More

    ಲಿಂಗಾಯತರ ಮೇಲೆ ಹೆಚ್ಚಿದ ದೌರ್ಜನ್ಯ

    ಜೇವರ್ಗಿ: ಜಿಲ್ಲೆಯಲ್ಲಿ ವೀರಶೈವ ಲಿಂಗಾಯತರ ಮೇಲೆ ನಿರಂತರ ಹಲ್ಲೆ, ದೌರ್ಜನ್ಯ ಪ್ರಕರಣಗಳು ನಡೆಸುತ್ತಿವೆ. ಅಲ್ಲದೆ ಸುಳ್ಳು ಜಾತಿ ನಿಂದನೆ ಕೇಸ್‌ಗಳನ್ನು ದಾಖಲಿಸಿ ಬೆದರಿಸಲಾಗುತ್ತಿದೆ. ಇದರಿಂದಾಗಿ ಸಮಾಜದವರು ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಸಿದ್ದು ಸಾಹು ಅಂಗಡಿ ಹೇಳಿದರು.

    ಕೋಟನೂರ (ಡಿ) ಗ್ರಾಮದಲ್ಲಿ ಲಿಂಗಾಯತರ ಮನೆಗಳಿಗೆ ನುಗ್ಗಿ ಮಹಿಳೆಯರು ಸೇರಿ ಸಿಕ್ಕವರ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ ಘಟನೆ ಖಂಡಿಸಿ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಮಾತನಾಡಿ, ವೀರಶೈವ ಲಿಂಗಾಯತ ಸಮಾಜವೂ ಬಸವಣ್ಣನ ತತ್ವದಂತೆ ಬದುಕು ನಡೆಸುತ್ತಿದೆ. ಎಲ್ಲ ಸಮುದಾಯಗಳನ್ನು ಸಮಾನವಾಗಿ ನೋಡಿಕೊಂಡು ಸಾಗುತ್ತಿದೆ. ಆದರೆ ಕೋಟನೂರ(ಡಿ) ಗ್ರಾಮದಲ್ಲಿ ನಡೆದ ಘಟನೆ ಸಂವಿಧಾನಕ್ಕೆ ಅಪಮಾನ ಮಾಡಿದಂತಾಗಿದೆ ಎಂದು ದೂರಿದರು.

    ಪ್ರಮುಖರಾದ ಚಂದ್ರಶೇಖರ ಸೀರಿ, ವಿಶ್ವನಾಥ ಇಮ್ಮಣ್ಣಿ, ಶ್ರೀಶೈಲಗೌಡ ಕರಕಿಹಳ್ಳಿ, ವಿಜಯಕುಮಾರ ಸೊನ್ನ, ರವಿ ಪಾಟೀಲ್, ಗುರುಲಿಂಗಯ್ಯಸ್ವಾಮಿ ಯನಗುಂಟಿ, ಸಂಗನಗೌಡ ಪಾಟೀಲ್ ಆಂದೋಲಾ, ಪ್ರಭುಗೌಡ ಪಾಟೀಲ್, ಸಂಗನಗೌಡ ಹಿರೇಗೌಡ, ವಿಜಯಕುಮಾರ ಹಂದನೂರ, ರಾಜಶೇಖರ ವಾರದ, ದೊಡ್ಡಪ್ಪಗೌಡ ಪಾಟೀಲ್ ಕಲ್ಲಹಂಗರಗಾ, ವಿಶ್ವನಾಥ ಹಳಿಮನಿ, ಸುರೇಶ ಹಿರೇಮಠ, ಸಂತೋಷ ದೇಸಾಯಿ, ವೀರೇಶ ಜೇವರ್ಗಿ (ಕೆ), ಭರತ ಹುಗ್ಗಿ, ವಿಶ್ವನಾಥ ಹಳಿಮನಿ, ಭಗವಂತರಾಯ ಶಿವಣಕರ್, ದೇವಿಂದ್ರ ಮದ್ದರಕಿ, ನಾಗರಾಜ ಹಂದನೂರ ಇತರರಿದ್ದರು.

    ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಬಳಿಕ ತಹಸೀಲ್ದಾರ್ ಮಲ್ಲಣ್ಣ ಯಲಗೋಡ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

    ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಲಿಂಗಾಯತರ ಮೇಲೆ ನಿರಂತರ ಶೋಷಣೆ ಹಾಗೂ ದೌರ್ಜನ್ಯ ನಡೆಯುತ್ತಿದೆ. ಸಮಾಜ ಇದನ್ನು ಎಂದಿಗೂ ಸಹಿಸಲ್ಲ. ಕೂಡಲೇ ರಾಜ್ಯ ಸರ್ಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷÈ ವಹಿಸಿದರೆ ಸಮಾಜದಿಂದ ನಿರಂತರ ಹೋರಾಟ ನಡೆಸಬೇಕಾಗುತ್ತದೆ.
    | ಸಿದ್ದು ಸಾಹು ಅಂಗಡಿ, ತಾಲೂಕು ಅಧ್ಯಕ್ಷ, ವೀರಶೈವ ಸಮಾಜ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts