More

    ಸನ್ನಡತೆಗಳ ಭಂಡಾರ ಸದ್​ವೃತ್ತ

    ಸನ್ನಡತೆಗಳ ಭಂಡಾರ ಸದ್​ವೃತ್ತಸಾಮಾನ್ಯವಾಗಿ ಜನರಲ್ಲೊಂದು ನಂಬಿಕೆಯಿದೆ. ಆಹಾರ ಸರಿಯಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ ಎಂಬ ತಿಳಿವಳಿಕೆಯದು. ಆರೋಗ್ಯವು ಭೋಜನಾಧೀನ ಎಂಬ ವೈದ್ಯವಿಜ್ಞಾನಿಋಷಿಗಳ ಹಿತನುಡಿಯೂ ಈ ಅರಿವಿಗೆ ಮೂಲ ಕಾರಣ. ಆದರೆ ಒಬ್ಬ ವ್ಯಕ್ತಿ ಸ್ವಸ್ಥನಾಗಿ ಜೀವಿಸಬೇಕಾದರೆ ಇದಿಷ್ಟೇ ಸಾಕಾಗುವುದಿಲ್ಲ! ತಾಯಿ ತಂದೆಯ ಬೀಜದ ಸತ್ವ, ಬೆಳೆಯುವ ಪರಿಸರ, ಒದಗುವ ಆಹಾರ, ಕೆಲಸಕಾರ್ಯಗಳ ರೂಪುರೇಷೆ, ದಿನಚರಿಯ ಪದ್ಧತಿ, ಮನೆಯ ವಾತಾವರಣ, ಸಮಾಜದ ಸ್ಪಂದನೆ, ಕಾಲಕ್ಕನುಗುಣವಾದ ಜೀವನ ವಿಧಾನ, ರಾತ್ರಿ ಕಳೆಯುವ ರೀತಿನೀತಿ, ಶರೀರದ ಅಂಗಾಂಗ ಅವಯವಗಳ ಕಾರ್ಯಕ್ಷಮತೆ – ಇವೆಲ್ಲವೂ ಉತ್ತಮವಾಗಿದ್ದಷ್ಟೂ ಬದುಕು ಸ್ವಾಸ್ಥ್ಯುಯ ಆಗಿರುತ್ತದೆ ಎಂದೆನಿಸಿದರೂ ಅದುವೇ ಪೂರ್ಣವಲ್ಲ! ಆಯುರ್ವೆದ ಹೇಳಿದ ಆಚಾರ ರಸಾಯನ, ಸದ್​ವೃತ್ತ, ಸ್ವಸ್ಥವೃತ್ತಗಳ ಯಥಾವತ್ ಅನುಷ್ಠಾನವನ್ನು ಮಾಡಿಕೊಂಡರೆ ಮಾತ್ರ ಸ್ವಸ್ಥ ಜೀವನದ ಚಿಂತನೆಯು ಪರಿಪೂರ್ಣವಾಗುತ್ತದೆ.

    ಸ್ವಸ್ಥ ವ್ಯಕ್ತಿಯ ನಿರುಕ್ತಿ ಹೇಳುವ ಸಂದರ್ಭದಲ್ಲೇ ಆಯುರ್ವೆದವು ಮನಸ್ಸು, ಇಂದ್ರಿಯ, ಆತ್ಮಗಳು ಪ್ರಸನ್ನವಾಗಿರಲೇಬೇಕು ಎಂದಿರುವುದಿಲ್ಲಿ ಸ್ಮರಣಾರ್ಹ. ಉಳಿದೆಲ್ಲ ವಿಚಾರಗಳನ್ನು ಒಪ್ಪಬಹುದು. ಸದಾಚಾರಕ್ಕೂ ಆರೋಗ್ಯಕ್ಕೂ ಯಾವ ಸೀಮೆಯ ಸಂಬಂಧ ಎಂಬುದೇ ಅನೇಕರಿಗೆ ಮನದಾಳದಲ್ಲಿ ಪುಟಿದೇಳುವ ಪ್ರಶ್ನೆ. ಸನ್ನಡತೆಗಳ ಅಮೂಲ್ಯ ಭಂಡಾರವಾದ ಸದ್​ವೃತ್ತದತ್ತ ಒಮ್ಮೆ ಇಣುಕಿ ನೋಡಿದರೆ ಅದರಲ್ಲೇನಿದೆ ಎಂಬುದು ಅಂದಾಜಾಗುತ್ತದೆ.

    ಇದನ್ನೂ ಓದಿ  ಮತ್ತೆ ಕಲಬುರಗಿ ನಂ.1: ರಾಜ್ಯದಲ್ಲಿ ಇಂದು 267 ಕೋವಿಡ್ 19 ಪ್ರಕರಣಗಳು ದೃಢ

    ಗುರುದೇವಾದಿ ಪವಿತ್ರವಾದ ವಿಚಾರಗಳು, ತ್ಯಜಿಸಬೇಕಾದ ನಡತೆಗಳು, ವರ್ಜಿಸಬೇಕಾದ ಸ್ಥಳಗಳು, ಗೌಪ್ಯತೆ ಇರಬೇಕಾದ ಸಂಗತಿಗಳು, ಪ್ರಯತ್ನಪೂರ್ವಕ ಸದಾಚಾರಗಳು, ವಾಚಿಕ ಸದ್​ವೃತ್ತ, ನಿಯಂತ್ರಿಸಬೇಕಾದ ಸಾಹಸಪ್ರವೃತ್ತಿಗಳು, ಸಾಮಾಜಿಕ ಸದ್​ವೃತ್ತ, ಇಂದ್ರಿಯಸಂಬಂಧೀ ಸನ್ನಡತೆಗಳು, ಮಂಗಳಕರವಾದ ವಿಚಾರಗಳು, ಆಂಗಿಕ ಅಭಿವ್ಯಕ್ತಿಯ ಗುಣನಡತೆಗಳು – ಹೀಗೆ ಜೀವನ ಮೌಲ್ಯಗಳನ್ನು ಬದುಕಿಗೆ ತುಂಬಲು ಮಾಡಿದ ಮಾರ್ಗದರ್ಶನವೇ ಸದ್​ವೃತ್ತ. ಇವುಗಳನ್ನು ಅನುಸರಿಸುತ್ತ ಹೋದಾಗ ನಮ್ಮ ಅರಿವಿಗೆ ಬಾರದೆಯೇ ಸುಮನಸ್ಸು ಅಂಕುರವಾಗುತ್ತದೆ. ಬುದ್ಧಿಯೂ ಪರಿಪಕ್ವವಾಗುತ್ತದೆ. ಆತ್ಮಸಾಕ್ಷಿಯು ಜಾಗೃತವಾಗುತ್ತದೆ. ಮನಸ್ಸು ಸರಿದಾರಿಯಲ್ಲಿದ್ದರೆ, ಬುದ್ಧಿಯ ಅಂಕುಶ ಸಮರ್ಪಕವಾಗಿದ್ದರೆ, ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕುವುದು ಸಾಧ್ಯವಾದರೆ ಸ್ವಾಸ್ಥ್ಯ ಪ್ರಾಪ್ತಿ ಸುಲಭವಾಗುತ್ತದೆ. ಜೀವನ ಆನಂದಮಯವಾಗುತ್ತದೆ.

    ಯಾರು ಸದ್​ವೃತ್ತಗಳ ಪಾಲನೆ ಮಾಡುತ್ತಾರೋ, ಅವರಿಗೆ ಆಯುಷ್ಯ, ಆರೋಗ್ಯ, ಪ್ರೀತಿ, ಧರ್ಮ, ಧನ ಹಾಗೂ ಯಶಸ್ಸು ಲಭಿಸುತ್ತದೆ ಎಂದು ಭಾವಪ್ರಕಾಶ ಗ್ರಂಥ ಹೇಳಿರುವುದು ಇದಕ್ಕಾಗಿಯೇ. ಹೇಳಿರುವ ಸ್ವಸ್ಥವೃತ್ತದ ನಡೆನುಡಿಗಳನ್ನು ಸಮ್ಯಕ್ ರೀತಿಯಲ್ಲಿ ಯಾರು ಅನುಷ್ಠಾನ ಮಾಡುತ್ತಾರೋ ಅವರು ವ್ಯಾಧಿಗಳಿಂದ ಅಕಾಲದಲ್ಲಿ ಬಾಧಿಸಲ್ಪಡದೆ ಸಮತ್ವದ ಜೀವನ ನಡೆಸುತ್ತ ಯಶಸ್ವಿಯಾಗಿ ನೂರು ವರ್ಷ ಬಾಳುತ್ತಾರೆ. ಲೋಕದಲ್ಲಿ ತಮ್ಮ ಕೀರ್ತಿ ಪತಾಕೆ ಹಾರಿಸಿ ಸಾಧು ಸಜ್ಜನರಿಂದ ಪ್ರಶಂಸೆಗೊಳಗಾಗುತ್ತಾರೆ. ಧರ್ಮ, ಧನ, ಬಂಧುಗಳು ಅವರದಾಗುತ್ತವೆ. ಈ ಸುಕೃತಿಗಳಿಂದ ಬದುಕಿನ ಪರಮೋಚ್ಚ ಗುರಿ ಸಾಧಿಸುತ್ತಾರೆ. ಜೊತೆಗೆ ಆಯುರ್ವೆದದ ಗ್ರಂಥಗಳ ಬೇರೆ ಭಾಗಗಳಲ್ಲಿ ಕಂಡುಬರುವ ಸದಾಚಾರಗಳನ್ನೂ ಆಚರಿಸಬೇಕು. ಸದ್​ವೃತ್ತವನ್ನು ಸರ್ವರೂ ಸರ್ವದಾ ಪಾಲಿಸಬೇಕೆಂಬ ಚರಕಸಂಹಿತೆಯ ಮಾತು ನಮಗೆ ದಾರಿದೀಪವಾಗಲಿ.

    ದೈಹಿಕ ಅಂತರ, ಮಾಸ್ಕ್ ಬಳಕೆಯಿಂದ ಕರೊನಾ ನಿಯಂತ್ರಣವಾಗುತ್ತಾ? ಅಧ್ಯಯನ ವರದಿ ಏನು ಹೇಳುತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts