ಇಡೀ ರಾತ್ರಿ ಕಣ್ಣೀರಿಟ್ಟಂತಹ ಅಸಹಾಯಕ ಕ್ಷಣವನ್ನು ಬಹಿರಂಗಪಡಿಸಿದ ಟೀಮ್​ ಇಂಡಿಯಾ ನಾಯಕ ಕೊಹ್ಲಿ!

Kohli 4 Jan20
Published on

ನವದೆಹಲಿ: ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅವರು ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದು, ಇಂದು ಉತ್ತಮ ಸ್ಥಾನದೊಂದಿಗೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇಂತಿಪ್ಪ ಕೊಹ್ಲಿ ತಮ್ಮ ಕ್ರೀಡಾ ಜೀವನದ ಅಸಹಾಯಕ ಕ್ಷಣವನ್ನು ಕರೊನಾ ಲಾಕ್​ಡೌನ್​ ನಡುವೆ ಮೆಲುಕು ಹಾಕಿದ್ದಾರೆ.

ಆರಂಭದಲ್ಲಿ ನನ್ನನ್ನು ರಾಜ್ಯ ತಂಡಕ್ಕೆ ಆಯ್ಕೆ ಮಾಡದಿದ್ದಾಗ ನನ್ನ ಪರವಾಗಿ ಏನು ನಡೆಯುತ್ತಿಲ್ಲ ಎಂದು ಭಾವಿಸಿದ್ದೆ. ಅಂದು ಇಡೀ ರಾತ್ರಿ ಕಣ್ಣೀರಾಕಿದೆ. ನಾನೇಕೆ ಆಯ್ಕೆಯಾಗಲಿಲ್ಲ? ಎಂದು ನನ್ನ ಕೋಚ್ ಅನ್ನು ಪ್ರಶ್ನಿಸಿದೆ​. ನಂತರ ದಿನಗಳಲ್ಲಿ ಎಲ್ಲವು ಬದಲಾಯಿತು ಎಂದು ಅನ್​ಅಕಾಡೆಮಿ ಆಯೋಜಿಸಿದ್ದ ಆನ್​ಲೈನ್​ ತರಗತಿಯಲ್ಲಿ ಕೊಹ್ಲಿ ಹೇಳಿಕೊಂಡಿದ್ದಾರೆ. ಪತ್ನಿ ಅನುಷ್ಕಾ ಕೂಡ ತಮ್ಮ ಜೀವನದಲ್ಲಿ ಎದುರಿಸಿದ ಸವಾಲುಗಳನ್ನು ಹೇಳಿಕೊಂಡರು.

ಈ ಕರೊನಾ ಬಿಕ್ಕಟ್ಟಿನಿಂದ ನಾವು ಒಂದು ಸಮಾಜವಾಗಿ ಹೆಚ್ಚು ಸಹಾನುಭೂತಿ ಹೊಂದಿದ್ದೇವೆ ಎಂಬುದೇ ಒಂದು ಪಾಸಿಟಿವ್​ ಆಗಿದೆ. ಕರೊನಾ ವಿರುದ್ಧ ಹೋರಾಡುತ್ತಿರುವರ ಕಡೆಗೆ ನಾವು ಹೆಚ್ಚು ಕೃತಜ್ಞರಾಗಿದ್ದೇವೆ. ಸಂಕಷ್ಟದಿಂದ ಹೊರಬಂದ ಮೇಲೂ ಇದೇ ಮನಸ್ಥಿತಿಯನ್ನು ಉಳಿಸಿಕೊಳ್ಳತ್ತೇವೆ ಎಂಬ ಭರವಸೆ ಇದೆ ಎಂದರು.

ಕರೊನಾ ಸಾಂಕ್ರಮಿಕವು ವಿಶ್ವಕ್ಕೆ ಒಂದು ಮುಖ್ಯವಾದ ಪಾಠವನ್ನು ಹೇಳಿದೆ. ಜೀವನವು ಅನಿರೀಕ್ಷಿತವಾಗಿದೆ. ನಿಮಗೆ ಏನು ಸಂತೋಷವು ಅದನ್ನು ಮಾಡಿ ಮತ್ತು ಎಲ್ಲ ಸಮಯದಲ್ಲೂ ಹೋಲಿಕೆ ಸರಿಯಲ್ಲ. ಈ ಬಿಕ್ಕಟ್ಟಿನಿಂದ ಹೊರ ಬರಲು ಜನರಿಗೆ ಆಯ್ಕೆಗಳೂ ಸಹ ಇವೆ. ಇದರ(ಕರೊನಾ) ನಂತರ ಜನರ ಜೀವನವು ಸಹ ವಿಭಿನ್ನವಾಗಿರಲಿದೆ ಎಂದು ಕೊಹ್ಲಿ ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net