More

    ಕರೊನಾ ಸಾವು ಆರು ಸಾವಿರ; ಭಾರತದಲ್ಲಿ 109ಕ್ಕೆ ಏರಿದ ಸೋಂಕಿತರ ಸಂಖ್ಯೆ

    ವಿಶ್ವದಾದ್ಯಂತ ತಾಂಡವವಾಡುತ್ತಿರುವ ಕರೊನಾ ವೈರಸ್ ಭಾರತದಲ್ಲಿ ಮತ್ತೆ 23 ಜನರಲ್ಲಿ ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 109ಕ್ಕೆ ಏರಿದೆ. ಇದರ ಜತೆಗೆ ವಿಶ್ವದಾದ್ಯಂತ ಕರೊನಾದಿಂದ ಮೃತಪಟ್ಟವರ ಸಂಖ್ಯೆ ಬರೋಬ್ಬರಿ 6 ಸಾವಿರ ದಾಟಿದ್ದು, 1.60 ಲಕ್ಷ ಜನರಲ್ಲಿ ಸೋಂಕು ದೃಢಪಟ್ಟಿದೆ.

    ಮಹಾರಾಷ್ಟ್ರದಲ್ಲಿ 14 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಅತಿ ಹೆಚ್ಚು ಅಂದರೆ 32 ಪ್ರಕರಣಗಳು ಮಹಾರಾಷ್ಟ್ರದಲ್ಲಿ ವರದಿಯಾಗಿದೆ. ಈ ಹಿನ್ನೆಲೆ ಮುಂಬೈನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕೇರಳದಲ್ಲಿ 14 ಕರೊನಾ ಪೀಡಿತರು ಪತ್ತೆಯಾಗಿದ್ದು, ಉತ್ತರಪ್ರದೇಶದಲ್ಲಿ 11, ಹರಿಯಾಣ 14 ವಿದೇಶಿ ಪ್ರಜೆಗಳಲ್ಲಿ ಮಾರಕ ಸೋಂಕು ಕಾಣಿಸಿಕೊಂಡಿದೆ. ದೇಶಾದ್ಯಂತ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಲ್ಲಿ 11 ಜನರು ಗುಣಮುಖರಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

    ದೇಶದಲ್ಲಿ ಬಹುತೇಕ ಪ್ರಮುಖ ನಗರಗಳು ಸ್ತಬ್ಧವಾಗಿದ್ದು, ಶಾಲೆ-ಕಾಲೇಜು, ಚಿತ್ರಮಂದಿರ, ಮಾಲ್​ಗಳನ್ನು ಮುಚ್ಚಲಾಗಿದೆ. ಅನೇಕ ಕಂಪನಿಗಳು ಉದ್ಯೋಗಿಗಳು ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಆದೇಶಿಸಿವೆ. ಇಟಲಿಯಲ್ಲಿ ಸಿಲುಕಿದ್ದ 211 ವಿದ್ಯಾರ್ಥಿಗಳು ಸೇರಿ ಒಟ್ಟು 220 ಜನರನ್ನು ರಕ್ಷಿಸಿ ಭಾರತಕ್ಕೆ ಭಾನುವಾರ ಕರೆತರಲಾಗಿದೆ. ಜತೆಗೆ ಇರಾನ್​ನಲ್ಲಿ ಸಿಲುಕಿದ್ದ 234 ಜನರನ್ನೂ ಭಾರತಕ್ಕೆ ಕರೆತರಲಾಗಿದೆ. ಎಲ್ಲರನ್ನೂ ಐಟಿಬಿಪಿ ಶಿಬಿರಗಳಲ್ಲಿ ಇರಿಸಿ 14 ದಿನಗಳ ಕಾಲ ನಿಗಾವಹಿಸಲಾಗುತ್ತದೆ.

    ಪರೀಕ್ಷೆ ಉಚಿತ

    ಕರೊನಾ ಪತ್ತೆಗೆ ನಡೆಯುವ ಮೊದಲ ಮತ್ತು ಎರಡನೇ ಪರೀಕ್ಷೆಗಳು ಉಚಿತ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕರೊನಾ ಪರೀಕ್ಷೆ ನಡೆಸಲು ನಮ್ಮ ಬಳಿ ಹೆಚ್ಚು ಸಾಮರ್ಥ್ಯವಿದೆ, ಆದರೆ ಪ್ರಸ್ತುತ ಪ್ರತಿದಿನ ಶೇ.10ರಷ್ಟು ಸಾಮರ್ಥ್ಯವನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದ ವಿಶೇಷ ಕಾರ್ಯದರ್ಶಿ ಸಂಜೀವ್ ಕುಮಾರ್ ಹೇಳಿದ್ದಾರೆ.

    ತಿರುಪತಿಯಲ್ಲಿ ವಿಶೇಷ ಪೂಜೆ ಸ್ಥಗಿತ

    ಕರೊನಾ ಭೀತಿ ಹಿನ್ನೆಲೆ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಭಕ್ತರು ಗುಂಪುಗಟ್ಟುವುದನ್ನು ತಡೆಯಲು ವಿಶೇಷ ಪೂಜೆ ಹಾಗೂ ಅಭಿಷೇಕ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲು ಟಿಟಿಡಿ ಮಂಡಳಿ ನಿರ್ಧರಿಸಿದೆ. ಜತೆಗೆ ದರ್ಶನಕ್ಕೆ ಸರತಿಯಲ್ಲಿ ಭಕ್ತರ ನೂಕುನುಗ್ಗಲು ತಡೆಗಟ್ಟಲು ನಿರ್ದಿಷ್ಟ ಸಮಯದ ಸ್ಲಾಟ್​ಗಳ ವ್ಯವಸ್ಥೆ ಮಾಡಲಾಗಿದ್ದು, ಸರದಿಯಲ್ಲಿ ಹೋಗುವವರ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದೆ. ಇದರಿಂದಾಗಿ ಒಬ್ಬರು ಮತ್ತೊಬ್ಬರ ಸಂಪರ್ಕಕ್ಕೆ ಬರುವುದು ಕಡಿಮೆಯಾಗುತ್ತದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ತಿಳಿಸಿದ್ದಾರೆ.

    • ಸಂಸತ್ ಕಾರ್ಯಕಲಾಪ ವೀಕ್ಷಿಸಲು ನೀಡಲಾಗುತ್ತಿದ್ದ ಪಾಸ್​ಗಳನ್ನು ಕರೊನಾ ಭೀತಿ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ.
    • ಕರೊನಾ ವಿರುದ್ಧ ಚೀನಾ ಸರ್ಕಾರದ ಪ್ರಯತ್ನಗಳನ್ನು ಟೀಕಿಸುವ ಭರದಲ್ಲಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್​ರನ್ನು ಅವಹೇಳನ ಮಾಡಿದ್ದ ಮಾಜಿ ಅಧಿಕಾರಿಯೊಬ್ಬ ನಾಪತ್ತೆ.
    • ಎಸಿ ರೈಲುಗಳಲ್ಲಿ ನೀಡಲಾಗುವ ಹೊದಿಕೆ ಮತ್ತು ಕರ್ಟನ್​ಗಳನ್ನು ಕರೊನಾ ಭೀತಿ ಹಿನ್ನೆಲೆ ತಕ್ಷಣ ತಕ್ಷಣ ಹಿಂಪಡೆಯಲಾಗಿದೆ. ಪ್ರಯಾಣಿಕರಿಗೆ ತಮ್ಮದೇ ಹೊದಿಕೆಗಳನ್ನು ತರಲು ಸೂಚಿಸಲಾಗಿದೆ.
    • ಗುಜರಾತ್, ಹರಿಯಾಣ ಮತ್ತು ತಮಿಳುನಾಡಿನಲ್ಲಿ ಇಂದಿನಿಂದ ಎಲ್ಲ ಶಾಲೆ, ಕಾಲೇಜು, ಚಿತ್ರಮಂದಿರ, ಮಾಲ್ ಬಂದ್.
    • ಆಂಧ್ರಪ್ರದೇಶದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ 6 ವಾರ ಮುಂದೂಡಿಕೆ.
    ಉಗ್ರರಿಗೂ ಕರೊನಾ ಭಯ!

    ಕರೊನಾ ವೈರಸ್ ಪೀಡಿತ ರಾಷ್ಟ್ರಗಳಿಗೆ ಪ್ರಯಾಣಿಸಬೇಡಿ ಎಂದು ಐಸಿಸ್ ಉಗ್ರರಿಗೆ ತಿಳಿಸಿದೆ. ಮಧ್ಯರಾತ್ರಿ ಎಚ್ಚರವಾದರೂ ಒಮ್ಮೆ ಕೈತೊಳೆದುಕೊಂಡು ಮಲಗಿ ಎಂದು ಐಸಿಸ್ ತನ್ನ ಪತ್ರಿಕೆ ‘ಅಲ್ ನಬಾ’ದಲ್ಲಿ ಪ್ರಕಟಿಸಿದೆ.

    ಬಾಹ್ಯಾಕಾಶಕ್ಕೆ ಸೋಂಕು ತಲುಪದಂತೆ ನಾಸಾ ಪ್ರಯತ್ನ

    ಮುಂದಿನ ಕೆಲ ದಿನಗಳಲ್ಲಿ ನಾಸಾ ಹಲವು ಬಾಹ್ಯಾಕಾಶ ಯೋಜನೆಗಳನ್ನು ಕೈಗೊಳ್ಳುತ್ತಿದ್ದು, ಈ ವೇಳೆ ಸೋಂಕು ಗಗನಯಾತ್ರಿಗಳ ಮೂಲಕ ಬಾಹ್ಯಾಕಾಶ ನಿಲ್ದಾಣ ತಲುಪುವ ಬಗ್ಗೆ ಆತಂಕಗೊಂಡಿದೆ. ಈ ಹಿನ್ನೆಲೆಯಲ್ಲಿ ಗಗನಯಾತ್ರಿಗಳಿಗೆ ಬಾಹ್ಯ ಸಂಪರ್ಕ ತಪ್ಪಿಸಿ ಅವರ ಆರೋಗ್ಯದ ಮೇಲೆ ತೀವ್ರ ನಿಗಾವಹಿಸಿದೆ.

    ಇಲಿ ಮಾಂಸ ಮಾರಾಟ ನಿಲ್ಲಿಸಿದ್ದಕ್ಕೆ ಗೋಳಿಡುತ್ತಿದೆ ಚೀನಾ; ಭಾರತಕ್ಕೆ ಕರೊನಾ ಚಿಂತೆಯಾದರೆ ಚೀನಾಕ್ಕೆ ಇಲಿ ಚಿಂತೆ

    FACT CHECK| ಆಲ್ಕೋಹಾಲ್​ ಕುಡಿದ್ರೆ ಕರೊನಾ ಬರಲ್ವಾ? ವೋಡ್ಕಾವನ್ನ ಸ್ಯಾನಿಟೈಸರ್​ ಆಗಿ ಬಳಸಬಹುದಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts