More

    ಕ್ರಿಕೆಟ್​ ಗಾಡ್ ಮತ್ತು ಡಾಗ್​: ಈ ನಾಯಿ ಕೀಪಿಂಗೂ ಮಾಡುತ್ತೆ, ಫೀಲ್ಡಿಂಗೂ ಮಾಡುತ್ತೆ; ಇದಕ್ಕೆ ಏನೆನ್ನೋಣ ಹೇಳಿ ಎಂದು ಕೇಳಿದ ಸಚಿನ್​

    ಮುಂಬೈ: ಎಲ್ಲಿಯ ಕ್ರಿಕೆಟ್ ದೇವರು​, ಎಲ್ಲಿಯ ಒಂದು ಸಾಮಾನ್ಯ​ ನಾಯಿ​!
    ಹೌದು.. ಕ್ರಿಕೆಟ್​ ಗಾಡ್ ಎಂದೇ ಕರೆಯಲ್ಪಡುವ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರ ಗಮನವನ್ನು ಒಂದು ನಾಯಿ ಸೆಳೆದಿದೆ. ಆ ಮೂಲಕ ‘ಎವೆರಿ ಡಾಗ್ ಹ್ಯಾಸ್ ಇಟ್ಸ್ ಡೇ’ ಎಂಬ ಆಂಗ್ಲ ಗಾದೆಮಾತು ನಾಯಿಯೊಂದರ ಪಾಲಿಗೆ ಅಕ್ಷರಶಃ ನಿಜವಾಗಿದೆ.

    ಗೆಳೆಯರಿಂದ ಬಂದ ಒಂದು ವಿಡಿಯೋ ಕ್ಲಿಪ್​ ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಸಚಿನ್ ತೆಂಡುಲ್ಕರ್​, ಅದರಲ್ಲಿನ ನಾಯಿಯೊಂದರ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅವರು ಆ ನಾಯಿಯ ಕ್ಯಾಚಿಂಗ್ ಸ್ಕಿಲ್​ಗೆ ಮಾರುಹೋಗಿ, ಆ ಬಗ್ಗೆ ತಮ್ಮ ಫಾಲೋವರ್ಸ್ ಬಳಿ ತಮಗಿನಿಸಿದ್ದನ್ನು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!

    ಈ ವಿಡಿಯೋದಲ್ಲಿ ಇಬ್ಬರು ಮಕ್ಕಳು ಕ್ರಿಕೆಟ್​ ಆಡುತ್ತಿದ್ದು, ಅವರೊಂದಿಗೆ ನಾಯಿ ಕೂಡ ಪಾಲ್ಗೊಂಡಿದ್ದು, ಅದು ಕೀಪರ್ ಜಾಗದಲ್ಲಿ ನಿಂತು ಕೀಪಿಂಗ್ ಮಾಡುತ್ತಿದೆ. ಮಾತ್ರವಲ್ಲ, ಬ್ಯಾಟ್​ ತಪ್ಪಿ ಬಂದ ಚೆಂಡನ್ನು ಚೆನ್ನಾಗಿ ಕ್ಯಾಚ್​ ಹಿಡಿದಿದೆ. ಅಷ್ಟು ಮಾತ್ರವಲ್ಲ, ಬ್ಯಾಟಿಂಗ್ ಮಾಡುತ್ತಿದ್ದು ಬಾಲಕಿ ಹೊಡೆದ ಚೆಂಡನ್ನು ಫೀಲ್ಡರ್ ಥರ ಓಡಿ ಹೋಗಿ ಎತ್ತಿಕೊಂಡು ಕೂಡ ಬಂದಿದೆ.

    ಇದನ್ನೂ ಓದಿ: ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ

    ನಾಯಿಯ ಈ ಕೌಶಲವನ್ನು ಕಂಡು ಮನಸೋತಿರುವ ಸಚಿನ್ ತೆಂಡುಲ್ಕರ್​, ನಾವು ಕ್ರಿಕೆಟ್​ನಲ್ಲಿ ವಿಕೆಟ್​ ಕೀಪರ್ಸ್​, ಫೀಲ್ಡರ್ಸ್​ ಹಾಗೂ ಆಲ್​ ರೌಂಡರ್​ಗಳನ್ನೂ ನೋಡಿದ್ದೇವೆ. ಆದರೆ ಇದಕ್ಕೆ ಏನೆಂದು ಹೆಸರಿಡೋಣ ಎಂದು ನಾಯಿಯ ಕುರಿತು ಬೆರಗನ್ನು ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಮದ್ವೆ ಆದ್ಮೇಲೆ ಫಸ್ಟ್​ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್​

    ವಿಶೇಷವೆಂದರೆ ಹೀಗೆ ನಾಯಿಯೊಂದು ಕ್ರಿಕೆಟ್​​ನಲ್ಲಿ ಪಾಲ್ಗೊಂಡಿರುವ ಈ ಸಣ್ಣ ವಿಡಿಯೋ ಕ್ಲಿಪ್​ ಅವರು ಪೋಸ್ಟ್ ಮಾಡಿ ಇನ್ನೂ 24 ಗಂಟೆಗಳಾಗಿಲ್ಲ, ಅಷ್ಟರಲ್ಲೇ 66 ಸಾವಿರಕ್ಕೂ ಅಧಿಕ ಮಂದಿ ಇದನ್ನು ಲೈಕ್​ ಮಾಡಿದ್ದಾರೆ, ಒಟ್ಟು 9 ಸಾವಿರಕ್ಕೂ ಅಧಿಕ ಮಂದಿ ರಿ-ಟ್ವೀಟ್​ ಮಾಡಿದ್ದಾರೆ. ಅಷ್ಟೇ ಅಲ್ಲ, ಈಗಾಗಲೇ 8.3 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಇದು ಕಂಡಿದೆ.

    ಗಂಡ-ಹೆಂಡಿರ ಬೇರೆ ಮಾಡಿ ತಾನು ಅಕ್ರಮ ಸಂಬಂಧ ಹೊಂದಿದ ಪೊಲೀಸ್; ನೇಣು ಹಾಕಿದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆ, ಕಾನ್​ಸ್ಟೆಬಲ್ ಪರಾರಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts