More

    ಸಮಸ್ಯೆಗಳಿಗೆ ಪರಿಹಾರ ಒದಗಿಸಿ

    ಗೋಣಿಕೊಪ್ಪ: ಕುಡಿಯುವ ನೀರು, ಶೌಚಗೃಹ, ಚರಂಡಿ, ವಿದ್ಯುತ್, ಮೈದಾನ ದುರಸ್ತಿ, ಇಂಗುಗುಂಡಿ, ಕೈ ತೊಳೆಯಲು ವ್ಯವಸ್ಥೆ ಒದಗಿಸುವಂತೆ ಒತ್ತಾಯಿಸಿ ಮಕ್ಕಳ ಗ್ರಾಮ ಸಭೆಯಲ್ಲಿ ಮನವಿ ಸಲ್ಲಿಸಲಾಯಿತು.

    ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ಶನಿವಾರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ವಿದ್ಯಾರ್ಥಿನಿ ಅಮೃತಾ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿನಿಯರಾದ ರುಕ್ಮಿಣಿ , ತೇಜಸ್ವಿನಿ, ದೀಪಿಕಾ, ರೇಷ್ಮಾ, ದೀಕ್ಷಾ, ಕಲ್ಪಿತಾ, ಮಂಜುಳಾ ಇತರ ವಿದ್ಯಾರ್ಥಿಗಳು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

    ವಕೀಲ ರಫೀಕ್ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕಿ ಅನುಷಾ, ಮಕ್ಕಳ ಹಕ್ಕು ಮತ್ತು ಅಭಿವೃದ್ಧಿ ವಿಚಾರವನ್ನು ತಿಳಿಸಿದರು. ಹೆಚ್ಚು ಮೊಬೈಲ್ ಬಳಸದಂತೆ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಅರುಣಾ ಸಲಹೆ ನೀಡಿದರು.

    ಮಕ್ಕಳ ಸಹಾಯವಾಣಿಯ ಸಹಾಯಕಿ ಮಧು, ಗ್ರಾಪಂ ಅದ್ಯಕ್ಷೆ ಗಿರಿಜಾ ವೆಂಕಟೇಶ್, ಸದಸ್ಯರಾದ ರಾಮಕೃಷ್ಣ, ವಿಜಯ್, ಅಣ್ಣಿರ ಹರೀಶ್, ಮೂಕಳೇರ ಮಧು, ಆರತಿ ರಮೇಶ್, ವಿಮಲಾ, ಭಾರತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು, ಪೊನ್ನಂಪೇಟೆ ಕ್ಲಸ್ಟರ್ ಸಮನ್ವಯ ಸಂಪನ್ಮೂಲ ಅಧಿಕಾರಿ ತಿರುನೆಲ್ಲಿಮಾಡ ಜೀವನ್, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ನಾಗವೇಣಿ, ಮುಖ್ಯ ಶಿಕ್ಷಕ ವಿಜಯ, ವಾಸುವರ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts