More

    ಇನ್ಮುಂದೆ ರೋಹಿತ್​ ಶರ್ಮ DRS​ ಮನವಿ ಮಾಡುವುದಿಲ್ಲ! ಅದಕ್ಕೆ ಕಾರಣ ಈ ವ್ಯಕ್ತಿಗಳು…

    ನವದೆಹಲಿ: ರೋಹಿತ್​ ಶರ್ಮ ನೇತೃತ್ವದ ಟೀಮ್​ ಇಂಡಿಯಾ, ತವರು ನೆಲದಲ್ಲಿ ನಡೆಯುತ್ತಿರುವ ಪ್ರಸಕ್ತ ವಿಶ್ವಕಪ್​ ಟೂರ್ನಿಯಲ್ಲಿ ತಾನು ಎದುರಿಸಿದ ಏಳು ಪಂದ್ಯಗಳಲ್ಲೂ ಅಮೋಘ ಗೆಲುವು ದಾಖಲಿಸುವ ಮೂಲಕ ವಿಶ್ವಕಪ್​ನಲ್ಲಿ ಸೆಮಿಫೈನಲ್​ ತಲುಪಿದ ಮೊದಲ ತಂಡ ಹೆಸರಿಗೆ ಪಾತ್ರವಾಗಿದೆ. ಗುರುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 302 ರನ್​ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಭಾರತ ಸಮೀಸ್​ಗೆ ಲಗ್ಗೆ ಇಟ್ಟಿದ್ದು, ಫೈನಲ್​ ಪ್ರವೇಶಿಸಲು ಇನ್ನೊಂದು ಹೆಜ್ಜೆ ಬಾಕಿ ಇದೆ.

    ಇದೇ ಖುಷಿಯಲ್ಲಿ ನಿನ್ನೆ ಪಂದ್ಯದ ಬಳಿಕ ಮಾತನಾಡಿದ ರೋಹಿತ್​, ನಾವು ಸಮಿಫೈನಲ್​ಗೆ ಅಧಿಕೃತವಾಗಿ ಅರ್ಹರಾಗಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ನಾವು ಚೆನ್ನೈನಲ್ಲಿ ಮೊದಲ ಪಂದ್ಯವನ್ನು ಆರಂಭಿಸಿದಾಗ ಇದೇ ನಮ್ಮ ಗುರಿ ಸಹ ಆಗಿತ್ತು. ಫೈನಲ್​ಗೆ ಖಂಡಿತವಾಗಿ ಅರ್ಹತೆ ಪಡೆಯುತ್ತೇವೆ. ನಾವು ಏಳು ಪಂದ್ಯಗಳನ್ನು ಆಡಿದ ರೀತಿ ತುಂಬಾ ಪರಿಣಾಮಕಾರಿಯಾಗಿತ್ತು. ಪ್ರತಿಯೊಬ್ಬರೂ ತಮ್ಮ ಪ್ರಯತ್ನದಲ್ಲಿ ತೊಡಗಿದರು ಮತ್ತು ಬಹಳಷ್ಟು ವ್ಯಕ್ತಿಗಳು ತಮ್ಮ ಶ್ರಮವನ್ನು ಹಾಕಿದ್ದಾರೆ ಎಂದು ರೋಹಿತ್​ ಹೇಳಿದರು.

    ನಿನ್ನೆ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಕೆ.ಎಲ್​. ರಾಹುಲ್​, ಡಿಆರ್​ಎಸ್ ತೀರ್ಮಾನದಿಂದಲೇ ಎಲ್ಲರ ಗಮನ ಸೆಳೆದರು. ಈ ಬಗ್ಗೆ ಮಾತನಾಡಿದ ರೋಹಿತ್​, ಡಿಆರ್​ಎಸ್​ ಮನವಿಯ ನಿರ್ಧಾರವನ್ನು ವಿಕೆಟ್​ ಕೀಪರ್​ ಮತ್ತು ಬೌಲರ್​ಗಳಿಗೆ ಬಿಟ್ಟಿದ್ದೇನೆ ಎಂದರು. ನಾನು ನಂಬಬಹುದಾದ ವ್ಯಕ್ತಿಗಳನ್ನು ನಾನು ಮೊದಲು ಕಂಡುಕೊಳ್ಳಬೇಕು. ಬೌಲರ್​ ಮತ್ತು ವಿಕೆಟ್​ ಕೀಪರ್​ಗಳಿಗೆ ಡಿಆರ್​ಎಸ್​ ಬಗ್ಗೆ ಖಚಿತತೆ ಇರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು

    ನಿನ್ನೆಯ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ 56 ಎಸೆತಗಳಲ್ಲಿ 82ರನ್ ಗಳಿಸಿ ಫಾರ್ಮ್‌ಗೆ ಮರಳಿದ್ದರ ಬಗ್ಗೆ ರೋಹಿತ್ ಶರ್ಮ ಸಂತೋಷಪಟ್ಟರು. ನೀವು ಹೆಚ್ಚು ರನ್ ಗಳಿಸಲು ಬಯಸಿದಾಗ ನೀವು ಹೊಂದಿರಬೇಕಾದ ಆಟದ ವೈಖರಿ ಇದಾಗಿದೆ. ತನ್ನ ಮುಂದೆ ಇರುವ ಸವಾಲಗಳನ್ನು ನಾನು ತೆಗೆದುಕೊಳ್ಳಲು ಸಿದ್ಧ ಎಂಬುದನ್ನು ಶ್ರೇಯಸ್ ತೋರಿಸಿದ್ದಾರೆ. ಯಾವುದೇ ಪಿಚ್‌ನಲ್ಲಿ 350 ರನ್ ಗಳಿಸುವುದು ಉತ್ತಮ ಸ್ಕೋರ್ ಆಗಿದೆ ಮತ್ತು ನಮ್ಮನ್ನು ಆ ಸ್ಕೋರ್‌ಗೆ ತೆಗೆಕೊಂಡು ಹೋದ ಬ್ಯಾಟಿಂಗ್ ವಿಭಾಗಕ್ಕೆ ಆ ಕೊಡುಗೆ ಸಲ್ಲಬೇಕು ಎಂದರು.

    ಇನ್ನು ಎಲ್ಲ ಪರಿಸ್ಥಿತಿಯಲ್ಲಿ ಬೌಲರ್​ಗಳು ಉತ್ತಮ ನಿರ್ವಹಣೆ ತೋರುತ್ತಿರುವುದು ತುಂಬಾ ಸಮಾಧಾನಕರವಾಗಿದೆ ಎಂದು ರೋಹಿತ್​ ಶರ್ಮ ಹೇಳಿದರು.

    ಪಂದ್ಯದ ವಿಚಾರಕ್ಕೆ ಬರುವುದಾದರೆ, ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ 302 ರನ್​ಗಳ ಭರ್ಜರಿ ಜಯಗಳಿಸುವ ಮೂಲಕ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ಶುಭಮನ್​ ಗಿಲ್ (92 ರನ್, 92 ಎಸೆತ, 11 ಬೌಂಡರಿ, 2 ಸಿಕ್ಸರ್), ವಿರಾಟ್​ ಕೊಹ್ಲಿ (88 ರನ್, 94 ಎಸೆತ, 11 ಬೌಂಡರಿ), ಶ್ರೇಯಸ್ ಅಯ್ಯರ್ (82 ರನ್, 56 ಎಸೆತ, 3 ಬೌಂಡರಿ, 6 ಸಿಕ್ಸರ್) ಬಿರುಸಿನ ಆಟದ ಫಲವಾಗಿ 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್​ ಪೇರಿಸಿತ್ತು.

    ಬೃಹತ್​ ಮೊತ್ತದ ಗುರಿ ಬೆನ್ನತ್ತಿದ್ದ ಶ್ರೀಲಂಕಾ ತಂಡವನ್ನು ಇನ್ನಿಲ್ಲದಂತೆ ಕಾಡಿದ ಭಾರತದ ಬೌಲರ್​ಗಳು ಎದುರಾಳಿ ತಂಡವನ್ನು 19.4 ಓವರ್​ಗಳಲ್ಲಿ 55 ರನ್​​ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ಪರ ಜಸ್ಪ್ರೀತ್​ ಬುಮ್ರಾ (5-1-8-1), ಮೊಹಮ್ಮದ್​ ಶಮಿ (5-1-18-5), ಮೊಹಮ್ಮದ್ ಸಿರಾಜ್ (7-2-16-3), ಕುಲ್​ದೀಪ್ ಯಾದವ್(2-0-3-0), ರವೀಂದ್ರ ಜಡೇಜಾ (0.4-0-4-1) ಎದುರಾಳಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. (ಏಜೆನ್ಸೀಸ್​)

    ವಾಯು ಮಾಲಿನ್ಯ,ಶೀತಕ್ಕೆ ದೆಹಲಿ ತತ್ತರ: ಶಾಲೆಗಳಿಗೆ ರಜೆ, ಕಾಮಗಾರಿಗಳು ಸ್ಥಗಿತ

    ಭೂಮಿಯ ಒಳಗಿದೆ ಥಿಯಾ ಗ್ರಹದ ಅವಶೇಷಗಳು! ಇದರ ಘರ್ಷಣೆಯಿಂದಲೇ ಚಂದ್ರನ ರಚನೆ

    ಬೌಲರ್​ಗಳ ಮಿಂಚಿನ ದಾಳಿಗೆ ತತ್ತರಿಸಿದ ಸಿಂಹಳಿಯರು; ಭಾರತಕ್ಕೆ ಶ್ರೀಲಂಕಾ ವಿರುದ್ಧ 302 ರನ್​ಗಳ ಭರ್ಜರಿ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts