More

    ನಾನು ಚೆಂಡು ಹೂವಿನ ಗಿಡವನ್ನೇ ಗಾಂಜಾ ಎಂದುಕೊಂಡಿದ್ದೆ; ಸಿ.ಟಿ.ರವಿ

    ಬೆಂಗಳೂರು: ನನಗೂ ಡ್ರಗ್ಸ್​ಗೂ ಎಣ್ಣೆ-ಸೀಗೆಕಾಯಿ ಇದ್ದಂಗೆ. ಆದ್ರು ಆಕ್ಸಿಡೆಂಟ್ ಆದಾಗ ನಾನು ಕುಡಿದಿದ್ದೆ, ಡ್ರೈವ್ ಮಾಡ್ತಿದ್ದೆ ಅಂತ ಅಪಪ್ರಚಾರ ಮಾಡಿದ್ರು ಎಂದು ಸಚಿವ ಸಿ.ಟಿ. ರವಿ ಆಕ್ರೋಶ ವ್ಯಕ್ತ ಪಡಿಸಿದರು.

    ನನಗೆ ಯಾರೋ ಚೆಂಡು ಹೂ ತೋರಿಸಿ ಇದೇ ಗಾಂಜಾ ಅಂದಿದ್ರು. ನಾನು ಕೂಡ ಅದನ್ನೇ ಗಾಂಜಾ ಅಂತ ಭಾವಿಸಿದ್ದೇನೆ ಎಂದ ಸಚಿವರು, ಅಸಲಿ ಗಾಂಜಾ ಗಿಡ ಹೇಗಿರುತ್ತೆ ಎಂಬುದು ತನಗೆ ಗೊತ್ತೇ ಇಲ್ಲ ಎಂಬಂತೆ ಹೇಳಿದರು. ಆಗಾಗ ಶ್ರೀಲಂಕಾ, ಮಲೇಶಿಯಾಗೆ ಹೋಗೋರು, ಪಾರ್ಟಿಯಲ್ಲಿ ಭಾಗವಹಿಸೋರು, ನಟಿಯರ ಜೊತೆ ಸಂಬಂಧ ಇರೋರು ಈ ಬಗ್ಗೆ ಹೇಳಬಹುದು. ನನಗೆ ಆ ಬಗ್ಗೆ ಮಾಹಿತಿಯೇ ಇಲ್ಲ ಎಂದು ಸಿ.ಟಿ. ರವಿ ವ್ಯಂಗ್ಯಭರಿತವಾಗಿ ಹೇಳಿದರು. ಇದನ್ನೂ ಓದಿರಿ ‘ನಂಗೆ ಸಂಜನಾನೂ ಗೊತ್ತಿಲ್ಲ, ರಾಗಿಣಿನೂ ಗೊತ್ತಿಲ್ಲ… ಗೊತ್ತಿರೋದು ನನ್ನ ಹೆಂಡ್ತಿ ಮಾತ್ರ’

    ಇನ್ನು ಡ್ರಗ್ಸ್​ ಮಾಫಿಯಾದಲ್ಲಿ ರಾಜಕಾರಣಿಗಳ ಮಕ್ಕಳೂ ಇದ್ದಾರೆ ಎಂಬ ವಿಚಾರ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ನಾನು ಗಾಳಿಯಲ್ಲಿ ಗುಂಡು ಹೊಡೆಯೋ ಕೆಲಸ ಮಾಡಲ್ಲ. ಮಾಹಿತಿ ಇರೋರು ತನಿಖಾ ತಂಡದ ಮುಂದೆ ಮಾಹಿತಿ ಕೊಡಲಿ. ಸಾಕ್ಷಿ ಕೊಡಲಿ. ಸಾಕ್ಷಿ ಆಧಾರದಲ್ಲಿ ತನಿಖೆ ಆಗುತ್ತೆ. ಈ ಪ್ರಕರಣದಲ್ಲಿ ಯಾರೇ ಇದ್ದರೂ ಕ್ರಮ ಆಗುತ್ತೆ. ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ ‌ಎಂದರು.

    ಡ್ರಗ್ಸ್ ಮಾಫಿಯಾದಲ್ಲಿ 7 ಕೋಟಿ ರೂ.ಗೂ ಹೆಚ್ಚು ಹವಾಲಾ ಹಣ ಓಡಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ. ಈ ಎಲ್ಲ ಆಯಾಮದಲ್ಲೂ ತನಿಖೆ ಆಗಬೇಕು. ಅಗತ್ಯಬಿದ್ದರೆ ಇಡಿ ಕೂಡ ತನಿಖೆ ಮಾಡಲಿ. ಏನಾದ್ರೂ ಭಯೋತ್ಪಾದಕ ನಂಟು ಇದ್ರಲ್ಲಿ ಬೆಸೆದುಕೊಂಡಿದೆಯಾ ಆ ಬಗ್ಗೆಯೂ ತನಿಖೆ ಆಗಬೇಕು ಎಂದು ಇದೇ ವೇಳೆ ಸಚಿವರು ಹೇಳಿದರು. ಡ್ರಗ್ಸ್ ಮಾಫಿಯಾವನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂಬುದು ನಮ್ಮ ಸರ್ಕಾರದ ನಿಲುವು ಎಂದು ಸ್ಪಷ್ಟ ಪಡಿಸಿದರು. (ದಿಗ್ವಿಜಯ ನ್ಯೂಸ್)

    ಡ್ರಗ್ಸ್ ಕೇಸ್​ನಲ್ಲಿ ಬರೀ ಹೆಣ್ಮಕ್ಕಳದ್ದೇ ಹೆಸರು; ನಟಿ ಪಾರುಲ್​ ಆಕ್ರೋಶ

    ಮನೆ ಇಲ್ಲದವರಿಗೆ ಗುಡ್​ ನ್ಯೂಸ್ ಕೊಟ್ಟ ಸಚಿವ ಸೋಮಣ್ಣ

    ಸಿನಿಪ್ರಿಯರಿಗೆ ಗುಡ್ ನ್ಯೂಸ್, ಚಿತ್ರಮಂದಿರ ಓಪನ್​ಗೆ ಡೇಟ್​ ಫಿಕ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts