More

    ಕಿವಿಹಿಡಿದು, ಇನ್ಮುಂದೆ ಹೀಗೆ ಮಾಡಲ್ಲ ಎಂದು ಕಣ್ಣೀರಿಟ್ಟ ಜೋಡಿ; ಇವೆಲ್ಲಾ ಬೇಕೇ? ನೆಟ್ಟಿಗರು ವ್ಯಂಗ್ಯ

    ರಾಜಸ್ಥಾನ: ಕೋಟಾದ ಮುಖ್ಯರಸ್ತೆಯಲ್ಲಿ ತಮ್ಮ ಬೈಕ್ ಮೇಲೆ ತಬ್ಬಿಕೊಂಡು, ಮುತ್ತಿಡುತ್ತಿದ್ದ ಜೋಡಿ, ರಸ್ತೆ ಸಂಚಾರದ ಬಗ್ಗೆ ಅರಿವಿಲ್ಲದಂತೆ ಸಾರ್ವಜನಿಕ ಸ್ಥಳದಲ್ಲಿ ಮಾಡಿದ ಬೈಕ್ ಸವಾರಿಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಈ ವಿಡಿಯೋ ನೋಡಿದ ನೆಟ್ಟಿಗರು ಈ ರೀತಿ ಅಶ್ಲೀಲವಾಗಿ ನಡೆದುಕೊಳ್ಳುವ ನಿಮ್ಮಂಥವರಿಗೆ ನಾಚಿಕೆಯಾಗಬೇಕು ಎಂದು ಛೀಮಾರಿ ಹಾಕಿದ್ದರು. ಇದರ ಬೆನ್ನಲ್ಲೇ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ತೋರಿದ ಜೋಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಇದನ್ನೂ ಓದಿ: ನಾನ್​ ರೆಡಿ ಇದ್ದೇನೆ… ಬ್ರೇಕಪ್​ ಬಗ್ಗೆ ಕೇಳಿದ್ದಕ್ಕೆ ಶ್ರುತಿ ಕೊಟ್ರು ಶಾಕಿಂಗ್​ ಹೇಳಿಕೆ, ದಂಗಾದ್ರೂ ಫ್ಯಾನ್ಸ್​!

    ಪರಸ್ಪರ ಚುಂಬಿಸಿ, ಬೈಕ್ ಮೇಲೆ ಮೈಮರೆತ್ತಿದ್ದ ಜೋಡಿಯ ವೈರಲ್ ದೃಶ್ಯದ ಹಿಂದೆ ಬಿದ್ದ ಪೊಲೀಸರು, ಇಬ್ಬರನ್ನು ಠಾಣೆಗೆ ಕರೆಸಿ, ತಮ್ಮ ತಪ್ಪಿಗೆ ಕ್ಷಮೆಯಾಚಿಸುವಂತೆ ತಿಳಿಸಿದರು. ಪೊಲೀಸರ ಮಾತಿಗೆ ಕಡೆಗೂ ಒಪ್ಪಿದ ಯುವಕ-ಯುವತಿ, ನಮ್ಮ ತಪ್ಪು ನಮಗೆ ಅರಿವಾಗಿದೆ. ಇನ್ನು ಮುಂದೆ ಎಂದಿಗೂ ಇಂತಹ ಘಟನೆಗಳು ನಮ್ಮಿಂದ ಮರುಕಳಿಸುವುದಿಲ್ಲ ಎಂದು ತಮ್ಮ ಕಿವಿಹಿಡಿದು ಕ್ಷಮಿಸಿ ಎಂದು ಮನವಿ ಮಾಡಿದರು.

    ಇಬ್ಬರ ಮನವಿಯನ್ನು ಸ್ವೀಕರಿಸಿದ ಪೊಲೀಸರು, ತದನಂತರ ವಿಡಿಯೋ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಅಪಾಯಕಾರಿ ಮತ್ತು ನಿಷೇಧಿಸಲಾದ ಕೃತ್ಯಗಳನ್ನು ಮಾಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಸದ್ಯ ಈ ವಿಡಿಯೋ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ,(ಏಜೆನ್ಸೀಸ್).

    ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

    ಇವರಿಬ್ಬರಿಲ್ಲ ಅಂದ್ರೆ IPL​ಗೆ ಕಳೆಯೇ ಇಲ್ಲ! ಮುಂದೆ ಯಾರೂ ಹೀಗೆ ಹುಚ್ಚೆದ್ದು ನೋಡೋದಿಲ್ಲ: ನವಜೋತ್ ಸಿಂಗ್ ಸಿಧು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts