More

    ಧನ್ವಂತರಿ: ಮಿದುಳಿಗೆ ಶಕ್ತಿ ನೀಡುವ ಕೊಬ್ಬರಿ ಎಣ್ಣೆ

    ರೋಗನಿರೋಧಕ ಶಕ್ತಿ ಅತಿ ಪ್ರಾಮುಖ್ಯತೆ ಪಡೆಯುತ್ತಿರುವ ಈ ಕಾಲದಲ್ಲಿ ಕೊಬ್ಬರಿ ಎಣ್ಣೆಯ ಬಗ್ಗೆ ತಿಳಿದುಕೊಳ್ಳಲೇಬೇಕು. ಅಮೃತಸಮಾನವಾದ ಗುಣಗಳನ್ನು ಹೊಂದಿದ್ದರೂ ಅದನ್ನು ವಿಷವೆಂದು ಪರಿಗಣಿಸಿ ದೂರವಿಡುತ್ತಿದ್ದೇವೆ. ಇಂದಿನ ಲೇಖನದಲ್ಲಿ ಕೊಬ್ಬರಿ ಎಣ್ಣೆಯ ಮಹತ್ವವನ್ನು ಅರಿತುಕೊಳ್ಳೋಣ.

    ಕೊಬ್ಬರಿ ಎಣ್ಣೆಯಲ್ಲಿ ಶೇ. 65 ಮೀಡಿಯಂ ಚೈನ್ ಫ್ಯಾಟಿ ಅಸಿಡ್ (ಮುಖ್ಯವಾಗಿ ಲಾರಿಕ್ ಆಸಿಡ್) ಇದೆ. ಕೊಬ್ಬರಿ ಎಣ್ಣೆಯ ಹೊರತಾಗಿ ಸೇವನೆಗೆ ಯೋಗ್ಯವಾದ ಬೇರೆ ಎಲ್ಲ ಕೊಬ್ಬುಗಳಲ್ಲೂ ಲಾಂಗ್ ಚೈನ್ ಫ್ಯಾಟಿ ಅಸಿಡ್ ಇದೆ.

    ಈ ಮೀಡಿಯಂ ಚೈನ್ ಫ್ಯಾಟಿ ಅಸಿಡ್​ನ ವಿಶೇಷತೆಯೆಂದರೆ, ಇದು ಎಷ್ಟೋ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ಜೀವಕೋಶದ ಒಳಗೆ ಪ್ರವೇಶಿಸಿ ಅದನ್ನು ನಾಶಪಡಿಸುತ್ತದೆ. ಮಗು ಜನಿಸಿದ ನಂತರ ಮೊದಲ ಒಂದೆರಡು ತಿಂಗಳ ಕಾಲ ದೇಹದಲ್ಲಿ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಪ್ರತಿರೋಧಕ ಶಕ್ತಿ ಬೆಳೆದಿರುವುದಿಲ್ಲ. ಹಾಗಾಗಿ ದೇವರು ತಾಯಿಹಾಲಿನಲ್ಲಿ ಈ ಮೀಡಿಯಂ ಚೈನ್ ಫ್ಯಾಟಿ ಅಸಿಡ್​ಗಳನ್ನು ಇಟ್ಟಿದ್ದಾನೆ. ಇದು ಕೊಬ್ಬರಿ ಎಣ್ಣೆಯಲ್ಲಿ ಕೂಡ ಇದೆ. ಹಾಗಾಗಿಯೇ ಇದರ ಸೇವನೆಯಿಂದ ನಮ್ಮ ದೇಹದಲ್ಲಿ ವೈರಸ್ ಅಥವಾ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಾಗುತ್ತದೆ.

    ಧನ್ವಂತರಿ: ಮಿದುಳಿಗೆ ಶಕ್ತಿ ನೀಡುವ ಕೊಬ್ಬರಿ ಎಣ್ಣೆಮಿದುಳಿಗೆ ಶಕ್ತಿ ನೀಡುವ ಕೆಲಸವನ್ನು ಕೊಬ್ಬರಿ ಎಣ್ಣೆ ಮಾಡುತ್ತದೆ. ಕೊಬ್ಬರಿ ಎಣ್ಣೆಯ (ವಿಶೇಷವಾಗಿ ವರ್ಜಿನ್ ಕೊಬ್ಬರಿ ಎಣ್ಣೆ) ನಿಯಮಿತ ಸೇವನೆಯಿಂದ ದೇಹ ಕಂಪಿಸುವ ರ್ಪಾನ್​ಸನ್ ಕಾಯಿಲೆ ಹತೋಟಿಗೆ ಬರುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಬೇರೆ ಎಲ್ಲ ಎಣ್ಣೆಗಳಿಗೆ ಹೋಲಿಸಿದರೆ ತಂಪು ಗುಣ ಹೊಂದಿರುವ ಕೊಬ್ಬರಿ ಎಣ್ಣೆಯು ಬೇಸಿಗೆಯಲ್ಲಿ ಮತ್ತು ಉಷ್ಣ ಪ್ರಕೃತಿಯವರಿಗೆ ಹೆಚ್ಚು ಯೋಗ್ಯವಾದದ್ದು. ಚರಕರು ಹೇಳುವಂತೆ ಕೊಬ್ಬರಿ ಎಣ್ಣೆ ದೇಹದ ಬಲವೃದ್ಧಿಗೆ ವಿಶೇಷವಾಗಿ ಮಾಂಸಖಂಡಗಳು ಬಲಗೊಳ್ಳಲು ಸಹಕಾರಿ. ಬೇರೆ ಯಾವುದೇ ರೀತಿಯ ಕೊಬ್ಬನ್ನು ಸೇವಿಸದೆ ಇರುವವರು ದಿನಕ್ಕೆ 100 ಮಿ.ಲಿ. ಕೊಬ್ಬರಿ ಎಣ್ಣೆಯ ಸೇವನೆ ಮಾಡಬಹುದು.

    ಕೊಬ್ಬರಿ ಎಣ್ಣೆಯ ಕುದಿಯುವ ಬಿಂದು ಹೆಚ್ಚಿರುವ ಕಾರಣ ಕರಿಯಲು ಕೊಬ್ಬರಿ ಎಣ್ಣೆ ಸೂಕ್ತ. ಹಾಗೆಂದು ಪದೇಪದೆ ಕರಿದು ಸೇವಿಸುವುದು ಆರೋಗ್ಯಕ್ಕೆ ಹಿತವಲ್ಲ. ಆದರೆ ಕರಿಯುವಾಗಲೆಲ್ಲ ಕೊಬ್ಬರಿ ಎಣ್ಣೆಯನ್ನೇ ಬಳಸುವುದು ಒಳ್ಳೆಯದು. ಕೆಲವರಿಗೆ ಕೊಬ್ಬರಿ ಎಣ್ಣೆಯ ವಾಸನೆ ಇಷ್ಟವಾಗುವುದಿಲ್ಲ. ಆದರೆ ಕೆಲದಿನ ಬಳಸಿದರೆ ಆಮೇಲೆ ಅಭ್ಯಾಸವಾಗುತ್ತದೆ. ಒಂದುವೇಳೆ ಅದು ಸಾಧ್ಯವೇ ಇಲ್ಲ ಎನಿಸಿದರೆ ದಿನಕ್ಕೆ ನಾಲ್ಕೈದು ಚಮಚ ವರ್ಜಿನ್ ಕೊಬ್ಬರಿ ಎಣ್ಣೆಯನ್ನು ಔಷಧರೂಪದಲ್ಲಿ ಹಾಗೆಯೇ ಸೇವಿಸಬಹುದು. ಚೆನ್ನಾಗಿ ಒಣಗಿದ ಕೊಬ್ಬರಿಗಳನ್ನು ಗಾಣಗಳಲ್ಲಿ ಕಣ್ಣೆದುರೇ ಎಣ್ಣೆ ಮಾಡಿಸಿಕೊಂಡು ಸೇವಿಸಬೇಕೇ ಹೊರತು ಅಂಗಡಿಗಳಲ್ಲಿ ಸಿಗುವ ಕೊಬ್ಬರಿ ಎಣ್ಣೆಯನ್ನಲ್ಲ. ಒಂದುವೇಳೆ ಅದು ಸಾಧ್ಯವಾಗದೆ ಹೋದರೆ ತೆಂಗಿನಕಾಯಿಯ ಹಾಲಿನಿಂದ ತಾಪಮಾನ ಹೆಚ್ಚಾಗದ ರೀತಿಯಲ್ಲಿ ತಯಾರಿಸಿದ ವರ್ಜಿನ್ ಕೊಬ್ಬರಿ ಎಣ್ಣೆಯನ್ನು ಸೇವಿಸುವುದು ಅತಿ ಸೂಕ್ತವಾದದ್ದು. ಏಕೆಂದರೆ ತಯಾರಿಕೆಯ ವಿಧಾನದಲ್ಲಿ ವ್ಯತ್ಯಾಸವಿರುವ ಕಾರಣ ಸಾಧಾರಣ ಕೊಬ್ಬರಿ ಎಣ್ಣೆಗೆ ಹೋಲಿಸಿದರೆ ಇದು ಹೆಚ್ಚು ಆರೋಗ್ಯವರ್ಧಕ. ಕೊಬ್ಬರಿ ಎಣ್ಣೆಯಿಂದ ಹೃದಯಕ್ಕೆ ತೊಂದರೆಯುಂಟಾಗುವುದಿಲ್ಲವೇ ಎಂಬುದು ಹಲವರ ಪ್ರಶ್ನೆ. ಅದಕ್ಕೆ ಯಾವುದೇ ಪುರಾವೆಯಿಲ್ಲ. ಅನವಶ್ಯಕವಾಗಿ ಹೆದರಿ ಔಷಧರೂಪಿ ಆಹಾರವನ್ನು ಮಿಸ್ ಮಾಡಿಕೊಳ್ಳುವುದು ಬೇಡ.

    ಕಚೇರಿ ವೇಳೆಯಲ್ಲೇ ಟಿಕ್‌ಟಾಕ್ ಮಾಡುತ್ತ ಕಾಲಹರಣ ಮಾಡಿದ ನಗರಸಭಾ ನೌಕರರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts