More

    ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆಯನ್ನು ಕಾರಿನಲ್ಲಿ ಎಳೆದೊಯ್ದು ಪಾನಮತ್ತ ವ್ಯಕ್ತಿಯಿಂದ ದೌರ್ಜನ್ಯ!

    ನವದೆಹಲಿ: ಪಾನಮತ್ತ ವ್ಯಕ್ತಿಯೊಬ್ಬ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲಿವಾಲ್​​ ಅವರನ್ನು ಸುಮಾರು 10 ರಿಂದ 15 ಮೀಟರ್ ದೂರ ಕಾರಿನಲ್ಲಿ​ ಎಳೆದೊಯ್ದ ಅಮಾನವೀಯ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

    ಕಾರಿನಲ್ಲಿ ಕೂರುವಂತೆ ಒತ್ತಾಯಿಸಿದ ವ್ಯಕ್ತಿಗೆ ಛೀಮಾರಿ ಹಾಕಲು ಡ್ರೈವರ್​ ಸೀಟಿನ ಬಳಿ ಹೋದಾಗ ಆತ ಇದ್ದಕ್ಕಿದ್ದಂತೆ ಕಿಟಕಿಯ ಗಾಜನ್ನು ಮೇಲಕ್ಕೆ ಏರಿಸಿದ್ದಾನೆ. ಈ ವೇಳೆ ಸ್ವಾತಿ ಅವರ ಕೈ ಕಿಟಕಿಗೆ ಸಿಲುಕಿದೆ. ಬಳಿಕ ಆಕೆಯನ್ನು ಕಾರು ಚಾಲಕ ಹಾಗೆಯೇ ಎಳೆದೊಯ್ದಿದ್ದಾನೆ.

    ದೆಹಲಿಯ ಉಪ ಪೊಲೀಸ್​ ಆಯುಕ್ತ (ದಕ್ಷಿಣ) ಚಂದನ್​ ಚೌಧರಿ ಅವರ ಪ್ರಕಾರ ಜನವರಿ 19ರಂದು ಬೆಳಗಿನ ಜಾವ 3.11ಕ್ಕೆ ಒಂದು ಪಿಸಿಆರ್ ಕರೆ ಬಂದಿತು. ಏಮ್ಸ್​ ಬಸ್​ ನಿಲ್ದಾಣದ ಬಳಿ ಮಹಿಳೆಯೊಬ್ಬಳನ್ನು ಕಾರಿನಲ್ಲಿ ಎಳೆದೊಯ್ಯಲಾಗಿದೆ ಎಂಬ ಮಾಹಿತಿ ಸಿಕ್ಕಿತ. ಗರುಡ 1 (ದಕ್ಷಿಣ ಜಿಲ್ಲೆಯಲ್ಲಿ ವಿಶೇಷ ಗಸ್ತು ವಾಹನ) ಸಿಬ್ಬಂದಿಯೇ ಕಂಟ್ರೋಲ್​ ರೂಮ್​ಗೆ ಕರೆ ಮಾಡಿದ್ದರು. ಏಮ್ಸ್​ನ ಗೇಟ್​ ನಂಬರ್​ 2ರ ಎದುರಿಗಿರುವ ಫುಟ್​ಪಾತ್​ನಲ್ಲಿ ಮಹಿಳೆಯೊಬ್ಬಳು ನಿಂತಿರುವುದು ಕಂಡುಬಂದು, ಆಕೆಯನ್ನು ವಿಚಾರಿಸಿದಾಗ ಈ ಸಂಗತಿ ಬಯಲಾಗಿದೆ ಎಂದು ಡಿಸಿಪಿ ತಿಳಿಸಿದರು.

    ಓರ್ವ ವ್ಯಕ್ತಿ ಬಲೇನೋ ಕಾರು ಚಲಾಯಿಸುತ್ತಿದ್ದ. ಆತ ಕುಡಿದಿದ್ದ ಮತ್ತು ನನ್ನ ಬಳಿ ಕಾರು ನಿಲ್ಲಿಸಿ, ಒಳಗೆ ಕುಳಿತುಕೊಳ್ಳುವಂತೆ ಕೆಟ್ಟ ಉದ್ದೇಶದಿಂದ ಕೇಳಿದ. ನಾನು ತಿರಸ್ಕರಿಸಿದಾಗ ಅಲ್ಲಿಂದ ಹೊರಟ ಆತ, ಮತ್ತೆ ಸರ್ವೀಸ್​ ಲೇನ್​ನಲ್ಲಿ ಯೂಟರ್ನ್​ ಮಾಡಿಕೊಂಡು ಬಂದು, ಮತ್ತೆ ಕಾರಿನ ಒಳಗೆ ಕುಳಿತುಕೊಳ್ಳುವಂತೆ ಹೇಳಿದ. ನಾನು ಮತ್ತೆ ತಿರಸ್ಕರಿಸಿ, ಆತನಿಗೆ ಛೀಮಾರಿ ಹಾಕಲು ಚಾಲಕನ ಸೀಟಿನ ಪಕ್ಕ ತೆರಳಿದೆ. ಈ ವೇಳೆ ದಿಢೀರನೇ ಕಿಟಕಿ ಬಾಗಿಲು ಮುಚ್ಚಿದ. ನನ್ನ ಕೈ ಕಿಟಕಿ ಗಾಜಿನ ಮಧ್ಯೆ ಸಿಲುಕಿತು. ನಂತರ ಸುಮಾರು 10 ರಿಂದ 15 ಮೀಟರ್​ ದೂರ ನನ್ನನ್ನು ಎಳೆದೊಯ್ದ ಎಂದು ಸಂತ್ರಸ್ತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಬಲೇನೋ ವಾಹನವನ್ನು ಬರುಡ ಗಸ್ತು ಪಡೆ ಅದೇ ದಿನ 3.34ಕ್ಕೆ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ಸಂತ್ರಸ್ತೆ ಸ್ವಾತಿ ಮಾಲಿವಾಲ್​ ಎಂದು ಆನಂತರ ಗೊತ್ತಾಗಿದೆ. ಅವರು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ. ಆರೋಪಿ ಮತ್ತು ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

    ಕೋಟ್ಲಾ ಮುಬಾರಕ್ ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಸಂಗಮ್ ವಿಹಾರ್ ನಿವಾಸಿ ಹರೀಶ್ ಚಂದ್ರ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಆಡಿ ನಲಿಯಬೇಕಾದ ವಯಸ್ಸಲ್ಲಿ ಸನ್ಯಾಸತ್ವ ಸ್ವೀಕರಿಸಿದ ವಜ್ರದ ವ್ಯಾಪಾರಿಯ ಮಗಳು!

    ಹಿಂದುಗಳಿಗೆ ಮಾತ್ರ ಪ್ರವೇಶ! ದೇವರ ದರ್ಶನ ಸಿಗದಿದ್ದಕ್ಕೆ ಎಂಟ್ರಿ ಬುಕ್​ನಲ್ಲಿ ಖಡಕ್​ ಪ್ರತಿಕ್ರಿಯೆ ಕೊಟ್ಟ ಅಮಲಾ

    ಸಾವಿನ ಬಗ್ಗೆ ಮಾತು​…. ಅಭಿಮಾನಿಗಳನ್ನು ಚಿಂತೆಗೀಡುಮಾಡಿದ ಉರ್ಫಿ ಜಾವೇದ್​ ಟ್ವೀಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts