ಕಚೇರಿ ವೇಳೆಯಲ್ಲೇ ಟಿಕ್‌ಟಾಕ್ ಮಾಡುತ್ತ ಕಾಲಹರಣ ಮಾಡಿದ ನಗರಸಭಾ ನೌಕರರು!

ಅರಸೀಕೆರೆ: ಹಾಸನ ಜಿಲ್ಲಾಡಳಿತ ಕರೊನಾ ಮಹಾಮಾರಿಯ ಭೀತಿ ದೂರ ಮಾಡಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಜನರನ್ನು ಜಾಗೃತಗೊಳಿಸುವ ಕಾರ್ಯದಲ್ಲಿ ತೊಡಗಿದೆ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಇಲ್ಲಿನ ನಗರಸಭೆಯ ಆರು ನೌಕರರು, ಕಚೇರಿ ಸಮಯದಲ್ಲಿ ಟಿಕ್‌ಟಾಕ್ ಮಾಡುತ್ತಾ ಕಾಲ ಹರಣ ಮಾಡುತ್ತಿರುವುದು ಬಹಿರಂಗವಾಗಿದೆ. ಈ ನಗರಸಭಾ ನೌಕರರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಪಾಲಿಸಬೇಕೆನ್ನುವ ನಿಯಮವನ್ನೂ ಧಿಕ್ಕರಿಸಿ ಟಿಕ್‌ಟಾಕ್ ಮಾಡುವ ಮೂಲಕ ಅಗ್ಗದ ಪ್ರಚಾರ ಪಡೆಯಲು ಮುಂದಾಗಿರುವುದು ಬಯಲಾಗಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾದ ನೌಕರರೇ ಸರ್ಕಾರಿ ಕಚೇರಿಯನ್ನು … Continue reading ಕಚೇರಿ ವೇಳೆಯಲ್ಲೇ ಟಿಕ್‌ಟಾಕ್ ಮಾಡುತ್ತ ಕಾಲಹರಣ ಮಾಡಿದ ನಗರಸಭಾ ನೌಕರರು!