More

    ಕೇರಳದಲ್ಲೀಗ ಎಲ್​ಡಿಎಫ್​ ವರ್ಸಸ್ ಬಿಜೆಪಿಯಂತೆ!

    ತಿರುವನಂತಪುರ: ಕೇರಳದ ರಾಜಕೀಯದಲ್ಲಿ ಎಡರಂಗ (ಎಲ್​ಡಿಫ್​) ವರ್ಸಸ್ ಐಕ್ಯರಂಗ (ಯುಡಿಎಫ್​) ಒಂದಕ್ಕೊಂದು ಪರ್ಯಾಯ. ಐದು ವರ್ಷಕ್ಕೊಮ್ಮೆ ಆಡಳಿತ ಚುಕ್ಕಾಣಿಯೂ ಪರ್ಯಾಯದಂತೆ ಬದಲಾಗುವುದು ಕೂಡ ವಾಡಿಕೆ. ಆದರೆ, ಕಳೆದ 10 ವರ್ಷಗಳ ಅವಧಿಯಲ್ಲಿ ಕೇರಳದ ರಾಜಕೀಯದಲ್ಲೂ ಚಿತ್ರಣ ನಿಧಾನವಾಗಿ ಬದಲಾಗತೊಡಗಿದೆ. ಕಾಂಗ್ರೆಸ್​ ಪ್ರಭಾವ ಕುಗ್ಗತೊಡಗಿದ್ದು, ಐಕ್ಯರಂಗಕ್ಕೆ ಹೊಡೆತ ನೀಡಿದೆ. ಎಡರಂಗ, ಐಕ್ಯರಂಗಗಳ ನಡುವೆ ಬಿಜೆಪಿ ಪ್ರಾಬಲ್ಯ ಬೆಳೆಸಿಕೊಳ್ಳತೊಡಗಿದೆ. ಈ ಸಲದ ಪಂಚಾಯತ್​ ಚುನಾವಣೆ ವೇಳೆ ಅದು ರಾಜಕೀಯ ನಾಯಕರ ಮಾತುಗಳಲ್ಲೂ ವ್ಯಕ್ತವಾಗಿರುವುದು ವಿಶೇಷ

    ಯುಡಿಎಫ್​ ಗೆ ಬದಲಾಗಿ ಬಿಜೆಪಿಯನ್ನೇ ವಿಪಕ್ಷವನ್ನಾಗಿ ಬಿಂಬಿಸಲು ಸಿಪಿಐ(ಎಂ) ಪ್ರಯತ್ನಿಸುತ್ತಿದೆ
    ರಮೇಶ್​ ಚೆನ್ನಿತ್ತಲ, ಕಾಂಗ್ರೆಸ್​ ನಾಯಕ

    ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಪಕ್ಷ ಹಸ್ತಕ್ಷೇಪ ಮಾಡಿಲ್ಲ.
    – ಪಿ.ಕೆ.ಕುಂಞಆಲಿಕುಟ್ಟಿ, ಐಯುಎಂಎಲ್​ ನಾಯಕ

    ಫೇಸ್​ಬುಕ್ ಪೋಸ್ಟ್ ಒಂದರಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬರೆದುಕೊಂಡಿರುವುದಿಷ್ಟು – ಕೇರಳದ ರಾಜಕಾರಣದಲ್ಲಿ ಒಂದು ವಿಚಿತ್ರ ಅನುಭವವಾಗುತ್ತಿದೆ. ಯಾವ ಪಕ್ಷ ಮೈತ್ರಿಕೂಟವನ್ನು ಮುನ್ನಡೆಸಬೇಕಾಗಿತ್ತೋ, ನಿರ್ಣಯ ತೆಗೆದುಕೊಳ್ಳಬೇಕಾಗಿತ್ತೋ ಅದನ್ನು ಇನ್ನೊಂದು ಪಕ್ಷ ತೆಗೆದುಕೊಳ್ಳುತ್ತಿದೆ. ಇಂತಹ ಅಸಹಜವಾದ ಮತ್ತು ಪ್ರಜಾಪ್ರಭುತ್ವ ವಿರೋಧಿ ವಿಚಾರಗಳೆಲ್ಲವೂ ಐಕ್ಯರಂಗದಲ್ಲಾಗುತ್ತಿದೆ.

    ಇದನ್ನೂ ಓದಿ: ಲವ್​ ಫೇಲ್ಯೂರ್​ಗೆ​ ₹5, ಹೊಸ ಲವ್​ಗೆ ₹10, ಲವರ್​ ಬಿಟ್ಟು ಹೋದ್ರೆ ₹15, ಇಷ್ಟದ ಲವರ್​ಗಾಗಿ​ ₹49

    ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದ ನಂತರದ ಬೆಳವಣಿಗೆ ಗಮನಿಸಿದರೆ ಐಕ್ಯರಂಗದ ನಾಯಕತ್ವವನ್ನು ಮುಸ್ಲಿಂ ಲೀಗ್ ವಹಿಸಿಕೊಳ್ಳುವಂತೆ ತೋರುತ್ತಿದೆ. ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳಲ್ಲೂ ಲೀಗ್ ಪ್ರತಿಕ್ರಿಯೆ ನೀಡುತ್ತಿದ್ದು, ಕಾಂಗ್ರೆಸ್ ಪಕ್ಷದ ನಾಯಕತ್ವ ಯಾರು ವಹಿಸವಬೇಕು ಎಂಬುದನ್ನೂ ಅದು ನಿರ್ಣಯಿಸುತ್ತಿದೆಯೇ? ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷ ಕೋಮುವಾದಿ ಪಕ್ಷಗಳಿಂದ ಅಂತರ ಕಾಯ್ದುಕೊಂಡಿದೆ. ಕೇರಳದಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ಕೋಮುವಾದಿ ಪಕ್ಷಗಳೊಂದಿಗೆ ಮೈತ್ರಿಯನ್ನು ಮಾಡಿಕೊಂಡಿದೆ. ಇದಕ್ಕೆ ಐಯುಂಎಲ್​ಎಲ್​ ಕಾರಣವಾಗಿದ್ದು, ಅದು ಕಾಂಗ್ರೆಸ್ ಪಕ್ಷವನ್ನು ಕೇರಳದಲ್ಲಿ ಮುನ್ನಡೆಸುತ್ತಿದೆ.

    ಇದನ್ನೂ ಓದಿ: ಗಂಡನ ರಾಸಲೀಲೆ ವೃತ್ತಾಂತ ಬಿಚ್ಚಿಟ್ಟ ಹೆಂಡತಿ! ಈತನ ಚಾನ್ಸ್​ ಆಸೆಗೆ ಬಲಿಯಾದ್ರೆ ಬದುಕೇ ನರಕ…

    ಎಡರಂಗಕ್ಕೆ ಎದುರಾಳಿ ಬಿಜೆಪಿ? : ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಲ್​ಡಿಎಫ್​ 10,114 ಸ್ಥಾನ, ಯುಡಿಎರ್ಫ್ 8.022 ಸ್ಥಾನ, ಬಿಜೆಪಿ 1,600 ಸ್ಥಾನ ಗಳಿಸಿವೆ. ಆದಾಗ್ಯೂ, ಎಲ್​ಡಿಎಫ್​ಗೆ ವಿರೋಧ ಪಕ್ಷವಾಗಿ ಬಿಜೆಪಿ ಕಾಣುತ್ತಿದೆಯೇ ಹೊರತು, ಯುಡಿಎಫ್​ ಅಲ್ಲ. ಎಡರಂಗದವರು ಬಿಜೆಪಿಯನ್ನು ಪ್ರತಿಪಕ್ಷವಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಸರಿಯಾದ ನಡೆಯಲ್ಲ. ಅವರ ಅವನತಿಯ ನಡೆ ಎಂದು ಕಾಂಗ್ರೆಸ್ ನಾಯ ರಮೇಶ್​ ಚೆನ್ನಿತ್ತಲ ವಿಶ್ಲೇಷಿಸಿದ್ದಾರೆ.

    ರೈತ ಪ್ರತಿಭಟನೆ ಹಿಂದೆ ದಲ್ಲಾಳಿಗಳ ಷಡ್ಯಂತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts