More

    ಟಿಕ್ ಟಾಕ್​ಗೆ ಎಳ್ಳು ನೀರು ಬಿಟ್ಟ ದರ್ಶನ್​ ಅಭಿಮಾನಿಗಳು..

    ಚೀನಾ ಉತ್ಪನ್ನಗಳಿಗೆ ಬಳಕೆಯನ್ನು ನಿಷೇಧ ಮಾಡುವ ನಿಟ್ಟಿನಲ್ಲಿ ಸ್ವಯಂ ಪ್ರೇರಿತರಾಗಿ ಒಂದಷ್ಟು ಜನ ಮುಂದೆ ಬಂದು, ನಾವಿನ್ನು ಚೀನಾ ಉತ್ಪನ್ನಗಳನ್ನು, ಅಪ್ಲಿಕೇಷನ್​ಗಳನ್ನು ಬಳಸುವುದಿಲ್ಲ ಎನ್ನುತ್ತಿದ್ದಾರೆ. ಮತ್ತೆ ಕೆಲವರು ರೊಚ್ಚಿಗೆದ್ದು, ಚೀನಿ ವಸ್ತುಗಳಿಗೆ ನಡುರಸ್ತೆಯಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
    ಇದೀಗ ಸ್ಯಾಂಡಲ್​ವುಡ್​ ನಟ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಅಭಿಮಾನಿಗಳೂ, ಆ ಕಾರ್ಯಕ್ಕೆ ಇಳಿದಿದ್ದಾರೆ. ಹಾಗಂತ ಬೀದಿಗಿಳಿದು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕುತ್ತಿಲ್ಲ. ಬದಲಿಗೆ ನೆಚ್ಚಿನ ನಟನಿಗಾಗಿಯೇ ತೆರೆದಿದ್ದ ಡಿ ಟೀಮ್​ ಟಿಕ್​ಟಾಕ್​ ಖಾತೆಯನ್ನು ಡಿಲಿಟ್​ ಮಾಡಿ, ರಾಷ್ಟ್ರಪ್ರೇಮವನ್ನು ಹೊರಹಾಕಿದ್ದಾರೆ.

    ಇದನ್ನೂ ಓದಿ: 2016ರಲ್ಲೇ ಸಾವಿನ ಮುನ್ಸೂಚನೆ ನೀಡಿದ್ರಾ ಸುಶಾಂತ್!​; ತಾಯಿ ನೆನೆದು ಬರೆದ ಮತ್ತೊಂದು ಪತ್ರ ವೈರಲ್​…

    ಹೌದು, 23 ಸಾವಿರಕ್ಕೂ ಅಧಿಕ ಫಾಲೋವರ್ಸ್​ ಹೊಂದಿರು ಡಿ ಟೀಮ್​ ಖಾತೆ, ಇಲ್ಲಿಯವರೆಗೂ ನೂರಾರು ವಿಡಿಯೋಗಳನ್ನು ಮಾಡಿ ಹಂಚಿಕೊಂಡಿತ್ತು. 7 ಲಕ್ಷಕ್ಕೂ ಅಧಿಕ ಲೈಕ್ಸ್ ಗಳೂ ಸಂದಾಯವಾಗಿದ್ದವು. ಇದೀಗ ಭಾರತೀಯ ಸೈನಿಕರ ಮೇಲೆ ಚೀನಾ ನಡೆಸಿದ ದಾಳಿ ಖಂಡಿಸಿ, ಚೀನಾದ ಟಿಕ್​ ಟಾಕ್​ ಆ್ಯಪ್​ ಸೇರಿ ಇನ್ನೂ ಕೆಲವು ಆ್ಯಪ್​ಗಳನ್ನು ಅನ್​ ಇನ್ಸ್ಟಾಲ್​ ಮಾಡಿ, ರಾಷ್ಟ್ರಭಕ್ತಿಗೆ ಜೈ ಎಂದಿದ್ದಾರೆ.

    ಇದನ್ನೂ ಓದಿ: ರಜನಿಕಾಂತ್​ ಮನೆ ಮೇಲೆ ಬಾಂಬ್​ ದಾಳಿ ಬೆದರಿಕೆ!

    ಆ್ಯಪ್​ ಕಿತ್ತಾಕುವುದರ ಜತೆಗೆ ನೀವೂ ಈ ಕಾರ್ಯಕ್ಕೆ ಮುಂದಾಗಿ. ಈಗಲೇ ಆ್ಯಪ್​ ಸೇರಿ ಚೀನಿ ಉತ್ಪನ್ನಗಳನ್ನು ಕೈ ಬಿಟ್ಟು ಸ್ವದೇಶಿಯತ್ತ ಮುಖ ಮಾಡೋಣ ಎಂಬ ಸಂದೇಶವನ್ನೂ ನೀಡಿದ್ದಾರೆ. ಅಭಿಮಾನಿಗಳ ಈ ಸ್ವಯಂ ಪ್ರೇರಿತ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚಿಗೆ ವ್ಯಕ್ತವಾಗುತ್ತಿದ್ದು, ಒಂದಷ್ಟು ಮಂದಿ ಡಿಲಿಟ್​ ಮಾಡಿರುವ ಸ್ಕ್ರೀನ್​ ಶಾಟ್​ಗಳನ್ನು ಹಂಚಿಕೊಂಡಿದ್ದಾರೆ.

    ಜೈ ಡಿ ಬಾಸ್ ಜೈ ತೂಗುದೀಪ

    ಟಿಕ್ ಟಾಕ್ ಅಪ್ಲಿಕೇಷನ್ ಅಲ್ಲಿ ಇದ್ದ ನಮ್ಮ ತೂಗುದೀಪ 'ಡಿ' ಟೀಮ್ ಖಾತೆಯನ್ನು ಪರಮನೆಂಟ್ ಆಗಿ ಡಿಲೀಟ್ ಮಾಡಲಾಗಿದೆಚೀನಾದ ಅಪ್ಲಿಕೇಷನ್‌ಗಳನ್ನ ಮೊಬೈಲಿನಿಂದ ಕಿತ್ತು ಬಿಸಾಕೋಣ… ಟಿಕ್ ಟಾಕ್ ಸೇರಿದಂತೆ ಹಲವು ಅಪ್ಲಿಕೇಷನ್‌ಗಳನ್ನು ಅನ್ ಇನ್ಸ್ಟಾಲ್ ಮಾಡಿದ್ದೇವೆ ಇದು ಚೀನಾದ ವಿರುದ್ಧದ ನಮ್ಮ ಹೋರಾಟ… ನೀವೂ ಮಾಡಿ ಒತ್ತಾಯಿಸ್ತಿಲ್ಲ… #DeleteChinaApps

    Thoogudeepa 'D' Team – R ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಜೂನ್ 18, 2020

    ಬಾಲಿವುಡ್​ನಲ್ಲಿ ಸಿನಿಮಾ ಆಗ್ತಿದೆ ಸುಶಾಂತ್​ ಆತ್ಮಹತ್ಯೆ ಪ್ರಕರಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts