More

    ಜೂನಿಯರ್ ಸ್ಟೈನ್ ಖ್ಯಾತಿಯ ಮುಂಬೈ ಕ್ರಿಕೆಟಿಗ ಆತ್ಮಹತ್ಯೆ, ಐಪಿಎಲ್ ಅವಕಾಶ ಕೈತಪ್ಪಿದ್ದೇ ಕಾರಣ!

    ಮುಂಬೈ: ದಕ್ಷಿಣ ಆಫ್ರಿಕಾದ ಸ್ಟಾರ್ ವೇಗಿ ಡೇಲ್ ಸ್ಟೈನ್ ಅವರನ್ನೇ ಹೋಲುವ ಬೌಲಿಂಗ್ ಶೈಲಿ ಹೊಂದಿದ್ದ ಕಾರಣದಿಂದಾಗಿ ‘ಜೂನಿಯರ್ ಸ್ಟೈನ್’ ಎಂದೇ ಸ್ಥಳೀಯ ಕ್ರಿಕೆಟ್‌ನಲ್ಲಿ ಕರೆಸಿಕೊಳ್ಳುತ್ತಿದ್ದ ಮುಂಬೈನ ಕ್ಲಬ್ ಕ್ರಿಕೆಟಿಗ ಕರಣ್ ತಿವಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಪಿಎಲ್ ತಂಡಗಳನ್ನು ಪ್ರತಿನಿಧಿಸುವ ಅವಕಾಶ ಕೈತಪ್ಪಿದ್ದೇ ಅವರ ಈ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

    27 ವರ್ಷದ ಕರಣ್ ತಿವಾರಿ ಮಲಡ್ (ಈಸ್ಟ್) ನಿವಾಸದಲ್ಲಿ ಸೋವವಾರ ರಾತ್ರಿ ನೇಣುಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಐಪಿಎಲ್ ತಂಡಗಳಲ್ಲಿ ಅವಕಾಶ ಸಿಗದ ಕಾರಣದಿಂದಾಗಿ ಅವರು ಹತಾಶೆಗೆ ಒಳಗಾಗಿದ್ದರು ಎನ್ನಲಾಗಿದೆ.

    ಕರಣ್ ಆತ್ಮಹತ್ಯೆ ನಿರ್ಧಾರದ ಬಗ್ಗೆ ಉದಯ್‌ಪುರದಲ್ಲಿನ ತನ್ನ ಆತ್ಮೀಯ ಗೆಳೆಯನಿಗೆ ಮಾಹಿತಿ ನೀಡಿದ್ದ. ಅದರ ಬೆನ್ನಲ್ಲೇ ಗೆಳೆಯ, ಮುಂಬೈನಲ್ಲೇ ಇರುವ ಕರಣ್ ಅವರ ಸಹೋದರಿಗೆ ಮಾಹಿತಿ ನೀಡಿದ್ದ. ಸಹೋದರಿ ತಾಯಿಗೆ ಕರೆ ಮಾಡಿ ಸುದ್ದಿ ತಿಳಿಸಿದರೂ, ಆಗ ಬಹಳಷ್ಟು ತಡವಾಗಿತ್ತು. ಕುಟುಂಬದವರು ಕರಣ್ ಕೋಣೆಯ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ಅವರು ಸೀಲಿಂಗ್ ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ, ಆಸ್ಪತ್ರೆಗೆ ತಲುಪುವ ಮೊದಲೇ ಅವರು ಕೊನೆಯುಸಿರೆಳೆದಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಐಪಿಎಲ್​ಗೆ ಮುನ್ನ ರಾಜಸ್ಥಾನ ರಾಯಲ್ಸ್​-ಕಿಂಗ್ಸ್​ ಇಲೆವೆನ್​ ಪಂಜಾಬ್​ ಟ್ಯಾಟೂ ವಾರ್​!

    ಬಿಸಿಸಿಐ ನಿಯಮದ ಪ್ರಕಾರ, ಯಾವುದೇ ವಯೋಮಿತಿ ವಿಭಾಗದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ ಕ್ರಿಕೆಟಿಗರು ಮಾತ್ರ ಐಪಿಎಲ್ ಆಟಗಾರರ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ. ಹೀಗಾಗಿ ಕ್ಲಬ್ ಕ್ರಿಕೆಟಿಗ ಕರಣ್ ತಿವಾರಿ ಅವಕಾಶ ವಂಚಿತರಾಗಿದ್ದರು. ಕಳೆದ ವರ್ಷ ಅವರು ಐಪಿಎಲ್ ಟೂರ್ನಿಯ ವೇಳೆ ವಾಂಖೆಡೆ ಕ್ರೀಡಾಂಗಣದಲ್ಲಿ ಹಲವು ತಂಡಗಳಿಗೆ ನೆಟ್ ಬೌಲರ್ ಆಗಿ ಕಾರ್ಯನಿರ್ವಹಿಸಿದ್ದರು. ಸ್ಥಳೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದರೂ, ರಾಜ್ಯಮಟ್ಟದ ಕ್ರಿಕೆಟಿಗ ಎನಿಸಿಕೊಳ್ಳದ ಕಾರಣದಿಂದಾಗಿ ಅವರಿಗೆ ಐಪಿಎಲ್ ಅವಕಾಶ ಒಲಿದಿರಲಿಲ್ಲ.

    ‘ಕರಣ್ ರಾಜ್ಯ ತಂಡವೊಂದರ ಪರ ಆಡುವ ಹಂಬಲದಲ್ಲಿದ್ದ. ಆತ ಕೆಲ ತಂಡಗಳ ಪರ ಮಾತುಕತೆಯನ್ನೂ ನಡೆಸಿದ್ದ. ಆತ ಓರ್ವ ಭರವಸೆಯ ಕ್ರಿಕೆಟಿಗನಾಗಿದ್ದ. ಆತನ ಕೊನೆಯ ವ್ಯಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾನೆ. ಆತ ಇಂಥ ಕಟುವಾದ ನಿರ್ಧಾರ ಕೈಗೊಂಡಿದ್ದು ನಮಗೆ ಆಘಾತ ತಂದಿದೆ’ ಎಂದು ಕರಣ್ ತಿವಾರಿ ಗೆಳೆಯನೊಬ್ಬ ತಿಳಿಸಿದ್ದಾನೆ.

    ಕರಣ್ ಯಾವುದೇ ಉದ್ಯೋಗವನ್ನೂ ಹೊಂದಿರದ ಕಾರಣದಿಂದ ಆತಂಕದಲ್ಲಿದ್ದ. ಸಾವನಿರ್ ಕ್ರಿಕೆಟ್ ಕ್ಲಬ್ ಮತ್ತು ಯುನೈಟೆಡ್ ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಪರ ಆಡುವ ಆತ ಇತ್ತೀಚೆಗೆ ಲೆವೆಲ್ 1 ಕೋಚಿಂಗ್ ಕೋರ್ಸ್ ಕೂಡ ಪೂರ್ಣಗೊಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಪಾಕ್​ ವಿರುದ್ಧ ಟೆಸ್ಟ್​ನಲ್ಲಿ ಅನುಚಿತ ಪದ ಬಳಕೆ, ತಂದೆಯಿಂದಲೇ ಮಗನಿಗೆ ದಂಡ ಶಿಕ್ಷೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts