More

    50,000 ದಾಟಿತು ಅಮೆರಿಕದಲ್ಲಿ COVID19 ಸಾವಿನ ಸಂಖ್ಯೆ, ನ್ಯೂಯಾರ್ಕ್ ಪರಿಸ್ಥಿತಿ ಶೋಚನೀಯ

    ವಾಷಿಂಗ್ಟನ್​: ಜಗತ್ತನ್ನೇ ತಲ್ಲಣಗೊಳಿಸಿರುವ COVID19 ವೈರಸ್ ಸೋಂಕು ಅಮೆರಿಕವನ್ನು ಅತಿ ಹೆಚ್ಚು ಕಾಡಿದ್ದು, ಅಲ್ಲಿ ಸಾವಿನ ಸಂಖ್ಯೆ ಈಗ 50,000ದ ಗಡಿ ದಾಟಿದೆ. ಜಾನ್ಸ್​ ಹಾಪ್ಕಿನ್ಸ್​ ಯೂನಿವರ್ಸಿಟಿಯ ಸೆಂಟರ್ ಫಾರ್​ ಸಿಸ್ಟಮ್ಸ್​ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್​ ಲೆಕ್ಕಾಚಾರ ಪ್ರಕಾರ ಶುಕ್ರವಾರ ಬೆಳಗ್ಗೆ 11 ಗಂಟೆಯ ಡೇಟಾ ಪ್ರಕಾರ ಅಮೆರಿಕದಲ್ಲಿ ಒಟ್ಟು 8,70,468 ಕೇಸ್​ಗಳು ಖಚಿತವಾಗಿದೆ.

    ಇದೇ ರೀತಿ ಇನ್ನೊಂದು ಡೇಟಾ ಪ್ರಕಾರ ನ್ಯೂಯಾರ್ಕ್ ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ 2,63,460 ಕೇಸ್​ಗಳು ದೃಢಪಟ್ಟಿದ್ದು, ಮರಣ ಪ್ರಮಾಣ 20, 982ಕ್ಕೆ ತಲುಪಿದೆ. ನ್ಯೂಜೆರ್ಸಿಯಲ್ಲಿ ಮರಣ ಪ್ರಮಾಣ 5,426, ಮಿಚಿಗನ್​ನಲ್ಲಿ 2,977, ಮಸ್ಸಾಚುಸೆಟ್ಸ್​ನಲ್ಲಿ 2,360 ಆಗಿದೆ.

    ಕೋವಿಡ್ 19 ಸೋಂಕು ಪೀಡಿತ ರಾಷ್ಟ್ರಗಳ ಪೈಕಿ ಅತಿ ಹೆಚ್ಚು ಸೋಂಕುಪೀಡಿತರು ಮತ್ತು ಮರಣ ಪ್ರಮಾಣದೊಂದಿಗೆ ಅಮೆರಿಕ ಮುಂಚೂಣಿಯಲ್ಲಿದೆ. ಈ ಸಂಬಂಧ ಈಗ ಅಮೆರಿಕದಲ್ಲಿ ಕಟ್ಟುನಿಟ್ಟಾಗಿ ಸೋಷಿಯಲ್ ಡಿಸ್ಟೆನ್ಸಿಂಗ್ ನಿಯಮ ಪಾಲನೆ ಮಾಡದಿರುವ ವಿಚಾರವಾಗಿ ವಿವಾದವೇರ್ಪಟ್ಟಿದೆ. ಅಲ್ಲದೆ, ಎಕಾನಮಿ ರೀ ಓಪನಿಂಗ್ ವಿಚಾರವಾಗಿ ಅಧ್ಯಕ್ಷ ಟ್ರಂಪ್ ಮುಂದಿಟ್ಟಿರುವ ಪ್ರಸ್ತಾವನೆಯೂ ಚರ್ಚೆಯ ಕಾವನ್ನು ಹೆಚ್ಚಿಸಿದೆ.

    ಫೆಡರಲ್​ ಗವರ್ನಮೆಂಟ್ ಪ್ರಕಟಿಸಿರುವ ಹೊಸ ಮಾರ್ಗಸೂಚಿ ಪ್ರಕಾರ ಅನೇಕ ರಾಜ್ಯಗಳು ತಮ್ಮ ಅರ್ಥವ್ಯವಸ್ಥೆಗೆ ಮರುಚಾಲನೆ ನೀಡಲು ಮುಂದಾಗಿವೆ. ಇನ್ನು ಕೆಲವು ಹಿಂದೇಟು ಹಾಕಿವೆ. ಈ ವಿಷಯವಾಗಿ ಜಾರ್ಜಿಯಾ ಮುಂದಡಿ ಇರಿಸಿದ್ದು, ಜಿಮ್​, ಬಾರ್ಬರ್ ಶಾಪ್​, ಹೇರ್​ ಸಲೂನ್​, ಟ್ಯಾಟೂ ಪಾರ್ಲರ್ಸ್​ ಮುಂತಾದ ಅಗತ್ಯೇತರ ವ್ಯವಹಾರಕ್ಕೂ ಅವಕಾಶ ನೀಡಲು ಮುಂದಾಗಿದೆ. ಆದರೆ, ಸೋಷಿಯಲ್ ಡಿಸ್ಟೆನ್ಸಿಂಗ್ ನಿಯಮ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ಕೊಟ್ಟಿದೆ.

    ಈ ಸಂಬಂಧ ಶುಕ್ರವಾರ ಟ್ವೀಟ್ ಮಾಡಿರುವ ಅಧ್ಯಕ್ಷ ಟ್ರಂಪ್​, ನಾನೆಂದೂ ಜಾರ್ಜಿಯಾದ ನಡೆಗೆ ಒಕೆ ಎಂದು ಹೇಳಿಲಿಲ್ಲ. ಫೆಡರಲ್ ಮಾರ್ಗಸೂಚಿ ಪ್ರಕಾರ ಜಾರ್ಜಿಯಾದ ಜನರಿಗೆ ಏನು ಬೇಕೋ ಅದನ್ನು ಮಾಡಿ ಎಂದು ಅಲ್ಲಿನ ಸರ್ಕಾರಕ್ಕೆ ತಿಳಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    ಕಳೆದ ವಾರಾಂತ್ಯದಲ್ಲಿ ಫ್ಲೋರಿಡಾದ ಕೆಲವು ಬೀಚ್ ಮತ್ತು ಪಾರ್ಕ್​ಗಳನ್ನು ತೆರೆದುಬಿಡಲಾಗಿತ್ತು. ಬೆಳಗ್ಗೆ 6ರಿಂದ 11 ಮತ್ತು ಸಂಜೆ 5 ರಿಂದ 8 ರ ತನಕ ಅವಕಾಶ ನೀಡಲಾಗಿತ್ತು. ಅಲ್ಲದೆ, ಗುಂಪುಗಳ ಸದಸ್ಯರ ಮಿತಿ 49 ಎಂದು ಹೇಳಲಾಗಿತ್ತು. ಇದಲ್ಲದೆ, ಸೋಷಿಯಲ್ ಡಿಸ್ಟೆನ್ಸಿಂಗ್ ನಿರ್ವಹಿಸಲು ಕಟ್ಟುನಿಟ್ಟಾಗಿ ಸೂಚನೆ ಕೊಡಲಾಗಿತ್ತು. (ಏಜೆನ್ಸೀಸ್)

    ಲೇಸ್​ ಬ್ರಾ ಆಕಾರದ ಫೇಸ್​ಮಾಸ್ಕ್​ಗಳಿಗೆ ಜಪಾನಿನಲ್ಲಿ ಭಾರಿ ಬೇಡಿಕೆ- ಮಾರುಕಟ್ಟೆ ಬಂದ ಕೆಲವೇ ನಿಮಿಷಗಳಲ್ಲಿ ಸ್ಟಾಕ್ ಖಾಲಿ!

    ಆ 22ರ ಯುವತಿ ಕೆಮ್ಮುತ್ತಲೇ ಇದ್ಳು- ಆಸ್ಪತ್ರೆಗೆ ದಾಖಲಾದರೆ ಕೆಮ್ಮಿನ ಇತಿಹಾಸ ಕೇಳಿ, ಕಾರಣ ನೋಡಿ ಅಲ್ಲಿದ್ದವರಿಗೆಲ್ಲ ಶಾಕ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts