More

    ಟಿ-20 ವಿಶ್ವಕಪ್​ ತಂಡದಲ್ಲಿ ಭುವನೇಶ್ವರ್​ ಬದಲು ದೀಪಕ್​ ಚಹರ್​ಗೆ ಸ್ಥಾನ ನೀಡಿ; ಹರ್ಭಜನ್ ಸಿಂಗ್

    ನವ ದೆಹಲಿ: ಇಂಜುರಿ ಸಮಸ್ಯೆಯಿಂದಾಗಿ ಟಿ-20 ವಿಶ್ವಕಪ್ ತಂಡದಿಂದ ಹೊರನಡೆದಿರುವ ಪ್ರಮುಖ ವೇಗಿ ಜಸ್​ಪ್ರೀತ್​ ಬುಮ್ರಾ ಬದಲಿಗೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಬಿಸಿಸಿಐ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಈ ನಡುವೆ 2007ರ ಚೊಚ್ಚಲ ಟಿ-20 ವಿಶ್ವಕಪ್ ಜಯಿಸಿದ್ದ ತಂಡದಲ್ಲಿದ್ದ ಹರ್ಭಜನ್ ಸಿಂಗ್, ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಬದಲಿಗೆ ದೀಪಕ್ ಚಹರ್​ಗೆ ಅವಕಾಶ ಕೊಡಬೇಕು ಎಂದಿದ್ದಾರೆ.

    ದೀಪಕ್ ಚಹರ್ ಈಗಾಗಲೇ ಮೀಸಲು ಬೌಲರ್ ಆಗಿ ಆಯ್ಕೆಯಾಗಿದ್ದಾರೆ. ಇವರನ್ನು ಆಡುವ ಹನ್ನೊಂದರ ಬಳಗದಲ್ಲಿ ಬಳಸಿಕೊಳ್ಳಬೇಕು. ದೀಪಕ್ ಚಹರ್ ಹೊಸ ಬಾಲ್​ನಲ್ಲಿ 2-3 ವಿಕೆಟ್ ತೆಗೆಯುವ ಸಾಮರ್ಥ್ಯವುಳ್ಳ ಬೌಲರ್. ಜತೆಗೆ ಸ್ವಿಂಗ್ ಬಾಲ್​ನಲ್ಲೂ ವಿಕೆಟ್ ಕಬಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಅನುಭವಿ ಭುವನೇಶ್ವರ್ ಕುಮಾರ್​ಗೆ ಹೋಲಿಸಿದರೆ ದೀಪಕ್​ ಚಹರ್​ನಲ್ಲಿ ಹೆಚ್ಚಿನ ಕೌಶಲ್ಯವಿದೆ ಎಂದಿದ್ದಾರೆ.

    ನನ್ನ ಪ್ರಕಾರ ದೀಪಕ್ ಚಹರ್ ​ಇನ್​​ಸ್ವಿಂಗ್ ಹಾಗೂ ಔಟ್​ಸ್ವಿಂಗ್ ಬೌಲಿಂಗ್ ಉತ್ತಮವಾಗಿ ಮಾಡುತ್ತಾರೆ. ಪವರ್​ ಪ್ಲೇನಲ್ಲಿ ಸ್ವಿಂಗ್ ಬೌಲಿಂಗ್ ಮೂಲಕ 2-3 ವಿಕೆಟ್ ಪಡೆಯುವ ಸಾಮರ್ಥ್ಯವಿದೆ ಎಂದು ಹರ್ಭಜನ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಭವನೇಶ್ವರ್ ಕುಮಾರ್ ಅನುಭವಿ ವೇಗಿ. ಡೆತ್ ಓವರ್​, ಅದರಲ್ಲೂ 19ನೇ ಓವರ್​ನಲ್ಲಿ ಬೌಲರ್​ಗಳು 8 – 10 ರನ್​ ನೀಡುವುದು ಸಾಮಾನ್ಯ. ಸದ್ಯ ಭವನೇಶ್ವರ್ 15ಕ್ಕಿಂತ ಹೆಚ್ಚಿನ ರನ್ ನೀಡುತ್ತಿದ್ದಾರೆ. ಇದು ತಂಡದ ಗೆಲುವಿನ ಮೇಲೆ ಹೊಡೆತ ಬೀಳುತ್ತದೆ. ತಂಡದ ಒತ್ತಡಕ್ಕೂ ಕಾರಣವಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಭುವನೇಶ್ವರ್​ಗಿಂತ ದೀಪಕ್ ಚಹರ್​ಗೆ ಸ್ಥಾನ ನೀಡುವುದು ಸೂಕ್ತ ಎಂದಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts