More

    ರಸ್ತೆ, ಚರಂಡಿ ದುರಸ್ತಿಪಡಿಸಲು ಕನಕದಾಸರ ನಗರ ನಿವಾಸಿಗಳ ಆಗ್ರಹ

    ರಾಣೆಬೆನ್ನೂರ: ಇಲ್ಲಿಯ ಕನಕದಾಸ ನಗರದ ರಸ್ತೆ ಡಾಂಬರೀಕರಣ ಕಿತ್ತು, ತಗ್ಗು ಗುಂಡಿ ಬಿದ್ದು ರಸ್ತೆ ಹಾಳಾಗಿದೆ. ರಸ್ತೆ ಮೇಲೆ ಸಂಚರಿಸುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಚರಂಡಿಗಳು ಅಲ್ಲಲ್ಲಿ ಒಡೆದು ಹೋಗಿದ್ದು, ಸ್ಥಳೀಯರಿಗೆ ತೀವ್ರ ತೊಂದರೆ ಉಂಟಾಗಿದೆ.
    ನಗರಸಭೆ ವ್ಯಾಪ್ತಿಯ ರಸ್ತೆ ಹಾಗೂ ಚರಂಡಿಗಳು ಹಾಳಾಗಿವೆ ಹೋಗಿವೆ. ಮಳೆಗಾಲದ ನೀರಿನ ರಭಸಕ್ಕೆ ಡಾಂಬರೀಕರಣ ಕಿತ್ತು ಹೋಗಿದೆ. ಚರಂಡಿ ಒಡೆದು ಹೋಗಿದ್ದರಿಂದ ನೀರೆಲ್ಲ ಈ ರಸ್ತೆಯಲ್ಲಿನ ಗುಂಡಿಯಲ್ಲಿ ತುಂಬುತ್ತಿರುವುದರಿಂದ ವಾಹನ ಸವಾರರಿಗೆ, ದಾರಿ ಹೋಕರಿಗೆ ತೊಂದರೆಯಾಗುತ್ತಿದೆ.
    ಕನಕದಾಸ ನಗರದ ನಿವಾಸಿಗಳು ದೈನಂದಿನ ಕೆಲಸಕ್ಕಾಗಿ ಓಡಾಡುವ ರಸ್ತೆ ಇದಾಗಿದೆ. ಎಲ್ಲರೂ ಇದೇ ರಸ್ತೆ ಮಾರ್ಗವಾಗಿ ಓಡಾಡುತ್ತಾರೆ. ಆದರೆ, ರಸ್ತೆ ಹಾಳಾಗಿ ವರ್ಷಗಳೇ ಕಳೆದರೂ ದುರಸ್ತಿ ಕಂಡಿಲ್ಲ. ನಗರಸಭೆ ರಸ್ತೆಗಳ ಸುಧಾರಣೆಗೆ ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದರೂ ಕನಕದಾಸ ನಗರದಲ್ಲಿ ಮಾತ್ರ ಅಭಿವೃದ್ಧಿ ಮರಿಚಿಕೆಯಾಗಿದೆ.
    ಇಲ್ಲಿಯ ಸಮಸ್ಯೆಗಳ ಕುರಿತು ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ವಾರ್ಡ್ ಸದಸ್ಯರ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ದಿನದಲ್ಲಾದರೂ ಸಮಸ್ಯೆ ಬಗೆಹರಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts