More

    ಕೇರಳ ಬಾಂಬ್ ಬ್ಲ್ಯಾಸ್ಟ್​ ಪ್ರಕರಣ; ಕೇಂದ್ರ ಸಚಿವ ರಾಜೀವ್​ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲು

    ತಿರುವನಂತಪುರಂ:  ಕೇರಳದ ಚರ್ಚ್​ ಕನ್ವೆನ್ಷನ್ ಸೆಂಟರ್‌ನಲ್ಲಿ ಸಂಭವಿಸಿದ ಬಾಂಬ್​ ಸ್ಪೋಟಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಕೇಂದ್ರ ಸಚಿವ ರಾಜೀವ್​ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಎರಡು ಕೋಮುಗಳ ನಡುವೆ ದ್ವೇಷ ಹರಡಲು ಯತ್ನಿಸಿದರೆಂಬ ಆರೋಪದ ಮೇಲೆ ಸಚಿವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಉನ್ನತ ಸುದ್ದಿ ಮೂಲಗಳು ತಿಳಿಸಿವೆ.

    ಕೇರಳ ಸರಣಿ ಬಾಂಬ್‌ ಸ್ಪೋಟದಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಈ ಕುರಿತು ರಾಜೀವ್‌ ಚಂದ್ರಶೇಖರ್‌ ಅವರು ಕೋಮುದ್ವೇಷ ಉಂಟುಮಾಡಲು ಪ್ರಯತ್ನಿಸಿದ್ದಾರೆ ಎಂದು ದಾಖಲಾಗಿರುವ ದೂರಿನಲ್ಲಿ ಆರೋಪಿಸಲಾಗಿದೆ. ಸ್ಫೋಟದ ನಂತರ ಸಾಮಾಜಿಕ ಮಾಧ್ಯಮದಲ್ಲಿ ತಪ್ಪುದಾರಿಗೆಳೆಯುವ ಅಥವಾ ಕೋಮುದ್ವೇಷ ಹರಡುವ ಪೋಸ್ಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇರಳ ಸರ್ಕಾರ ಮತ್ತು ಪೊಲೀಸರು ಎಚ್ಚರಿಕೆ ನೀಡಿದ್ದರು.

    ಇದನ್ನೂ ಓದಿ: ಮರಾಠ ಮೀಸಲಾತಿ ಕಿಚ್ಚು| KKRTC ಬಸ್​ಗೆ ಬೆಂಕಿ; ಅಂತರ್​ರಾಜ್ಯ ಸಾರಿಗೆ ಸಂಚಾರ ಸ್ಥಗಿತ

    ಈ ಕುರಿತು ಸೈಬರ್ ಸೆಲ್ ಎಸ್‌ಐ ದೂರಿನ ಆಧಾರದ ಮೇಲೆ ಎರ್ನಾಕುಲಂ ಸೆಂಟ್ರಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಂದ್ರಶೇಖರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಅಡಿಯಲ್ಲಿ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಹರಡುವುದು ) ಆರೋಪವನ್ನು ಹೊರಿಸಲಾಗಿದೆ.

    ಕಾಂಗ್ರೆಸ್ ಮತ್ತು ಸಿಪಿಎಂನ ಓಲೈಕೆ ರಾಜಕಾರಣದ ಬೆಲೆಯನ್ನು ಎಲ್ಲಾ ಸಮುದಾಯಗಳ ಮುಗ್ಧರು ಯಾವಾಗಲೂ ಭರಿಸಬೇಕಾಗುತ್ತದೆ. ಇತಿಹಾಸವು ನಮಗೆ ಇದನ್ನು ಕಲಿಸಿದೆ. ಕಾಂಗ್ರೆಸ್‌-ಸಿಪಿಎಂ ನಾಚಿಕೆಯಿಲ್ಲದ ತುಷ್ಟೀಕರಣ ರಾಜಕೀಯ ಮಾಡುತ್ತಿವೆ. ಕೇರಳದಲ್ಲಿ ದ್ವೇಷ ಹರಡಲು ಹಮಾಸ್‌ ಅನ್ನು ಬಳಸಿಕೊಳ್ಳಲಾಗುತ್ತಿದೆ. ಕೇರಳದಲ್ಲಿ ಜಿಹಾದ್‌ ನಡೆಸಲು ಕರೆ ನೀಡಲಾಗುತ್ತಿದೆ. ಇದು ಬೇಜವಾಬ್ದಾರಿ ಹುಚ್ಚು ರಾಜಕಾರಣದ ಪರಮಾವಧಿ. ಇದು ಇಲ್ಲಿಗೇ ನಿಲ್ಲಬೇಕಿದೆ.

    ನೀವು ನಿಮ್ಮ ಹಿತ್ತಲಿನಲ್ಲಿ ಹಾವುಗಳನ್ನು ಸಾಕುಬಾರದು. ಅವು ನಿಮ್ಮ ನೆರೆಹೊರೆಯವರನ್ನು ಮಾತ್ರ ಕಚ್ಚುತ್ತವೆ ಎಂದು ನೀವು ಅಂದುಕೊಂಡಿರಬಹುದು. ನಿಮಗೆ ಗೊತ್ತಾ, ಅಂತಿಮವಾಗಿ ಆ ಹಾವುಗಳು ಹಿತ್ತಲಿನಲ್ಲಿ ಸಿಗುವ ಯಾರನ್ನು ಬೇಕಾದರೂ ಕಚ್ಚಬಹುದು ಎಂದು ಬಾಂಬ್​ ಬ್ಲ್ಯಾಸ್ಟ್​ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts