More

    ಗೆಳತಿಯನ್ನು ಬೆದರಿಸಿ 4.5 ಲಕ್ಷ ರೂಪಾಯಿ ಸುಲಿಗೆ: ಅಬ್ದುಲ್ ಜಾವೀದ್ ಎಂಬಾತ ವಿರುದ್ಧ ಪ್ರಕರಣ

    ಬೆಂಗಳೂರು: ಸಲುಗೆಯಿಂದಿದ್ದಾಗ ತೆಗೆದ ಫೋಟೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಗೆಳತಿಯನ್ನು ಬೆದರಿಸಿದ ಯುವಕ, ಆಕೆಯಿಂದ 4.5 ಲಕ್ಷ ರೂ. ಸುಲಿಗೆ ಮಾಡಿದ್ದಾನೆ. ಸಂಜಯನಗರದ 20 ವರ್ಷದ ಸಂತ್ರಸ್ತೆ ಈ ಬಗ್ಗೆ ದೂರು ನೀಡಿದ್ದು, ಅಬ್ದುಲ್ ಜಾವೀದ್ ಎಂಬಾತನ ವಿರುದ್ಧ ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

    ಇದನ್ನೂ ಓದಿ: ಇಂದಿನ ಮಹಾಯುದ್ಧಗಳ ವಂಚನೆಯ ತೀವ್ರತೆ, ಸಾಂದ್ರತೆ

    ಮೂರು ವರ್ಷಗಳ ಹಿಂದೆ ಕಾಲೇಜು ವ್ಯಾಸಂಗ ಮಾಡುತ್ತಿದ್ದಾಗ ಯುವತಿಗೆ ಜಾವೀದ್ ಪರಿಚಯವಾಗಿದ್ದ. ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ನಾನು ನಿಮ್ಮ ಮಗಳ ಕಾಲೇಜು ಸಹಪಾಠಿ, ನನ್ನ ತಂದೆ ಕಾಲೇಜೊಂದರಲ್ಲಿ ಉತ್ತಮ ಹುದ್ದೆಯಲ್ಲಿದ್ದಾರೆ ಎಂದು ಯುವತಿಯ ಪಾಲಕರನ್ನು ಪರಿಚಯಿಸಿಕೊಂಡಿದ್ದ. ಆಗಾಗ ಯುವತಿಯ ಮನೆಗೆ ಹೋಗುತ್ತಿದ್ದ ಜಾವೀದ್, ಹಣಕಾಸಿನ ತೊಂದರೆಯಾಗಿದೆ ಎಂದು ಹೇಳಿ ಆಕೆಯ ಪಾಲಕರಿಂದ 40 ಸಾವಿರ ರೂ. ಪಡೆದುಕೊಂಡಿದ್ದ. ಬಳಿಕ ಹಣ ವಾಪಸ್ ನೀಡಿ ನಂಬಿಕೆ ಗಿಟ್ಟಿಸಿಕೊಂಡಿದ್ದ.

    ಇದನ್ನೂ ಓದಿ: ಅಪ್ಪನ ಬೆನ್ನಿಗೆ ಚೂರಿ ಇಟ್ಟ ಆ ಹುಡುಗ, “ಬೈಕ್ ಓಡಿಸು” ಅಂದ; ಮುಂದೇನಾಯಿತು..

    ಜಾಲತಾಣದಲ್ಲಿ ಫೋಟೋ : ಯುವತಿಯ ಜತೆಗೆ ಸಲುಗೆ ಬೆಳೆಸಿಕೊಂಡು ಕಾಲೇಜು ಮುಗಿದ ಬಳಿಕ ಹೋಟೆಲ್, ರೆಸ್ಟೋರೆಂಟ್, ಸಿನಿಮಾಗಳಿಗೆ ಕರೆದೊಯ್ಯುತ್ತಿದ್ದ. ಈ ವೇಳೆ ಯುವತಿ ಜತೆಗೆ ಸಲುಗೆಯಿಂದಿರುವ ಫೋಟೋಗಳನ್ನು ಸೆರೆಹಿಡಿದಿದ್ದ. ಕೆಲ ತಿಂಗಳಿಂದ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಹಂತಹಂತವಾಗಿ 4.5 ಲಕ್ಷ ರೂ. ಸುಲಿಗೆ ಮಾಡಿದ್ದಾನೆ. ಇತ್ತೀಚೆಗೆ ಫೇಸ್​ಬುಕ್, ಇನ್​ಸ್ಟಾಗ್ರಾಂನಲ್ಲಿ ನಕಲಿ ಖಾತೆಗಳನ್ನು ತೆರೆದು ಕೆಲ ಫೋಟೋಗಳನ್ನು ಹರಿಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಪಿಸಿ ಯುವತಿ ದೂರು ಕೊಟ್ಟಿದ್ದಾಳೆ.

    ಹೆಂಡ್ತಿ ಡೈವೋರ್ಸ್ ಕೇಳಿದ್ಳು.. ಗಂಡ ಆಕೆಯ ಮೂಗನ್ನೇ ಕತ್ತರಿಸಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts