More

    ಪಾಕ್​ ವಿರುದ್ಧ ಟೆಸ್ಟ್​ನಲ್ಲಿ ಅನುಚಿತ ಪದ ಬಳಕೆ, ತಂದೆಯಿಂದಲೇ ಮಗನಿಗೆ ದಂಡ ಶಿಕ್ಷೆ!

    ದುಬೈ: ಮಕ್ಕಳು ತಪ್ಪು ಮಾಡಿದಾಗ ಶಿಕ್ಷಿಸುವ ಅಧಿಕಾರ ತಂದೆಗೆ ಇರುತ್ತದೆ. ಪುತ್ರ ವಾತ್ಸಲ್ಯಕ್ಕೆ ಕಟ್ಟು ಬೀಳದೆ, ತಪ್ಪು ಮಾಡಿದ ಮಗನನ್ನು ಶಿಕ್ಷಿಸುವ ಮೂಲಕ ಇಂಗ್ಲೆಂಡ್​ನ ಕ್ರಿಸ್​ ಬ್ರಾಡ್​ ಕೂಡ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ! ಪ್ರವಾಸಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ವೇಗಿ ಸ್ಟುವರ್ಟ್​ ಬ್ರಾಡ್​, ಯಾಸಿರ್​ ಷಾ ವಿರುದ್ಧ ಅನುಚಿತ ಪದ ಬಳಕೆ ಮಾಡಿದ್ದರು. ಈ ಘಟನೆ ಸಂಬಂಧ ಪಂದ್ಯದ ಮ್ಯಾಚ್​ ರೆಫ್ರಿಯಾಗಿದ್ದ ಕ್ರಿಸ್​ ಬ್ರಾಡ್​ ಅವರು ಪುತ್ರ ಸ್ಟುವರ್ಟ್​ ಬ್ರಾಡ್​ಗೆ ದಂಡ ಶಿಕ್ಷೆ ವಿಧಿಸಿದ್ದಾರೆ.

    ಮ್ಯಾಂಚೆಸ್ಟರ್​ನಲ್ಲಿ ನಡೆದ ಪಂದ್ಯದಲ್ಲಿ ಶನಿವಾರ ಪಾಕಿಸ್ತಾನದ 2ನೇ ಇನಿಂಗ್ಸ್​ನ 46ನೇ ಓವರ್​ ವೇಳೆ ಸ್ಟುವರ್ಟ್​ ಬ್ರಾಡ್ ಅವರು ಪಾಕ್​ ಸ್ಪಿನ್ನರ್​ ಯಾಸಿರ್​ ಷಾ ವಿಕೆಟ್​ ಕಬಳಿಸಿದ ಬಳಿಕ ಅನುಚಿತ ಪದ ಪ್ರಯೋಗ ಮಾಡಿದ್ದರು. ಈ ಮೂಲಕ ಸ್ಟುವರ್ಟ್​ ಬ್ರಾಡ್​ ಅವರು ಐಸಿಸಿ ನೀತಿ ಸಂಹಿತೆ 2.5 ವಿಧಿಯ ಉಲ್ಲಂಘನೆ ಮಾಡಿದ್ದಾರೆ ಎಂದು ಮ್ಯಾಚ್​ ರೆಫ್ರಿ ಕ್ರಿಸ್​ ಬ್ರಾಡ್​ ಪರಿಗಣಿಸಿದ್ದಾರೆ. ಇದಕ್ಕಾಗಿ ಸ್ಟುವರ್ಟ್​ ಬ್ರಾಡ್​ಗೆ ಪಂದ್ಯ ಸಂಭಾವನೆಯ ಶೇ. 15ರಷ್ಟು ದಂಡ ಶಿಕ್ಷೆ ವಿಧಿಸಲಾಗಿದೆ. ಜತೆಗೆ 1 ಡಿಮೆರಿಟ್​ ಅಂಕದ ಶಿಸ್ತುಕ್ರಮವನ್ನೂ ತೆಗೆದುಕೊಳ್ಳಲಾಗಿದೆ. ಮ್ಯಾಚ್​ ರೆಫ್ರಿ ಸಾಮಾನ್ಯವಾಗಿ ತಟಸ್ಥ ದೇಶಕ್ಕೆ ಸೇರಿದವರಾಗಿರುತ್ತಾರೆ. ಆದರೆ ಈ ಬಾರಿ ಕರೊನಾ ವೈರಸ್​ ಹಾವಳಿಯಿಂದ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳಿರುವ ಕಾರಣದಿಂದಾಗಿ, ಆತಿಥೇಯ ದೇಶದವರನ್ನೇ ಅಂಪೈರ್​ ಮತ್ತು ಮ್ಯಾಚ್​ ರೆಫ್ರಿಗಳನ್ನಾಗಿ ನೇಮಿಸಲು ಐಸಿಸಿ ಅವಕಾಶ ನೀಡಿದೆ.

    ಸ್ಟುವರ್ಟ್​ ಬ್ರಾಡ್​ ಅವರು ಕಳೆದ 24 ತಿಂಗಳ ಅವಧಿಯಲ್ಲಿ 2ನೇ ಬಾರಿ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಇದರಿಂದಾಗಿ ಅವರ ಒಟ್ಟು ಡಿಮೆರಿಟ್​ ಅಂಕಗಳ ಸಂಖ್ಯೆ ಈಗ 3ಕ್ಕೇರಿದೆ. ಈ ಹಿಂದೆ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ವಾಂಡರರ್ಸ್​ ಟೆಸ್ಟ್​ ಪಂದ್ಯದ ವೇಳೆಯೂ ಅವರು ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದರು. ಅದಕ್ಕೆ ಮುನ್ನ 2018ರ ಟ್ರೆಂಟ್​ ಬ್ರಿಡ್ಜ್​ ಟೆಸ್ಟ್​ನಲ್ಲಿ ಪ್ರವಾಸಿ ಭಾರತ ತಂಡದ ವಿರುದ್ಧವೂ ಅನುಚಿತ ವರ್ತನೆ ತೋರಿದ್ದರು.

    ಇದನ್ನೂ ಓದಿ: ಲಂಕಾ ಪ್ರೀಮಿಯರ್​ ಲೀಗ್​ ದಿಢೀರ್​ ಮುಂದೂಡಿಕೆ, ಕ್ವಾರಂಟೈನ್​ ನಿಯಮವೇ ಕಾರಣ!

    ಐಸಿಸಿ ಮ್ಯಾಚ್​ ರೆಫ್ರಿ ಕ್ರಿಸ್​ ಬ್ರಾಡ್​ ಎದುರು ನಡೆದ ವಿಚಾರಣೆಯ ವೇಳೆ ಸ್ಟುವರ್ಟ್ ಬ್ರಾಡ್​ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಮೈದಾನದ ಅಂಪೈರ್​ಗಳಾದ ರಿಚರ್ಡ್​ ಕಿಟ್ಟೆಲ್​ಬೊರೋ ಮತ್ತು ರಿಚರ್ಡ್​ ಎಲ್ಲಿಂಗ್​ವರ್ತ್​ ಮತ್ತು ತೃತೀಯ ಅಂಪೈರ್​ ಮೈಕೆಲ್​ ಗೋವ್​ ಅವರು ಸ್ಟುವರ್ಟ್​ ಬ್ರಾಡ್​ ವರ್ತನೆಯ ವಿರುದ್ಧ ಮ್ಯಾಚ್​ ರೆಫ್ರಿಗೆ ದೂರು ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಸ್ಟುವರ್ಟ್​ ಬ್ರಾಡ್​ಗೆ ಗರಿಷ್ಠ ಶೇ. 50ರಷ್ಟು ದಂಡ ವಿಧಿಸಲು ಅವಕಾಶವಿತ್ತು ಎನ್ನಲಾಗಿದೆ.

    VIDEO | ಪಿಪಿಇ ಕಿಟ್​ ಧರಿಸಿ ಕುಣಿದ ಚಾಹಲ್​ ಭಾವಿ ಪತ್ನಿ ಧನಶ್ರೀ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts