More

    ಧನ್ವಂತರಿ: ಸದಾಚಾರದ ಅಧ್ಯಯನ

    ಧನ್ವಂತರಿ: ಸದಾಚಾರದ ಅಧ್ಯಯನಮಾನವನಾಗಿ ಹುಟ್ಟಿದ ಮೇಲೆ ಇತರ ಪ್ರಾಣಿಗಳಿಗೆ ಇರದ ಬುದ್ಧಿಶಕ್ತಿಯನ್ನು ಚೆನ್ನಾಗಿ ಉಪಯೋಗ ಮಾಡಿಕೊಳ್ಳಬೇಕು. ಜ್ಞಾನಾರ್ಜನೆ ಹಲವು ರೀತಿಯಲ್ಲಿ ಆಗುತ್ತದೆ. ಓದುವುದರಿಂದ ವ್ಯಾಪಕವಾದ ಜಗತ್ತು ನಮ್ಮೆದುರು ತೆರೆದುಕೊಳ್ಳುತ್ತದೆ. ಓದಿನ ಅಭ್ಯಾಸ ಮಾನವನ ಏಳಿಗೆಗೆ ಪ್ರಮುಖವಾದ ವರದಾನ. ಅಂತರ್ಜಾಲದ ಪುಟಗಳಲ್ಲಿ ಜನರ ಮನಸ್ಸು ಸಿಲುಕಿಕೊಂಡಿರುವ ಈ ದಿನಗಳಲ್ಲೂ ವೃತ್ತಪತ್ರಿಕೆ ಕೈಯಲ್ಲಿ ಹಿಡಿದು ಓದಿದರೇ ಬಹುಪಾಲು ಜನರಿಗೆ ಓದುವುದರ ಖುಷಿಯ ಅನುಭವವಾಗುತ್ತದೆ. ಜ್ಞಾನವೆಂಬುದು ಬಾಳಿಗೆ ಬೆಳಕಾಗಬೇಕಾದರೆ, ಬಹುಕಾಲ ಮನಸ್ಸಿನಲ್ಲಿ ಅಚ್ಚೊತ್ತಿ ಉಳಿಯಬೇಕಾದರೆ, ಜೀವನದಲ್ಲಿ ಸದಾಕಾಲ ಸ್ಪೂರ್ತಿಯ ಸೆಲೆಯಾಗಿ ನೆಲೆಯಾಗಬೇಕಾದರೆ ಅದು ಕ್ರಮಬದ್ಧವಾಗಿ ಮಿದುಳನ್ನು ತಲುಪಬೇಕು. ಓದುವುದಕ್ಕೆ ಅದರದೇ ಆದ ಶಿಸ್ತು, ನಿಯಮಗಳಿವೆ. ಅದನ್ನೇ ಆಯುರ್ವೆದ ಅಧ್ಯಯನ ಆಚಾರ ಎಂದಿದೆ. ಅಧ್ಯಯನದ ವಿಧಿವಿಧಾನಗಳನ್ನು ಚರಕಸಂಹಿತೆ ಸಾವಿರಾರು ವರುಷಗಳ ಹಿಂದೆಯೇ ತೆರೆದಿಟ್ಟ ಪರಿ ಅನನ್ಯವಾದುದು.

    ಅಕಾಲದಲ್ಲಿ ಗುಡುಗು ಸಿಡಿಲುಗಳಿಂದ ಕೂಡಿದ ಮಳೆಯಾಗುತ್ತಿರುವಾಗ, ನಿವಾಸಸ್ಥಳವು ಉರಿದು ಕರಕಲಾಗಿದ್ದಂತೆ ಕಾಣುತ್ತಿರುವಾಗ, ಬೆಂಕಿಯ ಅವಘಡವಾದಾಗ, ಭೂಕಂಪದ ಕಾಲದಲ್ಲಿ, ಊರ ಜನರೆಲ್ಲ ಸೇರಿ ಮಹಾ ಉತ್ಸವ ನಡೆಯುತ್ತಿರುವ ಸಂದರ್ಭದಲ್ಲಿ, ಆಗಸದಲ್ಲಿ ಉಲ್ಕಾಪಾತ ಆಗುತ್ತಿರುವ ಹೊತ್ತಿನಲ್ಲಿ, ಸೂರ್ಯಗ್ರಹಣ, ಚಂದ್ರಗ್ರಹಣಗಳು ಸಂಭವಿಸುವ ಕಾಲದಲ್ಲಿ, ಚಂದ್ರ ರಾರಾಜಿಸುವ ಹುಣ್ಣಿಮೆಯ ದಿನ, ಕಗ್ಗತ್ತಲ ಅಮಾವಾಸ್ಯೆಯಂದು, ಸೂರ್ಯೋದಯ ಮತ್ತು ಸೂರ್ಯಾಸ್ತಮಾನವಾಗುವ ಕಾಲದಲ್ಲಿ ಅಧ್ಯಯನ ಮಾಡಬಾರದು ಎಂದಿದೆ ಆಯುರ್ವೆದ.

    ಇದನ್ನೂ ಓದಿ   ಹೊರಬರಲು ಹೆದರಿ ಪುಟ್ಟ ಮನೆಯಲ್ಲಿ ಮುದುರಿ ಕುಳಿತಿದ್ದಾರೆ ಇವರು; ಭಯಕ್ಕೆ ಕಾರಣ ಅಳುತ್ತ ಹೇಳಿದ್ದಾರೆ…

    ಅಧ್ಯಯನ ಮಾಡಬೇಕಾದರೆ ಏಕಾಗ್ರತೆ ಬೇಕು. ಮನಸ್ಸೆಂಬುದು ಮರ್ಕಟದಂತೆ ಎಂಬುದೂ ತಿಳಿದಿರುವ ವಿಚಾರ. ಇಂತಹ ಮನಸ್ಸನ್ನು ಒಂದೆಡೆಗೆ ಕೇಂದ್ರೀಕರಿಸಿ ಹಿಡಿಯುವುದು ಪ್ರಯಾಸಕರ ಕೆಲಸವೆಂಬುದೂ ಪ್ರತಿ ವ್ಯಕ್ತಿಗೆ ಅನುಭವಜನ್ಯ ಸಂಗತಿ. ಪ್ರಶಾಂತ ವಾತಾವರಣದಲ್ಲೇ ಈ ಏಕಾಗ್ರತೆ ಎಂಬುದು ಅನೇಕರಿಗೆ ಮರೀಚಿಕೆಯಾಗಿ ಗೋಚರವಾಗಿರುತ್ತದೆ. ಹಾಗಿರುವಾಗ ಏಕಾಗ್ರಚಿತ್ತಕ್ಕೆ ಪೂರಕವಲ್ಲದ ಅಮಿತೋತ್ಸಾಹ, ಗೊಂದಲ, ಗೋಜಲು, ಆತಂಕ, ಉದ್ವೇಗ, ಭೀತಿ, ಪ್ರಾಣಭಯಗಳಿಂದ ಮನಸ್ಸು ಕೂಡಿರುವ ಮೇಲಿನ ಎಲ್ಲ ಸಂದರ್ಭಗಳಲ್ಲಿ ಅಧ್ಯಯನ ಮಾಡುವುದಾದರೂ ಹೇಗೆ? ಅದು ಕಾಟಾಚಾರದ ಅಧ್ಯಯನವಾದೀತು.

    ವಿದ್ಯಾರ್ಜನೆಯು ಗುರುಮುಖೇನವೇ ನಡೆಯಬೇಕು. ಉಚ್ಚಾರಣೆಯು ಸ್ಪಷ್ಟವಾಗಿರಬೇಕು. ಅತಿಮಾತ್ರೆಯೊಂದಿಗಾಗಲಿ, ಅಕ್ಷರಗಳನ್ನು ನುಂಗಿಯಾಗಲಿ, ಶಬ್ದಗಳನ್ನು ಅತಿಯಾಗಿ ಎಳೆದು, ಸ್ವರ ಒಂದೇ ತರವಿಲ್ಲದೆ, ಅತಿ ವೇಗವಾಗಿ, ಅತಿ ನಿಧಾನವಾಗಿ, ಅಲ್ಲಲ್ಲಿ ತಡವರಿಸಿ, ಅತ್ಯುಚ್ಚ ಸ್ವರದಲ್ಲಿ ಅಥವಾ ಅತಿ ಸಣ್ಣ ಸ್ವರದಲ್ಲಿ ಅಧ್ಯಯವವನ್ನು ನಡೆಸಕೂಡದೆಂಬ ಚರಕಸಂಹಿತೆಯ ಮಾರ್ಗದರ್ಶನ ಸರ್ವಕಾಲಕ್ಕೂ ಅನ್ವಯವಾಗುತ್ತದೆ.

    ಇಂದಿನಂತೆ ಲಕ್ಷಾಂತರ ಪುಸ್ತಕಗಳು ಇಲ್ಲದ ಅಂದಿನ ಕಾಲದಲ್ಲಿ ಶ್ಲೋಕ, ಮಂತ್ರಗಳ ಕಲಿಕೆಯೇ ಬಹು ಮುಖ್ಯವಾಗಿತ್ತು. ಪುಟಗಟ್ಟಲೆ ಅರ್ಥಗಳನ್ನು ತುಂಬಿಕೊಂಡ ಪುಟ್ಟ ಗಾತ್ರದ ಪ್ರತಿ ಶ್ಲೋಕವನ್ನು ಅರ್ಥೈಸಿಕೊಂಡರೆ ಸೂತ್ರರೂಪದಲ್ಲಿ ಜ್ಞಾನಾರ್ಜನೆ ಆಗುತ್ತಿತ್ತು. ವ್ಯತ್ಯಾಸ ಮಾತ್ರ ಸಣ್ಣದೇನಲ್ಲ. ಅಂದು ಜ್ಞಾನವು ಕಂಠ, ಮನಸ್ಸು, ಹೃದಯದಲ್ಲಿತ್ತು. ಇಂದು ಯಂತ್ರ, ಉಪಕರಣಗಳಲ್ಲಿ ತುಂಬಿ ತುಳುಕುತ್ತಿದೆ!

    ಹಿಜ್ಬುಲ್ ಉಗ್ರ ಸಂಘಟನೆ ನಾಯಕನ ಮೇಲೆ ಪಾಕಿಗಳಿಂದಲೇ ಹಲ್ಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts