತಾರು ಕೋಟಿ ಲೆಕ್ಕದಲ್ಲಿಯೇ ಇದೆ ಎಂಬುದು ಎಲ್ಲಿರಿಗೂ ಗೊತ್ತು ಇದೀಗ, ಮೊದಲ ಟಾಲಿವುಡ್​ ಚಿತ್ರಕ್ಕೆ ಅವರು ಪಡೆಯುತ್ತಿರುವ ಸಂಭಾವನೆ ಬಗ್ಗೆ ಟಾಲಿವುಡ್​ನಿಂದ ಅಂಕಿ ಅಂಶವೊಂದು ಹೊರಬಿದ್ದಿದೆ.

    https://www.instagram.com/p/CC0AsXVD4Wo/

    ನಾಗ್​ ಅಶ್ವಿನ್​ ನಿರ್ದೇಶನದ ಈ ಚಿತ್ರಕ್ಕೆ ದೀಪಿಕಾ ಬರೋಬ್ಬರಿ 30 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಟಾಲಿವುಡ್​ನಲ್ಲಿ ಈ ಸುದ್ದಿ ಹರಿದಾಡುತ್ತಿದ್ದಂತೆ, ಎಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಆದರೆ, ಈ ಬಗ್ಗೆ ಚಿತ್ರತಂಡ ಮಾಹಿತಿ ಬಿಟ್ಟುಕೊಟ್ಟಿಲ್ಲ. ಇನ್ನು ಕೆಲವರು ಇಂಥಹ ತಲಬುಡವಿಲ್ಲದ ಸುದ್ದಿಗಳನ್ನು ನಂಬಬೇಡಿ ಅಂತಲೂ ಹೇಳಿಕೊಂಡಿದ್ದಾರೆ. ಏನೇ ಆಗಲಿ, ದೀಪಿಕಾ ಸ್ಟಾರ್​ಗಿರಿಗೆ ಇಷ್ಟೊಂದು ಮೊತ್ತ ಕೊಡಬಹುದು ಎಂಬ ಮಾತುಗಳೂ ಚರ್ಚೆಯಲ್ಲಿವೆ.

    ಇದನ್ನೂ ಓದಿ: ಸುಶಾಂತ್​ಗೆ ಬಕೆಟ್​ ಹಿಡಿಯುವುದು ಗೊತ್ತಿರಲಿಲ್ಲ … ಅದಕ್ಕೆ ಹೀಗಾಯ್ತು ಅಂತಾರೆ ಕಂಗನಾ

    ಅಂದಹಾಗೆ ಈ ಬಿಗ್​ ಸಿನಿಮಾವನ್ನು ವೈಜಯಂತಿ ಸಿನಿಮಾಸ್ ಸಂಸ್ಥೆ ನಿರ್ಮಾಣ ಮಾಡಲಿದ್ದು, ದಕ್ಷಿಣ ಭಾರತದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಯಲ್ಲಿ ಇದೂ ಒಂದಾಗಿದೆ. ಇದೇ ಸಂಸ್ಥೆ 50ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಆ ಸಂಭ್ರಮಕ್ಕೆ ಈ ಸಿನಿಮಾ ಘೋಷಣೆ ಮಾಡಿದ್ದು, ದೀಪಿಕಾ ಅವರನ್ನು ಕರೆತಂದಿದೆ. ಮಹಾನಟಿ ಸಿನಿಮಾ ನಿರ್ದೇಶನ ಮಾಡಿದ್ದ ನಿದೇಶಕ ನಾಗ್​ ಅಶ್ವಿನ್​ ಈ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. (ಏಜೆನ್ಸೀಸ್​)

    VIDEO: ಸುಶಾಂತ್​ ಆತ್ಮದ ಜತೆ ಮಾತನಾಡಿ, ಸಾವಿನ ಹಿನ್ನೆಲೆ ತಿಳಿದುಕೊಂಡ ಪ್ಯಾರಾನಾರ್ಮಲ್​ ತಜ್ಞ!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts