More

    ನಾನು ನಿರ್ದೇಶಕ ಅಂತ ಅವರಿಗೆ ಪ್ರೂವ್​ ಮಾಡಬೇಕಿಲ್ಲ …

    ನಿರ್ದೇಶಕ ದಯಾಳ್​ ಸಿಟ್ಟಾಗಿದ್ದಾರೆ. ಅದಕ್ಕೆ ಕಾರಣ ಇತ್ತೀಚೆಗಷ್ಟೇ ಪ್ರಾರಂಭವಾದ ಎಫ್​.ಯು.ಸಿ ಎಂಬ ಸಂಸ್ಥೆಯಿಂದ ಅವರ ಅರ್ಜಿ ತಿರಸ್ಕಾರಗೊಂಡಿದ್ದು. ಅದೇ ಕಾರಣಕ್ಕೆ ಅವರು ‘ಲೂಸಿಯಾ’ ಪವನ್​ ಕುಮಾರ್​ ಸೇರಿದಂತೆ ಹಲವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ನೆಪೋಮೀಟರ್​ ಮಾಡಿದ್ದು ಹಣ ಮಾಡೋ ಉದ್ದೇಶದಿಂದಲ್ಲ …

    ಕಳೆದ ತಿಂಗಳು ಪವನ್​ ಕುಮಾರ್​, ಫಿಲ್ಮ್​ಮೇಕರ್ಸ್​ ಯುನೈಟೆಡ್​ ಕ್ಲಬ್​ (ಎಫ್​.ಯು.ಸಿ) ಎಂಬ ಕ್ಲಬ್​ ಪ್ರಾರಂಭಿಸಿದ್ದರು. ಸಿನಿಮಾ ನಿರ್ದೇಶಕರೆಲ್ಲಾ ಸೇರಿ ಚಿತ್ರರಂಗದ ಬಗ್ಗೆ ಚರ್ಚೆ ಮಾಡುವುದಕ್ಕೆ, ಸಿನಿಮಾಗಳ ವಿಮರ್ಶೆ ಮಾಡುವುದಕ್ಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತಮ್ತಮ್ಮ ಚಿತ್ರಗಳ ಬಗ್ಗೆ ಮಾತನಾಡುವುದಕ್ಕೆ ಸೃಷ್ಟಿಸಿಕೊಂಡ ವೇದಿಕೆ ಇದಾಗಿತ್ತು.

    ಈ ಕ್ಲಬ್​ನಲ್ಲಿ ಪವನ್​ ಅಲ್ಲದೇ, ಯೋಗರಾಜ್​ ಭಟ್​, ಅಭಯ್​ ಸಿಂಹ, ಜಯತೀರ್ಥ, ಮಂಸೋರೆ ಸೇರಿದಂತೆ ಕನ್ನಡದ ಹಲವು ಜನಪ್ರಿಯ ನಿರ್ದೇಶಕರು ಸದಸ್ಯರಾಗಿದ್ದಾರೆ. ಈ ಕ್ಲಬ್​ಗೆ ಸದಸ್ಯರಾಗುವುದಕ್ಕೆ ದಯಾಳ್​ ಸಹ ಅರ್ಜಿ ಸಲ್ಲಿಸಿದ್ದರು. ಆದರೆ, ದಯಾಳ್​ ಸದಸ್ಯರಾಗುವುದಕ್ಕೆ ಸಾಧ್ಯವಿಲ್ಲ ಎಂದು ಪವನ್​ ಇಮೇಲ್​ ಮೂಲಕ ತಿಳಿಸಿದ್ದಾರೆ. ಇದರಿಂದ ದಯಾಳ್​ ಸಿಟ್ಟಾಗಿದ್ದಾರೆ.

    ದಯಾಳ್​ ಅವರ ಅರ್ಜಿ ತಿರಸ್ಕೃತಗೊಂಡಿರುವ ಬಗ್ಗೆ ಪವನ್​ ಒಂದು ಇಮೇಲ್​ ಮಾಡಿದ್ದು, ಅದರಲ್ಲಿ ದಯಾಳ್​ ಅವರು ಸದಸ್ಯರಾಗಿ ಯಾಕೆ ಆಯ್ಕೆಯಾಗಲಿಲ್ಲ ಎಂದು ಸಹ ಬಹಿರಂಗಪಡಿಸಿದ್ದಾರೆ. ಅದರ ಪ್ರಕಾರ, ಎಫ್​ಯುಸಿಗೆ ಯಾರ್ಯಾರು ಸದಸ್ಯರಾಗಬೇಕು ಎಂದು ಹಳೆಯ ಸದಸ್ಯರು ತೀರ್ಮಾನಿಸುತ್ತಾರಂತೆ. ಇರುವ ಸದಸ್ಯರ ಪೈಕಿ 70 ಪ್ರತಿಶಿತ ಜನರು ಇಂಥವರು ಸದಸ್ಯರಾಗಬಹುದು ಎಂದು ಮತಚಲಾಯಿಸದರೆ ಮಾತ್ರ ಸದಸ್ಯರಾಗಬಹುದು. ಗುಂಪಿನಲ್ಲಿರುವ ಹಲವರು ದಯಾಳ್​ ವಿರುದ್ಧ ಮತಚಲಾಯಿಸಿರುವುದರಿಂದ ಅವರ ಸದಸ್ಯತ್ವ ತಿರಸ್ಕೃತಗೊಂಡಿದೆ.

    ಇದನ್ನೂ ಓದಿ: ಸರೋಜ್ ಖಾನ್​ ಜತೆ ಕೆಲಸ ಮಾಡಿದ್ದೇ ನನ್ನ ಭಾಗ್ಯ; ಪ್ರಿಯಾಂಕಾ ಉಪೇಂದ್ರ

    ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ‘ಈ ಕುರಿತು ಜೂನ್​ 16ರಂದೇ ನನಗೆ ಇಮೇಲ್​ ಬಂದಿತ್ತು. ಈ ಬಗ್ಗೆ ಮಾತನಾಡುವುದ ಬೇಡ ಎಂದು ಸುಮ್ಮನೆ ಇದ್ದೆ. ಆದರೆ, ಈ ಕ್ಲಬ್​ನ ಗುಂಪುಗಾರಿಕೆ ನೋಡಿ ಬೇಸರವಾಗಿದೆ. ನಾನೊಬ್ಬ ನಿರ್ದೇಶಕ. ಸತತವಾಗಿ ಚಿತ್ರಗಳನ್ನು ಮಾಡುತ್ತಿದ್ದೇನೆ. ನಾನು ನಿರ್ದೇಶಕ ಅಲ್ಲ ಎಂದು ಹೇಳಲು ಅವರು ಯಾರು. ನಾನು ನನ್ನ ಕೆಲಸವನ್ನು ಅವರಿಗೆ ಪ್ರೂವ್​ ಮಾಡಬೇಕಿಲ್ಲ’ ಎನ್ನುತ್ತಾರೆ ದಯಾಳ್​.

    ಸದ್ದಿಲ್ಲದೆ ಸಪ್ತಪದಿ ತುಳಿದ್ರಾ ‘ಐರಾವತ’ ಬೆಡಗಿ ಊರ್ವಶಿ ರೌಟೇಲಾ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts