More

    ಸರ್ಕಾರದ ಆದೇಶ ಪಾಲಿಸದೆ ಮೊಂಡಾಟ ಮಾಡುವ ಶಾಲೆಗಳ ವಿರುದ್ಧ ಕ್ರಮದ ಎಚ್ಚರಿಕೆ: ಮಕ್ಕಳ ಹಿತಕ್ಕಿಂತ ಶಾಲೆಯ ಪ್ರತಿಷ್ಠೆ ಮುಖ್ಯವೇ?- ಶಿಕ್ಷಣ ಸಚಿವರ ಪ್ರಶ್ನೆ

    ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ವೈರಸ್​ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪ್ರಿಕೆಜಿ, ಎಲ್​ಕೆಜಿ, ಯುಕೆಜಿ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಗೆ ರಜೆ ಘೋಷಣೆ ಮಾಡಿ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಅವರು ಆದೇಶ ನೀಡಿದ್ದಾರೆ.

    ಆದರೆ ಕೆಲವು ಖಾಸಗಿ ಶಾಲೆಗಳು ಈ ಆದೇಶವನ್ನು ಪಾಲಿಸದೆ ಮಕ್ಕಳಿಗೆ ತರಗತಿ ನಡೆಸುತ್ತಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಇಂತಹ ಶಾಲೆಗಳು ಮತ್ತು ಶಿಕ್ಷಕರಿಗೆ ಸುರೇಶ್​ ಕುಮಾರ್ ಅವರು ಖಡಕ್​ ಎಚ್ಚರಿಕೆ ನೀಡಿದ್ದಾರೆ. ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿರುವ ಸುರೇಶ್​ಕುಮಾರ್​, ಮುನ್ನೆಚ್ಚರಿಕೆ ಕ್ರಮವಾಗಿ ಪ್ರಿಕೆಜಿಯಿಂದ 5ನೇ ತರಗತಿವರೆಗಿನ ಮಕ್ಕಳಿಗೆ ರಜೆ ಘೋಷಣೆ ಮಾಡಿದ್ದೇವೆ. ಇದನ್ನು ಪಾಲಿಸುವುದು ಪ್ರತಿ ಶಾಲೆಯ ಕರ್ತವ್ಯ. ಆದರೆ ಕೆಲವು ಖಾಸಗಿ ಶಾಲೆಗಳು ಸರ್ಕಾರದ ಆದೇಶಕ್ಕೆ ಗೌರವ ಕೊಡದೆ ತಮ್ಮದೆ ಬೇರೆ ರಾಜ್ಯ ಎಂದು ತಿಳಿದು ವ್ಯತಿರಿಕ್ತವಾಗಿ ವರ್ತಿಸುತ್ತಿರುವುದು ತಿಳಿದುಬಂದಿದೆ. ಅಂತಹ ಶಾಲೆಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದಿದ್ದಾರೆ.

    ಸರ್ಕಾರದ ಆದೇಶ ಪಾಲಿಸದ ಶಾಲೆಗಳು ಅದೆಷ್ಟೇ ಪ್ರಭಾವಶಾಲಿಯಾಗಿದ್ದರೂ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಎಳೆ ಮಕ್ಕಳ ಹಿತದೃಷ್ಟಿಯಿಂದ ಎಂಬುದನ್ನು ಮನಗಾಣಬೇಕು. ಅದು ಬಿಟ್ಟು ಆದೇಶ ಪಾಲನೆ ಮಾಡದೆ ಇರುವುದೇ ನಮ್ಮ ಪ್ರತಿಷ್ಠೆ ಎಂದುಕೊಂಡಿರುವ ಎಲ್ಲ ಶಾಲೆಗಳಿಗೂ ಒಂದು ಕಿವಿಮಾತು..ಮಕ್ಕಳ ಹಿತಕ್ಕಿಂತ ನಿಮ್ಮ ಪ್ರತಿಷ್ಠೆ ಮುಖ್ಯವಲ್ಲ ಎಂದು ಖಡಕ್​ ಪೋಸ್ಟ್ ಹಾಕಿದ್ದಾರೆ.

    ಸರ್ಕಾರದ ಆದೇಶ ಪಾಲಿಸದೆ ಮೊಂಡಾಟ ಮಾಡುವ ಶಾಲೆಗಳ ವಿರುದ್ಧ ಕ್ರಮದ ಎಚ್ಚರಿಕೆ: ಮಕ್ಕಳ ಹಿತಕ್ಕಿಂತ ಶಾಲೆಯ ಪ್ರತಿಷ್ಠೆ ಮುಖ್ಯವೇ?- ಶಿಕ್ಷಣ ಸಚಿವರ ಪ್ರಶ್ನೆ

    ಕೌನ್ಸೆಲಿಂಗ್ ಕಡ್ಡಾಯ ಬಳಿಕವೂ ಅವಕಾಶ, ಶಿಕ್ಷಕರ ವರ್ಗ ನಿಯಮ ಸಡಿಲ

    ವಿಜಯವಾಣಿ ಮನೋಲ್ಲಾಸ: ಗುಣ ಗ್ರಹಿಸೋಣ ದೋಷಗಳನ್ನಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts