More

    2022ರವರೆಗೆ ಚೆನ್ನೈ ಸೂಪರ್‌ಕಿಂಗ್ಸ್‌ನಲ್ಲೇ ಧೋನಿ ಆಟ!

    ನವದೆಹಲಿ: ಎಂಎಸ್ ಧೋನಿ ಟೀಮ್ ಇಂಡಿಯಾಗೆ ಮರಳುವ ಬಗ್ಗೆ ಗೊಂದಲಗಳು ಮುಂದುವರಿದಿರುವ ನಡುವೆ ಅವರು 2022ರ ಐಪಿಎಲ್‌ವರೆಗೆ ಚೆನ್ನೈ ಸೂಪರ್‌ಕಿಂಗ್ಸ್ ತಂಡದಲ್ಲೇ ಆಡುವುದು ಖಚಿತಗೊಂಡಿದೆ. ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಸಿಇಒ ಕಾಶಿ ವಿಶ್ವನಾಥನ್ ಅವರು, ಎಂಎಸ್ ಧೋನಿ 2021ರಲ್ಲಿ ಮಾತ್ರವಲ್ಲದೆ 2022ರ ಐಪಿಎಲ್‌ನಲ್ಲೂ ತಂಡದ ಭಾಗವಾಗಿರುತ್ತಾರೆ ಎಂದು ಹೇಳಿದ್ದಾರೆ.

    39 ವರ್ಷದ ಧೋನಿ ಕಳೆದೊಂದು ವರ್ಷದಿಂದ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯಗಳನ್ನು ಆಡಿಲ್ಲ. 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯದಾಗಿ ಆಡಿದ್ದರು. ಇದೀಗ ಅವರು ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ನಡೆಯಲಿರುವ ಐಪಿಎಲ್ 13ನೇ ಆವೃತ್ತಿಯಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ. 2022ರ ಐಪಿಎಲ್ ವೇಳೆಗೆ ಧೋನಿಗೆ 41 ವರ್ಷವಾಗಿರುತ್ತದೆ.

    ‘ನಾವು 2020 ಮತ್ತು 2022ರ ಐಪಿಎಲ್‌ನಲ್ಲಿ ಧೋನಿ ತಂಡದ ಭಾಗವಾಗಿರುವ ನಿರೀಕ್ಷೆಯಲ್ಲಿದ್ದೇವೆ. 2022ರ ಐಪಿಎಲ್‌ನಲ್ಲೂ ಅವರು ತಂಡದಲ್ಲಿರಬೇಕೆಂದು ಬಯಸಿದ್ದೇವೆ. ಧೋನಿ ರಾಂಚಿಯಲ್ಲಿ ಅಭ್ಯಾಸ ಆರಂಭಿಸಿದ್ದಾರೆ ಎಂದು ನಮಗೂ ಮಾಧ್ಯಮಗಳಿಂದಲೇ ಮಾಹಿತಿ ಲಭಿಸಿದೆ. ಆದರೆ ನಾವು ನಾಯಕ, ಬಾಸ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅವರ ಬಗ್ಗೆ ನಾವು ತಲೆಕೆಡಿಸಿಕೊಳ್ಳಲೇಬೇಕಾಗಿಲ್ಲ. ಅವರಿಗೆ ತಮ್ಮ ಜವಾಬ್ದಾರಿಗಳ ಬಗ್ಗೆ ತಿಳಿದಿದೆ. ಅವರು ತಮ್ಮ ಮತ್ತು ತಂಡದ ಹೊಣೆ ಹೊತ್ತುಕೊಳ್ಳಬಲ್ಲರು’ ಎಂದು ಕಾಶಿ ವಿಶ್ವನಾಥನ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ಜೂನಿಯರ್ ಸ್ಟೈನ್ ಖ್ಯಾತಿಯ ಮುಂಬೈ ಕ್ರಿಕೆಟಿಗ ಆತ್ಮಹತ್ಯೆ, ಐಪಿಎಲ್ ಅವಕಾಶ ಕೈತಪ್ಪಿದ್ದೇ ಕಾರಣ!

    ಸಿಎಸ್‌ಕೆ ತಂಡ ಐಪಿಎಲ್ ಟೂರ್ನಿಗಾಗಿ ಯುಎಇಗೆ ಪ್ರಯಾಣಿಸುವುದಕ್ಕೆ ಮುನ್ನ ಆಗಸ್ಟ್ 16ರಿಂದ 20ರವರೆಗೆ ಚೆನ್ನೈನಲ್ಲಿ ತರಬೇತಿ ಶಿಬಿರ ಆಯೋಜಿಸುವ ಯೋಜನೆ ಹಾಕಿಕೊಂಡಿದೆ. ಆಗಸ್ಟ್ 21ರಂದು ತಂಡ ಯುಎಇಗೆ ಪ್ರಯಾಣ ಬೆಳೆಸಲಿದೆ. ಆಗಸ್ಟ್ 14ರಂದು ತಂಡದ ಎಲ್ಲ ಆಟಗಾರರು ಚೆನ್ನೈನಲ್ಲಿ ಒಗ್ಗೂಡಲಿದ್ದಾರೆ ಎಂದು ಕಾಶಿ ವಿಶ್ವನಾಥನ್ ಅವರು ಖಚಿತಪಡಿಸಿದ್ದಾರೆ.

    ದ್ವಿಶತಕ ಸಿಡಿಸಿದರೂ, ಕೌಂಟಿ ಕ್ರಿಕೆಟಿಗನನ್ನು ತಂಡದಿಂದ ಹೊರದಬ್ಬಿದ ಸೆಲ್ಫಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts