ಸಚಿವರಿಗೆಲ್ಲ ಹೊಸ ಕಾರು, ಸಾರ್ವಜನಿಕರ ತಕರಾರು!; ರಾಜ್ಯದಲ್ಲಿ ಬರ, ಸರಳ ದಸರಾ, ಆದ್ರೆ ಕಾರುಬಾರು ಜೋರು!

New car
Published on

ಬೆಂಗಳೂರು: ರಾಜ್ಯ ಸರ್ಕಾರ ತನ್ನ ಸಂಪುಟದ ಎಲ್ಲ ಸಚಿವರಿಗೆ ಹೊಚ್ಚ ಹೊಸ ಕಾರುಗಳನ್ನು ಬುಕ್ ಮಾಡಿದ್ದು, ಈಗಾಗಲೇ ಕೆಲವು ಸಚಿವರು ಅವುಗಳನ್ನು ಪಡೆದು ಬಳಸಲಾರಂಭಿಸಿದ್ದಾರೆ. ಈ ಕುರಿತು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿ ಸಂತಸ ಕೂಡ ಹಂಚಿಕೊಂಡಿದ್ದಾರೆ.

ಆದರೆ ಸರ್ಕಾರದ ಈ ಕ್ರಮದ ವಿರುದ್ಧ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬರವಿದೆ, ಅನುದಾನಕ್ಕೂ ಕೊರತೆ ಇದೆ ಎಂದಿರುವ ಸಾರ್ವಜನಿಕರು ಇಂಥ ಸಂದರ್ಭದಲ್ಲಿ ಇವೆಲ್ಲ ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.

ರಾಜ್ಯದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್​.ಎಸ್. ಬೋಸರಾಜು ತಮಗೆ ಸರ್ಕಾರದಿಂದ ಹೊಚ್ಚಹೊಸ ಟೊಯೊಟ ಇನ್ನೋವಾ ಹೈಕ್ರಾಸ್ ಕಾರು ಲಭಿಸಿರುವ ಕುರಿತು ಎಕ್ಸೈಟಿಂಗ್ ನ್ಯೂಸ್ ಎಂಬುದಾಗಿ ಹೇಳಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದಕ್ಕೆ ಬಹಳಷ್ಟು ಸಾವರ್ಜನಿಕರು ನಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದು, ಸಚಿವರಿಗೆ ಹೊಸ ಕಾರು ನೀಡಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೇ ಹಣವನ್ನು ರಸ್ತೆ ಗುಂಡಿ ಮುಚ್ಚಲು ಬಳಸಬಹುದಿತ್ತು, ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದೆಲ್ಲ ಜನರು ಕಮೆಂಟ್​ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net