More

    ಗೋಲ್ಡನ್ ಮಿಲ್ಕ್: ಅದ್ಭುತ, ಆದರೆ ಎಚ್ಚರ ಅಗತ್ಯ

    ಕರೊನಾ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಉಪಾಯವಾಗಿ ಗೋಲ್ಡನ್ ಮಿಲ್ಕ್ ಅಂದರೆ ಅರಿಶಿಣ ಹಾಕಿದ ಹಾಲನ್ನು ಕುಡಿಯಲು ಆಯುಷ್ ಸಚಿವಾಲಯವು ತಿಳಿಸಿದೆ. ಇದಕ್ಕೆ ಕಾರಣ ವಿಶೇಷವಾಗಿ ಅರಿಶಿಣದಲ್ಲಿರುವ ಅದ್ಭುತ ರೋಗನಿರೋಧಕ ಮತ್ತು ವೈರಸ್ ನಿರೋಧಕ ಔಷಧೀಯ ಗುಣಗಳು.

    ಗೋಲ್ಡನ್ ಮಿಲ್ಕ್: ಅದ್ಭುತ, ಆದರೆ ಎಚ್ಚರ ಅಗತ್ಯಅಷ್ಟೇ ಅಲ್ಲ. ಎಲ್ಲ ರೀತಿಯ ಚರ್ಮರೋಗಗಳು, ರಕ್ತಕ್ಕೆ ಸಂಬಂಧಿಸಿದ ರೋಗಗಳು, ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳು, ಕೆಲವು ಕಣ್ಣಿನ ಸಮಸ್ಯೆಗಳು, ಗುಣವಾಗದ ಗಾಯ, ಪದೇಪದೆ ಕಾಡುವ ಜ್ವರ, ದೇಹದೊಳಕ್ಕೆ ಸೇರಿದ ಯಾವುದೇ ರೀತಿಯ ವಿಷ, ಬೆಳಗ್ಗೆ ಎದ್ದ ಕೂಡಲೇ ಅಲರ್ಜಿಯ ಕಾರಣದಿಂದ ಬರುವ ಸೀನಿನಿಂದ ಹಿಡಿದು ಮಧುಮೇಹದ ಕಾರಣದಿಂದ ರಾತ್ರಿ ಪದೇಪದೇ ಉಂಟಾಗುವ ಮೂತ್ರಪ್ರವೃತ್ತಿ, ಬೊಜ್ಜು – ಹೀಗೆ ಇಡೀ ದೇಹದ ಬಹುತೇಕ ತೊಂದರೆಗಳ ನಿವಾರಣೆಯಲ್ಲಿ ಅರಿಶಿಣ ಸಹಾಯಕ.

    ಇದನ್ನೂ ಓದಿ  ಕೆ.ಎನ್.ರಾಜಣ್ಣ, ನಾನೂ ಕೂಡಿಕೊಂಡು ಮೈತ್ರಿ ಸರ್ಕಾರ ಪತನ ಮಾಡಿದೆವು

    ಜತೆಗೆ ಈ ಎಲ್ಲ ತೊಂದರೆಗಳು ಬರದಂತೆ ತಡೆಯುವ ಶಕ್ತಿಯೂ ಅರಿಶಿಣಕ್ಕಿದೆ. ಅರಿಶಿಣವನ್ನು ನಿತ್ಯ ಸೇವಿಸುವುದರಿಂದ ಕಾಮಾಲೆ (ಜಾಂಡೀಸ್) ಬರುತ್ತದೆ ಎಂಬ ಕಲ್ಪನೆ ಎಷ್ಟೋ ಜನರಿಗಿದೆ. ಇದು ನೂರಕ್ಕೆ ನೂರರಷ್ಟು ತಪ್ಪು. ಅದರ ಬಣ್ಣ ನೋಡಿ ಆ ಕಾಯಿಲೆ ಬರುತ್ತದೆ ಎಂದು ಲೆಕ್ಕ ಹಾಕುವುದು ಸರಿಯಲ್ಲ. ವಿಚಿತ್ರವೆಂದರೆ ಕಾಮಾಲೆ ಇರುವವರಿಗೆ ನಿತ್ಯ ಅರಿಶಿಣವನ್ನು ನೀಡಿದರೆ ಆ ರೋಗ ಬೇಗ ಗುಣವಾಗಲು ಸಾಧ್ಯವಾಗುತ್ತದೆ.

    ಇಂದಿನ ಕಾಲದಲ್ಲಿ ವಿಷವನ್ನೂ ಅಮೃತವೆಂದು ಕೊಡುವುದು ಸಾಮಾನ್ಯವಾಗಿದೆ. ಬೆಳ್ಳಗಿರುವುದೆಲ್ಲ ಹೇಗೆ ಹಾಲಲ್ಲವೋ ಹಾಗೆಯೇ ಹಳದಿ ಬಣ್ಣದಲ್ಲಿ ಇರುವುದೆಲ್ಲ ಅರಿಶಿಣವಲ್ಲ. ಅರಿಶಿಣದಲ್ಲಿರುವ ಕರ್ಕ್ಯೂಮಿನ್ ಎಂಬ ಔಷಧೀಯ ಸತ್ವವು ಕ್ಯಾನ್ಸರ್ ನಿರೋಧಕ ಎಂದು ಸಾಬೀತಾಗಿದೆ. ಹಾಗೇ ನಾವು ಅರಿಶಿಣ ಎಂದು ನಂಬಿ ಅಂಗಡಿಗಳಲ್ಲಿ ತೆಗೆದುಕೊಳ್ಳುವ ಹಳದಿಬಣ್ಣದ ಪುಡಿಯಿಂದ ಕ್ಯಾನ್ಸರ್ ಬರುತ್ತದೆ ಎಂಬುದೂ ದೃಢಪಟ್ಟಿದೆ. ಅರಿಶಿಣದ ಹೆಸರಿನಲ್ಲಿ ಕೊಡುವ ಪುಡಿಯು ಒಂದೋ ಅರಿಶಿಣದಲ್ಲಿರುವ ಕರ್ಕ್ಯೂಮಿನ್ ಸತ್ವವನ್ನು ತೆಗೆದು ರಫ್ತು ಮಾಡಿದ ನಂತರ ಉಳಿದ ನಿಷ್ಪ್ರಯೋಜಕ ಪುಡಿ ಅಥವಾ ಹಳದಿ ಬಣ್ಣದ ರಾಸಾಯನಿಕವಾಗಿರುತ್ತದೆ. ಇನ್ನು ಅರಿಶಿಣ ಬಣ್ಣ ಹಾಕಿದ ನಕಲಿ ಅರಿಶಿಣ ಕೊಂಬು ಕೂಡ ಬರುತ್ತಿದೆ. ಹಾಗಾಗಿ ನೀವೇ ಬೆಳೆದುಕೊಳ್ಳಲು ಆಗದಿದ್ದಲ್ಲಿ, ನೀವು ಖರೀದಿಸಿದ್ದು ಅರಿಶಿಣದ ಕೊಂಬೇ ಎಂದು ಖಾತರಿಪಡಿಸಿಕೊಂಡು ಬಳಸುವುದು ಯುಕ್ತ.

    ಇದನ್ನೂ ಓದಿ  VIDEO| ಅನುಮಾನಾಸ್ಪದ ಸೂಟ್​ಕೇಸ್​ಗೆ ಬೆಚ್ಚಿಬಿದ್ದ ಚಿಕ್ಕಮಗಳೂರು ಜನತೆ

    ಸಾಮಾನ್ಯ ವಯಸ್ಕರು ದಿನಕ್ಕೆ ಒಂದರಿಂದ ಎರಡು ಟೀ ಚಮಚದಷ್ಟು ಅರಿಶಿಣ ಸೇವನೆ ಮಾಡಬಹುದು. ಉಷ್ಣ ಗುಣ ಹೊಂದಿರುವ ಕಾರಣ ಉಷ್ಣಪ್ರಕೃತಿಯವರು ಬೇಸಿಗೆಯಲ್ಲಿ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಒಳಿತು. ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಹೆಚ್ಚು ಪರಿಣಾಮಕಾರಿ. ಕಡಲೆಹಿಟ್ಟು, ಅರಿಶಿಣ, ಸೀಗೆಕಾಯಿ ಪುಡಿ ಮತ್ತು ಬೇವಿನ ಪುಡಿಯ ಮಿಶ್ರಣ ಮಾಡಿಕೊಂಡು ನಿತ್ಯ ಸ್ನಾನಕ್ಕೆ ಸೋಪಿನ ಬದಲು ಬಳಸುತ್ತ ಹೋದರೆ ಚರ್ಮದ ಕಾಂತಿ ಹೆಚ್ಚುವುದರ ಜೊತೆಗೆ ಚರ್ಮರೋಗಗಳನ್ನು, ಮೊಡವೆಯನ್ನು ತಡೆಯುತ್ತದೆ. ಭಾವಪ್ರಕಾಶ ನಿಘಂಟುವಿನಲ್ಲಿ ಅರಿಶಿಣಕ್ಕೆ ‘ರ್ವ್ಯಣ’ ಎಂದೂ ಕರೆದಿದ್ದಾರೆ ಅಂದರೆ ಚರ್ಮದ ಬಣ್ಣವನ್ನು ಅರ್ಥಾತ್ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದರ್ಥ.

    VIDEO| ಅನುಮಾನಾಸ್ಪದ ಸೂಟ್​ಕೇಸ್​ಗೆ ಬೆಚ್ಚಿಬಿದ್ದ ಚಿಕ್ಕಮಗಳೂರು ಜನತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts