More

    ಏಪ್ರಿಲ್​ 30ರವರೆಗೆ ಏರ್​ ಇಂಡಿಯಾ ಬುಕ್ಕಿಂಗ್​ ಇಲ್ಲ: ಸರ್ಕಾರವೇ ನಿರ್ದೇಶನ ನೀಡಿದೆ ಎಂದ ಅಧಿಕಾರಿಗಳು

    ಏಪ್ರಿಲ್​ 14ರ ನಂತರ ಲಾಕ್​ಡೌನ್​ ತೆರವು ಬಗ್ಗೆ ಖಚಿತ ಸುಳಿವು ಸಿಗದ ಹಿನ್ನೆಲೆ ಸರ್ಕಾರಿ ಸ್ವಾಮ್ಯದ ಏರ್​ ಇಂಡಿಯಾ ಏಪ್ರಿಲ್​ 30ರವರೆಗೆ ಬುಕಿಂಗ್​ ಇಲ್ಲ ಎಂದು ಘೋಷಿಸಿದೆ.

    ಖಾಸಗಿ ವಿಮಾನ ಯಾನ ಸಂಸ್ಥೆಗಳು ದೇಶೀಯವಾಗಿ ಏಪ್ರಿಲ್​ 15ರ ನಂತರ ಪ್ರಯಾಣಕ್ಕೆ ಟಿಕೆಟ್​ ಬುಕಿಂಗ್​ಅನ್ನು ಈಗಾಗಲೇ ಆರಂಭಿಸಿವೆ. ಆದರೆ, ವಿಮಾನ ಹಾರಾಟದ ಬಗ್ಗೆ ಅಧಿಕೃತ ಹೇಳಿಕೆಯನ್ನು ಯಾವ ಸಂಸ್ಥೆಗಳು ಬಿಡುಗಡೆ ಮಾಡಿಲ್ಲ. ಇದೆಲ್ಲದರ ನಡುವೆ ಏರ್​ ಇಂಡಿಯಾ ಸಂಸ್ಥೆ ಮಾತ್ರ ಏಪ್ರಿಲ್​ 30ರವರೆಗೆ ಬುಕಿಂಗ್​ ಇಲ್ಲ ಎಂದು ಸ್ಪಷ್ಟಪಡಿಸಿದೆ.

    ಏಪ್ರಿಲ್​ ಅಂತ್ಯದವರೆಗೆ ಟಿಕೆಟ್​ ಬುಕಿಂಗ್​ಗೆ ಅವಕಾಶ ನೀಡಬಾರದದೆಂದು ಸರ್ಕಾರವೇ ನಮಗೆ ನಿರ್ದೇಶನ ನೀಡಿದೆ. ಹೀಗಾಗಿ ಏಪ್ರಿಲ್​ 30ರವರೆಗೆ ಟಿಕೆಟ್​ ಬುಕಿಂಗ್​ ಇಲ್ಲ ಎಂದು ಏರ್​ ಇಂಡಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ಲಾಕ್​ಡೌನ್​ ಅವಧಿ ಇನ್ನಷ್ಟು ದಿನಗಳವರೆಗೆ ಮುಂದುವರಿಯಲಿದೆಯೇ ಎಂಬ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ.

    ಇದಲ್ಲದೇ, ಲಾಕ್​ಡೌನ್​ ಬಳಿಕ ರೈಲು ಪ್ರಯಾಣದ ವೇಳಾಪಟ್ಟಿ ಅಥವಾ ರೈಲು ಸಂಚಾರದ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ರೈಲ್ವೆ ಇಲಾಖೆ ಕೂಡ ಸ್ಪಷ್ಟಪಡಿಸಿದೆ. ಈ ಎಲ್ಲ ಕಾರಣದಿಂದಾಗಿ ಲಾಕ್​ಡೌನ್​ ಅವಧಿ ಬಗ್ಗೆ ಮತ್ತಷ್ಟು ಗೊಂದಲಗಳು ಮೂಡುವಂತಾಗಿದೆ.

    ಆರೋಗ್ಯಯುತ ಜನರು ಯಾವ ಮಾಸ್ಕ್​​ ಬಳಸಬೇಕು? ಸರ್ಕಾರದ ಸಲಹೆ ಪಾಲಿಸುವುದು ನಿಮ್ಮ ಆರೋಗ್ಯಕ್ಕೆ ಒಳಿತು

    ಭಾನುವಾರ ಏಕತೆಯ ದೀಪ ಹಚ್ಚುವಾಗ ಫ್ಯಾನ್​, ಫ್ರಿಜ್​ ಅನ್ನು ಆಫ್​ ಮಾಡಬಾರದು, ಏಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts