More

    ಟೀಕೆಗಳಿಗೆ ಮನ್ನಣೆ ನೀಡಲ್ಲ-ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

    ಚಿತ್ರದುರ್ಗ: ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳು ಜನರ ಕಣ್ಣ ಮುಂದಿವೆ. ಇದನ್ನು ಸಹಿಸಿಕೊಳ್ಳಲಾಗದೆ ರಾಜಕೀಯ ವಿರೋಧಿಗಳು ಟೀಕಿಸುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಟೀಕೆ ಸಹಜ, ಇದಕ್ಕೆಲ್ಲ ನಾನು ಸೊಪ್ಪು ಹಾಕುವುದಿಲ್ಲ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

    ಮೆದೇಹಳ್ಳಿ ಗ್ರಾಪಂ ವ್ಯಾಪ್ತಿ ಈಶ್ವರ ಬಡಾವಣೆ ಮತ್ತು ತರಳಬಾಳು ನಗರದಲ್ಲಿ ಒಂದು ಕೋಟಿ ರೂ.ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
    ಯಾರ ಕಾಲದಲ್ಲಿ ಎಷ್ಟೆಷ್ಟು ಪ್ರಗತಿಯಾಗಿದೆ ಎಂಬುದು ಸ್ಪಷ್ಟವಾಗಿದೆ.

    ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ಪ್ರತಿ ಹಳ್ಳಿ ಹಾಗೂ ಕೊಳೆಗೇರಿ ಪ್ರದೇಶಗಳಲ್ಲಿ ಸಿ.ಸಿ.ರಸ್ತೆಗಳಾಗಿವೆ. ತರಳಬಾಳು ನಗರ ಮತ್ತು ಈಶ್ವರ ಬಡಾವಣೆಯಲ್ಲಿ 2.5 ಕೋಟಿ ರೂ.ವೆಚ್ಚದಲ್ಲಿ ರಸ್ತೆಗಳಾಗಿವೆ. ಬಾಕಿ ರಸ್ತೆಗಳ ಅಭಿವೃದ್ಧಿಗೆ 1 ಕೋಟಿ ರೂ.ಅನುದಾನ ಕೊಡಲಾಗಿದೆ ಎಂದರು.

    ಅಂತರ್ಜಲ ಅಭಿವೃದ್ಧಿಗೆ ಪ್ರತಿ ಹಳ್ಳಿಯಲ್ಲಿ ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗಿದೆ. 583 ಕೋಟಿ ರೂ.ವೆಚ್ಚದಲ್ಲಿ 183 ಹಳ್ಳಿಗಳಿಗೆ ವಿ.ವಿ. ಸಾಗರದಿಂದ ಕುಡಿಯುವ ನೀರು ಪೂರೈಕೆ ಕಾಮಗಾರಿ ಪ್ರಗತಿಯಲ್ಲಿದೆ. 13 ಸಾವಿರ ಕೊಳೆಗೇರಿ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸ ಲಾಗುತ್ತಿದೆ.

    ರಾಜ್ಯದಲ್ಲೇ ನನ್ನ ಒಂದೇ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 2630 ಮನೆಗಳು ಮಂಜೂರಾಗಿದ್ದು, ಎಲ್ಲ ಸಮುದಾಯಗಳ ಫಲಾನುಭವಿಗಳಿಗೆ ಗ್ರಾಮ ಸಭೆಗಳ ಮೂಲಕ ಹಂಚಿಕೆ ಮಾಡಲಾಗಿದೆ. ನಗರದಲ್ಲಿ ಹೊಸ 50 ಉದ್ಯಾನಗಳನ್ನು ಅಭಿವೃದ್ಧಿ ಮಾಡಲಾಗುತ್ತಿ ದೆ. ಕೆಲವು ಪಾರ್ಕ್‌ಗಳಲ್ಲಿ ಓಪನ್ ಜಿಮ್ ಸ್ಥಾಪಿಸಲಾಗಿದೆ ಎಂದರು.

    ಗ್ರಾಪಂ ಉಪಾಧ್ಯಕ್ಷ ಧನ್ಯಕುಮಾರ್, ಸದಸ್ಯರಾದ ಭಾಗ್ಯಮ್ಮ, ಜಯರಾಮ್‌ರೆಡ್ಡಿ, ಎಚ್.ತಿಮ್ಮಣ್ಣ, ಮಮತಾ, ಪ್ರಿಯದರ್ಶಿನಿ ರಾಜು, ರಮೇಶ್,ನಿರಂಜನ್, ಬೋಗೇಶ್,ಸ್ಥಳೀಯರಾದ ಶಿವಮ್ಮ, ಪೂರ್ಣಿಮಾ ಮತ್ತು ರಾ.ಹೆ.ಕಚೇರಿ ಸಿಬ್ಬಂದಿ ಪರಮೇಶಪ್ಪ, ಕುಬೇರಪ್ಪ, ಪಿಡಿಒ ಆನಂದ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts