More

    ರೈಲ್ವೇ ಸ್ಟೇಷನ್​ನಲ್ಲಿ ಡ್ರಮ್​​ನೊಳಗೆ ಮಹಿಳೆಯ ಶವ ಪತ್ತೆ; ಪೊಲೀಸ್ ಅಧಿಕಾರಿಗಳ ದೌಡು, ವ್ಯಾಪಕ ಪರಿಶೀಲನೆ

    ಬೆಂಗಳೂರು: ರಾಜಧಾನಿ ಬೆಂಗಳೂರಿನ ರೈಲ್ವೇ ಸ್ಟೇಷನ್​ನಲ್ಲಿ ಡ್ರಮ್​ನೊಳಗೆ ಮಹಿಳೆಯ ಶವ ಪತ್ತೆಯಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ವ್ಯಾಪಕ ಪರಿಶೀಲನೆ ನಡೆಸಲಾಗಿದ್ದು, ತನಿಖೆ ಆರಂಭಗೊಂಡಿದೆ.

    ಬೈಯಪ್ಪನಹಳ್ಳಿ ರೈಲ್ವೇ ಸ್ಟೇಷನ್ ಮೇನ್ ಗೇಟ್ ಬಳಿಯೇ ಈ ಶವ ಇರಿಸಿ ಹೋಗಲಾಗಿದೆ. ಸತ್ತಿರುವ ಮಹಿಳೆಯ ವಯಸ್ಸು ಸುಮಾರು 30-35 ವರ್ಷ ಎಂದು ಅಂದಾಜಿಸಲಾಗಿದೆ. ತನಿಖೆಗಿಳಿದ ಪೊಲೀಸರಿಗೆ ಶವ ಇದ್ದ ಡ್ರಮ್​ ಮೂವರು ಜೊತೆಯಾಗಿ ಬೆಳಗ್ಗೆ 10 ಗಂಟೆ ಸುಮಾರಿಗೆ ಆಟೋದಲ್ಲಿ ತಂದಿಟ್ಟು ಹೋಗಿರುವುದು ಸಿಸಿಟಿವಿ ದೃಶ್ಯಾವಳಿ ಮೂಲಕ ತಿಳಿದುಬಂದಿದೆ.

    ಇದನ್ನೂ ಓದಿ: ತಾತನ ಮರಣದ ಬೆನ್ನಿಗೇ ಮೊಮ್ಮಗನಿಗೂ ಸಾವು; ಮಾವನ ಕಣ್ಣೆದುರೇ ಪ್ರಜ್ಞೆ ತಪ್ಪಿ ಬಿದ್ದಿದ್ದ 17 ವರ್ಷದ ಹುಡುಗ!

    ದುರ್ವಾಸನೆ ಬರುತ್ತಿರುವ ಬಗ್ಗೆ ರಾತ್ರಿ ಏಳೂವರೆ ಸುಮಾರಿಗೆ ನಮಗೆ ಮಾಹಿತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಡ್ರಮ್​ನಲ್ಲಿ ಶವ ಪತ್ತೆಯಾಗಿದೆ ಎಂದು ರೈಲ್ವೆ ಎಸ್​ಪಿ ಸೌಮ್ಯಲತಾ ತಿಳಿಸಿದ್ದಾರೆ. ಸದ್ಯ ಎಲ್ಲಾ ಪರಿಶೀಲನೆ ಮಾಡಲಾಗಿದ್ದು, ಮೃತರು ಯಾರು, ಆರೋಪಿಗಳ ಯಾರು ಎನ್ನುವ ಬಗ್ಗೆ ಪತ್ತೆ ಕಾರ್ಯಾಚರಣೆ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.

    ರೈಲ್ವೇ ಸ್ಟೇಷನ್​ನಲ್ಲಿ ಡ್ರಮ್​​ನೊಳಗೆ ಮಹಿಳೆಯ ಶವ ಪತ್ತೆ; ಪೊಲೀಸ್ ಅಧಿಕಾರಿಗಳ ದೌಡು, ವ್ಯಾಪಕ ಪರಿಶೀಲನೆ
    ಶವವಿದ್ದ ಡ್ರಮ್

    ಇದನ್ನೂ ಓದಿ: ಕಲ್ಯಾಣಮಂಟಪಕ್ಕೂ ಕುಡಿದೇ ಬಂದ ವರ, ಮದುವೆಯೇ ಬೇಡ ಎಂದ ವಧು!

    ಜನವರಿಯಲ್ಲಿ ಇದೇ ರೀತಿ ಯಶವಂತಪುರ ರೈಲ್ವೆ ಸ್ಟೇಷನ್​ ಬಳಿ ಡ್ರಮ್​ನಲ್ಲಿ ಒಂದು ಶವ ಪತ್ತೆಯಾಗಿತ್ತು. ಆ ಪ್ರಕರಣದಲ್ಲಿ ಸತ್ತವರು ಹಾಗೂ ಕೊಂದವರು ಯಾರು ಎಂಬುದು ಇನ್ನೂ ಬಯಲಾಗಿಲ್ಲ. ಅಷ್ಟರಲ್ಲಾಗಲೇ ಈಗ ಇನ್ನೊಂದು ಅಂಥದ್ದೇ ಪ್ರಕರಣ ನಡೆದಿರುವುದು ಆತಂಕ ಸೃಷ್ಟಿಸಿದೆ. ಮಾತ್ರವಲ್ಲ, ಇದು ಸೀರಿಯಲ್ ಕಿಲ್ಲರ್ ಕೆಲಸ ಇದ್ದಿರಬಹುದೇ ಎಂಬ ಅನುಮಾನವನ್ನೂ ಮೂಡಿಸಿದೆ.

    ರೈಲ್ವೇ ಸ್ಟೇಷನ್​ನಲ್ಲಿ ಡ್ರಮ್​​ನೊಳಗೆ ಮಹಿಳೆಯ ಶವ ಪತ್ತೆ; ಪೊಲೀಸ್ ಅಧಿಕಾರಿಗಳ ದೌಡು, ವ್ಯಾಪಕ ಪರಿಶೀಲನೆ
    ಪೊಲೀಸರಿಂದ ಪರಿಶೀಲನೆ

    ಬೆಂಗಳೂರು-ಮೈಸೂರು ದಶಪಥ: ನಾಳೆಯಿಂದಲೇ ಟೋಲ್ ಕಲೆಕ್ಷನ್; ಪೊಲೀಸ್ ಭದ್ರತೆಯಲ್ಲಿ ಹಣ ಸಂಗ್ರಹಕ್ಕೆ ಸಜ್ಜು

    ಮೊಬೈಲ್​ಫೋನ್ ಕಳೆದುಹೋದರೆ ತಕ್ಷಣ ಹೀಗೆ ಮಾಡಿ; ಕೊರಿಯರ್​ನಲ್ಲಿ ಫೋನ್​ ವಾಪಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts