More

    ಮತ್ತೆ ಕಾವೇರಲಿದೆ ಕನ್ನಡಿಗರ ಅಸಮಾಧಾನ?; ಇನ್ನೂ 16 ದಿನ ನಿತ್ಯ 3 ಸಾವಿರ ಕ್ಯೂಸೆಕ್​ ನೀರು ತಮಿಳುನಾಡಿಗೆ ಬಿಡುವಂತೆ ಆದೇಶ!

    ನವದೆಹಲಿ: ಕಾವೇರಿ ನದಿ ನೀರು ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಸಂಘರ್ಷದಿಂದ ಕನ್ನಡಿಗರಲ್ಲಿ ಉಂಟಾಗಿರುವ ಅಸಮಾಧಾನ ಮತ್ತೆ ಕಾವೇರುವಂತಾಗಿದೆ. ಏಕೆಂದರೆ ಇನ್ನೂ 16 ದಿನಗಳ ಕಾಲ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಇಂದು ಇನ್ನೊಂದು ಆದೇಶ ಹೊರಬಿದ್ದಿದೆ.

    ನವದೆಹಲಿಯಲ್ಲಿ ಇಂದು ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ(ಸಿಡಬ್ಲ್ಯುಆರ್​ಸಿ) ಸಭೆ ಬಳಿಕ ಈ ಆದೇಶ ಹೊರಡಿಸಲಾಗಿದೆ. ಅ. 16ರಿಂದ 31ರ ವರೆಗೆ ನಿತ್ಯ 3 ಸಾವಿರ ಕ್ಯೂಸೆಕ್​ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಈ ಆದೇಶದಲ್ಲಿ ತಿಳಿಸಲಾಗಿದೆ.

    ಇದನ್ನೂ ಓದಿ: ಬ್ಯಾಂಕ್ ಆಫ್ ಬರೋಡ ವಿರುದ್ಧ ಕ್ರಮ ಜರುಗಿಸಿದ ಆರ್​ಬಿಐ; ಯಾರಿಗೆ ತೊಂದರೆ?

    ತಮಿಳುನಾಡಿಗೆ ಈಗಾಗಲೇ ಸಾಕಷ್ಟು ನೀರು ಬಿಟ್ಟಿರುವುದರಿಂದ ಕರ್ನಾಟಕದ ರೈತರು ಹೈರಾಣಾಗಿದ್ದು, ಕನ್ನಡಪರ ಹೋರಾಟಗಾರರು ಆಕ್ರೋಶಗೊಂಡಿದ್ದರು. ಅದಾಗ್ಯೂ ತಮಿಳುನಾಡಿಗೆ ನೀರು ಹರಿಯುವುದರ ಮುಂದುವರಿಕೆ ಆಗುತ್ತಿರುವುದು ಈ ವಿವಾದ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಗೋಚರಿಸಿದೆ.

    ನಿಧನದ ವಿಚಾರದಲ್ಲಿರಲಿ ನಿಧಾನ: ಸುಳ್ಳೇ ಏಕೆ ಸಾಯಿಸುವರೋ!; ಇನ್ನಿಲ್ಲ ಎಂಬ ಸುದ್ದಿ ಬಂದಾಗ ಇನ್ನೇನು ಮಾಡಬೇಕು?

    ಸಚಿವರಿಗೆಲ್ಲ ಹೊಸ ಕಾರು, ಸಾರ್ವಜನಿಕರ ತಕರಾರು!; ರಾಜ್ಯದಲ್ಲಿ ಬರ, ಸರಳ ದಸರಾ, ಆದ್ರೆ ಕಾರುಬಾರು ಜೋರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts