More

    ಹೆರಿಗೆಗೆಂದು ದಾಖಲಾದ್ರು; ಆಸ್ಪತ್ರೆ ಬಿಲ್​ ಕಟ್ಟೋಕೆ ಗಂಡು ಶಿಶುವನ್ನೇ ಮಾರಿದರು…!

    ಆಗ್ರಾ: ಹೆರಿಗೆಗೆಂದು ದಾಖಲಾಗಿ ಗಂಡು ಮಗುವಿಗೆ ಜನ್ಮ ನೀಡಿದಳಾ ತಾಯಿ…, ಆದರೆ, ಆಸ್ಪತ್ರೆಯ ಬಿಲ್​ ಕಟ್ಟೋಕೆ ಹಣವಿಲ್ಲದೇ, ಆಗಷ್ಟೇ ಜನಿಸಿದ ಗಂಡುಮಗುವನ್ನೇ ಮಾರಿ ಹಣ ಪಾವತಿಸಿದ್ದಾರೆ ದಂಪತಿ.

    ಉತ್ತರಪ್ರದೇಶ ಆಗ್ರಾದ ದಲಿತ ದಂಪತಿಯ ನೋವಿನ ಕತೆಯಿದು. ಇಲ್ಲಿನ ಆಸ್ಪತ್ರೆಯೊಂದರಲ್ಲಿ ಬಬಿತಾ ಎಂಬಾಕೆ ಆಗಸ್ಟ್​ 24ರಂದು ಸಿಸೇರಿಯನ್​ ಮೂಲಕ ಗಂಡುವಿಗೆ ಜನ್ಮ ನೀಡಿದ್ದರು. ಶಸ್ತ್ರಚಿಕಿತ್ಸೆಗಾಗಿ 30 ಸಾವಿರ ರೂ. ಹಾಗೂ ಔಷಧ ವೆಚ್ಚವಾಗಿ 5,000 ರೂ. ಪಾವತಿಸಬೇಕಿತ್ತು. ಆದರೆ, ಈಕೆಯ ಪತಿ ಶಿವ್​ಚರಣ್​ ರಿಕ್ಷಾ ಚಲಾಯಿಸುವ ಕೆಲಸ ಮಾಡುತ್ತಾರೆ. ಆಸ್ಪತ್ರೆಯ ಬಿಲ್​ ಪಾವತಿಸಲು ಸಾಧ್ಯವಾಗಿಲ್ಲ. ಹೀಗಾಗಿ ಮಗುವನ್ನು ಒಂದು ಲಕ್ಷ ರೂ. ಮಾರಿದ್ದಾರೆ.

    ಇದನ್ನೂ ಓದಿ; 20 ಲಕ್ಷ ಕರೊನಾ ಕೇಸ್​ಗಳು ಒಂದೇ ತಿಂಗಳಲ್ಲಿ…! 28 ಸಾವಿರ ಸಾವು; ಭಾರತದ್ದು ಜಗತ್ತಿನಲ್ಲೇ ದಾಖಲೆ….! 

    ಎಲ್ಲ ದಾಖಲೆಗಳಿಗೂ ಸಹಿ ಮಾಡಿಸಿಕೊಂಡರು: ದಂಪತಿ ಅನಕ್ಷರಸ್ಥರಾಗಿದ್ದು, ಆಸ್ಪತ್ರೆಯವರು ಹೇಳಿದ ಎಲ್ ದಾಖಲೆಗಳ ಮೇಲೆ ಹೆಬ್ಬಟ್ಟು ಸಹಿ ಹಾಕಿದ್ದಾರೆ. ಪ್ರತಿಯಾಗಿ ದಂಪತಿಗೆ ಒಂದು ಲಕ್ಷ ರೂ. ಚೆಕ್​ ನೀಡಿ ಕಳುಹಿಸಲಾಗಿದೆ. ದಂಪತಿಗೆ ಡಿಸ್ಚಾರ್ಜ್​ ದಾಖಲೆಗಳನ್ನು ನೀಡಿಲ್ಲ ಎಂದು ದೂರಲಾಗಿದೆ.

    ಗಂಭೀರ ಪ್ರಕರಣವೆಂದ ಜಿಲ್ಲಾಡಳಿತ: ಇದೊಂದು ಗಂಭೀರ ಪ್ರಕರಣವೆಂದು ತಿಳಿಸಿರುವ ಜಿಲ್ಲಾಡಳಿತ ತನಿಖೆ ನಡೆಸುವುದಾಗಿ ಹೇಳಿದೆ. ಆದರೆ, ಆರೋಪವನ್ನು ನಿರಾಕರಿಸಿರುವ ಆಸ್ಪತ್ರೆಯವರು, ದಂಪತಿ ತಾವಾಗಿಯೇ ಮಗುವನ್ನು ಬಿಟ್ಟುಕೊಟ್ಟಿದ್ದಾರೆ. ದಾಖಲೆಗಳಿಗೂ ಸಹಿ ಮಾಡಿದ್ದಾರೆ ಎನ್ನುತ್ತಾರೆ ಜೆಪಿ ಆಸ್ಪತ್ರೆ ವೈದ್ಯರು.

    ಇದನ್ನೂ ಓದಿ; ಒಂದೇ ಹಾವು, ಒಂದೇ ತಿಂಗಳಲ್ಲಿ ಎಂಟು ಬಾರಿ ಬಾಲಕನಿಗೆ ಕಚ್ಚಿದೆ; ಹಾವಿನ ದ್ವೇಷಕ್ಕೆ ಹೊಸ ವ್ಯಾಖ್ಯಾನವೇ? 

    ಬಾಡಿಗೆ ಮನೆಯಲ್ಲಿ ವಾಸಿಸುವ ದಲಿತ ದಂಪತಿಗೆ ಐವರು ಮಕ್ಕಳಿದ್ದಾರೆ. ಹಿರಿಯ ಮಗ ಶೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಕೋವಿಡ್​ ಸಂಕಷ್ಟದಿಂದಾಗಿ ಕೆಲಸ ಕಳೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ದಂಪತಿಗೆ ಆಯುಷ್ಮಾನ್​ ಭಾರತ್​ ಯೋಜನೆಯ ಸೌಲಭ್ಯವೂ ಸಿಕ್ಕಿಲ್ಲ ಎಂದು ದೂರಲಾಗಿದೆ.

    ವಿಡಿಯೋ: ಬಗ್ಗಿ ಹೋದರೂ ಬೆತ್ತಲು ಬಚ್ಚಿಡಲಾಗಲಿಲ್ಲ….! ಲೈವ್​ನಲ್ಲಿ ಆ್ಯಂಕರ್​ ಪತ್ನಿ ಎಡವಟ್ಟು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts