More

    VIDEO ] ಕೋವಿಡ್ ವಿರುದ್ಧ ಜಾಗೃತಿ ಮೂಡಿಸಲು ಈತ ಮಾಡಿದ ಸೃಜನಶೀಲ ತಂತ್ರ ಇದು..

    ಕಂಚಪರಾ (ಪಶ್ಚಿಮ ಬಂಗಾಳ): ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ಭಾರಿ ವೈರಲ್ ಆಗುತ್ತಿದೆ.
    ಇದರಲ್ಲಿ ಪಶ್ಚಿಮ ಬಂಗಾಳದ ಕಾಂಚಪರಾ ಮೂಲದ ಗೌರ್ ನಾಥ್ ಎಂಬಾತ ಎಲ್ಇಡಿ ಮಾಸ್ಕ್ ಧರಿಸಿರುವುದು ಕಂಡುಬರುತ್ತದೆ. ಇದನ್ನು ಬಾಂಗ್ಲಾದೇಶದ ಬಿವಾಸ್ ದಾಸ್ ಎಂಬ ಬಳಕೆದಾರರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ರಾತ್ರಿ ಮಾಸ್ಕ್’ ಎಂದು ಸಂಕ್ಷಿಪ್ತವಾಗಿ ಈ ಪೋಸ್ಟ್​ಗೆ ಶೀರ್ಷಿಕೆ ಬರೆದಿದ್ದಾರೆ ದಾಸ್.

    রাতের মাস্ক! 🙄

    Posted by Bivas Das on Wednesday, July 15, 2020

    ಇದನ್ನೂ ಓದಿ: ‘ಜೊತೆ ಜೊತೆಯಲಿ’ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ ಮಣಿಪಾಲ್ ಆಸ್ಪತ್ರೆಗೆ ದಾಖಲು

    ಕೋವಿಡ್ -19ನ ಈ ವಿಷಮ ಸ್ಥಿತಿಯಲ್ಲಿ ಜಗತ್ತಿನಾದ್ಯಂತ ಪ್ರತಿಯೊಬ್ಬರೂ ನಿಯಮಾವಳಿಗಳನ್ನು ಅನುಸರಿಸಲು ಸಜ್ಜಾಗುತ್ತಿದ್ದಾರೆ. ಇದು ನಮ್ಮೆಲ್ಲರ ಜೀವನದಲ್ಲಿ ತೀವ್ರ ಬದಲಾವಣೆಯನ್ನು ತಂದಿದೆ.
    ಸಧ್ಯಕ್ಕಂತೂ ಕರೊನಾವೈರಸ್ ಹತೋಟಿಗೆ ಸಿಗದೆ ದಿನೆ ದಿನೆ ಸಾವು ಹಾಗೂ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ.
    ಇಲ್ಲಿಯವರೆಗೂ ಪರಿಣಾಮಕಾರಿ ಔಷಧಿ ಲಭ್ಯವಿರುವುದರಿಂದ ಕೆಲವು ದಿನ, ತಿಂಗಳು ಅಥವಾ ವರ್ಷದವರೆಗೆ ಈ ರೋಗದೊಂದಿಗೇ ಹೊಂದಿಕೊಂಡು ಹೋಗಬೇಕಾದ ಅನಿವಾರ್ಯತೆ ಬರಬಹುದೇನೋ. ಈ ನಿಟ್ಟಿನಲ್ಲಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವಿಕೆಯಂತಹ ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸುವ ಮೂಲಕ ನಮ್ಮನ್ನು ನಾವು ರಕ್ಷಿಸಿಕೊಂಡು ಜೀವನವನ್ನು ಮುಂದುವರಿಸಬಹುದು.

    ಇದನ್ನೂ ಓದಿ:  ನಿರ್ಭಯವಾಗಿ ನಡೆಯುತ್ತಿದೆ ಅಭಯಾರಣ್ಯಗಳಲ್ಲಿ ಕಳ್ಳಬೇಟೆ: ಲಾಕ್​ಡೌನ್ ವರದಾನವಾಯಿತೆ?

    ಮಾಸ್ಕ್ ಧರಿಸುವಿಕೆ ಹಾಗೂ ಸಾಮಾಜಿಕ ಅಂತರ ಪಾಲನೆಯ ಕುರಿತು ಜನರಿಗೆ ತಿಳಿವಳಿಕೆ ಮೂಡಿಸಲು ಅನೇಕ ಜಾಗೃತಿ ಅಭಿಯಾನಗಳು ನಡೆದಿವೆ. ಕೆಲವರು ಅದನ್ನು ಸ್ವತಃ ಅಳವಡಿಸಿಕೊಂಡಿದ್ದಾರೆ.
    ಈ ವಿಡಿಯೋದಲ್ಲಿ ಮಾಸ್ಕ್​​ಧಾರಿಯ ನಾವೀನ್ಯತೆ ಮತ್ತು ಸೃಜನಶೀಲತೆ ಸ್ಪಷ್ಟವಾಗಿ ಕಂಡುಬಂದಿದೆ.
    ಬಣ್ಣವನ್ನು ಬದಲಾಯಿಸುವ ಸಣ್ಣ ಎಲ್ಇಡಿ ದೀಪಗಳಿಂದ ಕೂಡಿದ ಮಾಸ್ಕ್ ಧರಿಸುವ ಮೂಲಕ ಆತ ಎಲ್ಲ ಸಮಯದಲ್ಲೂ ಮಾಸ್ಕ್​​ ಧರಿಸುವುದು ಅವಶ್ಯಕವೆಂದು ತನ್ನ ಸುತ್ತಲಿನ ಜನರಿಗೆ ತಿಳಿಸಲು ಅವನು ಪ್ರಯತ್ನಿಸಿದ್ದಾನೆ.

    ಇದನ್ನೂ ಓದಿ: ವೈದ್ಯರೂ ಇವರೇ, ಟೀಚರೂ ಇವರೇ… ಬಂದವರ ಗತಿ ದೇವರಿಗೇ ಪ್ರೀತಿ!

    “ಜನರು ಈ ಮಾಸ್ಕ್ ನೋಡಿದಾಗ, ಮಾಸ್ಕ್ ಧರಿಸುವುದು ಅತ್ಯವಶ್ಯ ಎಂದು ಅರ್ಥಮಾಡಿಕೊಳ್ಳುತ್ತಾರೆ. ಇದನ್ನು ನೋಡಿದ ನಂತರ, ಮಾಸ್ಕ್ ಧರಿಸದವರೂ ಸಹ ಧರಿಸಲು ಪ್ರಾರಂಭಿಸುತ್ತಾರೆ, ಎಂದು ಆತ ವೀಡಿಯೊದಲ್ಲಿ ಬಂಗಾಳಿ ಭಾಷೆಯಲ್ಲಿ ಹೇಳಿದ್ದಾರೆ.
    ವಾಸ್ತವವಾಗಿ, ಕೋವಿಡ್ ಬಿಕ್ಕಟ್ಟಿನ ಈ ಸಮಯದಲ್ಲಿ ಮಾಸ್ಕ್ ಧರಿಸುವ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಇದು ಒಂದು ನವೀನ ತಂತ್ರವಾಗಿದೆ.

    ಚೀನಾಕ್ಕೆ ನೇರ ಎಚ್ಚರಿಕೆ; ಭಾರತದೊಂದಿಗೆ ನೌಕಾಪಡೆ ಸಮರಾಭ್ಯಾಸಕ್ಕೆ ಬಂದ ಯುಎಸ್​ಎಸ್​ ನಿಮಿಟ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts