More

    ಹೆದ್ದಾರಿ ದುರಸ್ತಿಗೆ ಮಾಸಾಂತ್ಯದ ಗಡುವು

    ಗಿರೀಶ್ ಗರಗ ಬೆಂಗಳೂರು

    ಲಾಕ್​ಡೌನ್​ನಿಂದ ಸ್ಥಗಿತಗೊಂಡಿದ್ದ ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ನಿರ್ವಹಣೆ ಕಾರ್ಯಕ್ಕೆ ಮರುಚಾಲನೆ ನೀಡಲಾಗುತ್ತಿದೆ. ಅದರಂತೆ ಜೂ.30ರೊಳಗೆ ಕಾಮಗಾರಿ ಪೂರ್ಣಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗಡುವು ನಿಗದಿ ಮಾಡಿದೆ.  ಕರೊನಾ ಭೀತಿಯಿಂದ ಕಳೆದೆರಡು ತಿಂಗಳಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಯಾವುದೇ ಕಾಮಗಾರಿಗಳು ನಡೆದಿಲ್ಲ.

    ಇದೀಗ ಎಲ್ಲ ಕಾಮಗಾರಿಗಳಿಗೆ ಮರುಚಾಲನೆ ನೀಡಲಾಗುತ್ತಿದ್ದು, ನಿರ್ವಹಣಾ ಕಾಮಗಾರಿ ಆರಂಭಕ್ಕೆ ನಿರ್ಧರಿಸಲಾಗಿದೆ. ಅದಕ್ಕಾಗಿ ಪ್ರಾದೇಶಿಕ ಅಧಿಕಾರಿ ಮತ್ತು ಯೋಜನಾ ನಿರ್ದೇಶಕರಿಗೆ ಎಲ್ಲ ದುರಸ್ತಿ ಕಾಮಗಾರಿ ಪೂರ್ಣಗೊಳಿಸುವಂತೆ ಆದೇಶಿಸಲಾಗಿದೆ.

    ಡ್ರೋನ್ ಸರ್ವೆ: ರಸ್ತೆ ದುರಸ್ತಿಗೂ ಮುನ್ನ ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎಂಬ ಕುರಿತು ತಿಳಿಸಲಾಗಿದೆ. ಅದರಂತೆ ಮೊದಲಿಗೆ ಎಲ್ಲೆಲ್ಲಿ ರಸ್ತೆಗಳು ಬಿರುಕು ಬಿಟ್ಟಿವೆ, ಗುಂಡಿ ಬಿದ್ದಿವೆ ಎಂಬಂತಹ ಮಾಹಿತಿಗಳನ್ನು ಸಂಗ್ರಹಿಸಬೇಕಿದೆ. ಅದಕ್ಕಾಗಿ ಮೂರು ರೀತಿಯ ಸರ್ವೆಗೆ ಸೂಚಿಸಲಾಗಿದೆ. ಕಾರ್​ಗಳಲ್ಲಿ ಕ್ಯಾಮರಾ ಅಳವಡಿಸಿ, ನೆರ್ಟÌಂಗ್ ಸರ್ವೆ ವಾಹನ ಮೂಲಕ ರಸ್ತೆಗಳ ಪರಿಶೀಲನೆ, ಜತೆಗೆ ಡ್ರೋನ್​ಗಳನ್ನು ಬಳಸುವಂತೆಯೂ ತಿಳಿಸಲಾಗಿದೆ. ರಸ್ತೆಗಳ ಮೇಲ್ಭಾಗದಲ್ಲಿ ಡ್ರೋನ್ ಸಂಚರಿಸಿ ಅದರ ದೃಶ್ಯವನ್ನು ಸೆರೆ ಹಿಡಿಯುತ್ತವೆ. ಆನಂತರ ಆ ದೃಶ್ಯವನ್ನಾಧರಿಸಿ ಎಲ್ಲೆಲ್ಲಿ ರಸ್ತೆ ಹಾಳಾಗಿದೆ ಎಂಬುದನ್ನು ತಿಳಿಯಬೇಕು ಎಂದು ಸೂಚಿಸಲಾಗಿದೆ.

    ಇದನ್ನೂ ಓದಿ   ಮೋದಿ ಮಾತೇ ಸ್ಫೂರ್ತಿಯಾಯ್ತಾ? ಲೋಕಲ್​ ಬ್ರ್ಯಾಂಡ್‌ಗಳಿಗೆ ಪ್ರಚಾರ ಕೊಡ್ತಾರಂತೆ ಸಾನಿಯಾ ಮಿರ್ಜಾ

    ಮಳೆಗಾಲಕ್ಕಾಗಿ ನಿರ್ವಹಣೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶದಂತೆ ಮಳೆಗಾಲಕ್ಕೂ ಮುನ್ನ ಈ ಕಾರ್ಯವಾಗಬೇಕಿದೆ. ಜೂನ್ ಅಂತ್ಯದ ವೇಳೆಗೆ ದೇಶಾದ್ಯಂತ ಮಳೆಗಾಲ ಆವರಿಸಲಿದೆ. ಅದಕ್ಕೂಮುನ್ನ ನಿರ್ವಹಣಾ ಕಾರ್ಯ ಪೂರ್ಣಗೊಳ್ಳಬೇಕು ಎಂದು ತಿಳಿಸಲಾಗಿದೆ. ಅದಕ್ಕಾಗಿ ರಸ್ತೆಗಳ ಪರಿಶೀಲನೆ ನಂತರ ಎಷ್ಟು ಕಡೆ ಗುಂಡಿ, ಬಿರುಕು ಬಿಟ್ಟಿವೆ ಎಂಬುದನ್ನು ವರದಿ ಮಾಡಬೇಕಿದೆ. ಆನಂತರ ನಿರ್ವಹಣಾ ಕಾರ್ಯಕ್ಕೆ ಫೀಲ್ಡ್ ಅಧಿಕಾರಿಗೆ ಸೂಚಿಸಬೇಕು ಎಂದು ಪ್ರಾದೇಶಿಕ ಅಧಿಕಾರಿ ಮತ್ತು ಯೋಜನಾ ನಿರ್ದೇಶಕರಿಗೆ ತಿಳಿಸಲಾಗಿದೆ.

    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಡಿ ಒಟ್ಟು 1.32 ಲಕ್ಷ ಕಿ.ಮೀ. ಉದ್ದದ ರಸ್ತೆಗಳಿವೆ. ಅದರಲ್ಲಿ 10,468 ಕಿ.ಮೀ. ಉದ್ದದ 557 ರಸ್ತೆಗಳು ಟೋಲ್ ವ್ಯಾಪ್ತಿಯಲ್ಲಿದೆ. ಇದನ್ನು ಟೋಲ್ ಸಂಸ್ಥೆಯೇ ನಿರ್ವಹಿಸಲಿದ್ದು, ಉಳಿದ 1.22 ಲಕ್ಷ ಕಿಮೀ ರಸ್ತೆಯ ಹಾನಿ ಭಾಗವನ್ನು ಪ್ರಾಧಿಕಾರ ದುರಸ್ತಿ ಮಾಡಲಿದೆ.

    3,979 ಕಿಮೀ ಹೊಸ ರಸ್ತೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2019-20ನೇ ಸಾಲಿನಲ್ಲಿ ಹೊಸದಾಗಿ 3,979 ಕಿ.ಮೀ. ಉದ್ದದ ಹೆದ್ದಾರಿ ನಿರ್ವಿುಸಿದೆ. ಈ ಅಂಕಿ-ಅಂಶ 15 ವರ್ಷಗಳಲ್ಲೇ (1995ರಿಂದೀಚೆಗೆ) ಅತಿ ಹೆಚ್ಚಿನದ್ದಾಗಿದೆ. ಮುಂದಿನ 5 ವರ್ಷಗಳಲ್ಲಿ 5.35 ಲಕ್ಷ ಕೋಟಿ ರೂ. ವೆಚ್ಚದಲ್ಲಿ 34,800 ಕಿ.ಮೀ. ಉದ್ದದ ಹೆದ್ದಾರಿ ನಿರ್ವಣದ ಗುರಿ ಹೊಂದಲಾಗಿದೆ.

    ಭಾವಚಿತ್ರ ಅಪ್​ಲೋಡ್

    ನಿರ್ವಹಣಾ ಕಾರ್ಯದಲ್ಲಿ ಲೋಪವಾಗದಂತೆ ನೋಡಿಕೊಳ್ಳಲು ಪ್ರತಿಯೊಂದರ ಮೇಲೂ ನಿಗಾ ವಹಿಸಲಾಗುತ್ತದೆ. ದುರಸ್ತಿಗೆ ಮುನ್ನ ಮತ್ತು ನಂತರದ ಭಾವಚಿತ್ರಗಳನ್ನು ಪ್ರಾಧಿಕಾರ ನಿಗದಿ ಮಾಡಿರುವ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಲಾಗುತ್ತದೆ. ಅದನ್ನಾಧರಸಿ ದುರಸ್ತಿಯ ಗುಣಮಟ್ಟವನ್ನು ನಿರ್ಧರಿಸಲಾಗುತ್ತದೆ.

    ‘ಇಂಡಿಯಾ’ನೋ, ‘ಭಾರತ’ನೋ? ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts