More

    ಆರೋಗ್ಯಯುತ ಜನರು ಯಾವ ಮಾಸ್ಕ್​​ ಬಳಸಬೇಕು? ಸರ್ಕಾರದ ಸಲಹೆ ಪಾಲಿಸುವುದು ನಿಮ್ಮ ಆರೋಗ್ಯಕ್ಕೆ ಒಳಿತು

    ನವದೆಹಲಿ: ಆರೋಗ್ಯಯುತ ಜನರು ಹೊರಗಡೆ ಹೋಗುವಾಗ ಒಳ್ಳೆಯ ನೈರ್ಮಲ್ಯಕ್ಕಾಗಿ ಮತ್ತು ಕರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಸಮುದಾಯ ರಕ್ಷಿಸಲು ಗೃಹ ತಯಾರಿಕೆಯ ಫೇಸ್​ ಮಾಸ್ಕ್​ಗಳನ್ನೇ ಬಳಸಿ ಎಂದು ಸರ್ಕಾರ ಶಿಫಾರಸು ಮಾಡಿದೆ.

    ಇಂತಹ ಮಾಸ್ಕ್​ಗಳನ್ನು ತಯಾರಿಸಲು ಈಗಾಗಲೇ ಮಾರ್ಗಸೂಚಿಗಳನ್ನು ನೀಡಲಾಗಿದೆ. ಆದರೆ, ಆರೋಗ್ಯ ಸಿಬ್ಬಂದಿ ಮತ್ತು ಕರೊನಾ ಸೋಂಕಿತರ ಸಂಪರ್ಕದಲ್ಲಿರುವವರು ಮತ್ತು ಕರೊನಾ ಸೋಂಕಿತರು ಗೃಹ ತಯಾರಿಕೆಯ ಮಾಸ್ಕ್​ ಉಪಯೋಗಿಸಲು ಯಾವುದೇ ಶಿಫಾರಸು ಮಾಡಿಲ್ಲವೆಂದು ಸರ್ಕಾರ ಹೇಳಿದೆ.

    ಸೋಂಕಿತರು ಹಾಗೂ ಸೋಂಕಿತರ ಸಂಪರ್ಕದಲ್ಲಿರುವವರು ಮತ್ತು ಆರೋಗ್ಯ ಸಿಬ್ಬಂದಿ ನಿರ್ದಿಷ್ಟಪಡಿಸಿದ ಪ್ರೊಟೆಕ್ಟಿವ್​ ಗೇರ್​ ಬಳಸಲು ಸರ್ಕಾರ ಸಲಹೆ ನೀಡಿದೆ.

    ಗೃಹ ತಯಾರಿಕಾ ಮಾಸ್ಕ್​ ಬಳಸುವವರು ಅವುಗಳನ್ನು ಯಾರೊಂದಿಗೂ ಶೇರ್​ ಮಾಡಿಕೊಳ್ಳುವಂತಿಲ್ಲ. ಎರಡು ಮಾಸ್ಕ್​ಗಳನ್ನು ಬಳಸುವಂಥದ್ದು, ಒಂದನ್ನು ಶುಚಿಗೊಳಿಸುವಾಗ ಮತ್ತೊಂದನ್ನು ಉಪಯೋಗಿಸಬೇಕು. ಸೋಪು ಮತ್ತು ಬಿಸಿ ನೀರಿನಲ್ಲಿ ಶುಚಿಗೊಳಿಸಬೇಕು. ಮಾಸ್ಕ್​ ಬಳಸುವ ಮುನ್ನ ಬಳಕೆದಾರರು ತಮ್ಮ ಕೈಗಳನ್ನು ಖಂಡಿತವಾಗಿಯೂ ಶುಚಿಗೊಳಿಸಬೇಕೆಂದು ಸರ್ಕಾರ ಸಲಹಾ ಸಮಿತಿ ಹೇಳಿದೆ.

    ಸೋಂಕಿತರ ರಕ್ಷಣೆಯಲ್ಲಿ ತೊಡಗಿರುವವರು ಮಾತ್ರ ಮಾಸ್ಕ್​ ಉಪಯೋಗಿಸಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಡಬ್ಲ್ಯುಎಚ್​​ಒ ಪ್ರಕಾರ ಆರೋಗ್ಯಯುತರು ಮಾಸ್ಕ್​ ಬಳಸುವ ಅಗತ್ಯವಿಲ್ಲ. (ಏಜೆನ್ಸೀಸ್​)

    ಕರೊನಾ ಆತಂಕ ಇದ್ದರೂ ನಿಲ್ಲದ ಭಯೋತ್ಪಾದಕ ಚಟುವಟಿಕೆ; ಇಂದು ಇಬ್ಬರು ಉಗ್ರರನ್ನು ಕೊಂದು ಹಾಕಿದ ಭದ್ರತಾ ಪಡೆ

    ವಿದೇಶಗಳಲ್ಲಿ ಎಷ್ಟು ಮಂದಿ ಭಾರತೀಯರು ಕರೊನಾ ವೈರಸ್​ನಿಂದ ಮೃತಪಟ್ಟಿದ್ದಾರೆ ಗೊತ್ತಾ? ಅಮೆರಿಕದಲ್ಲೇ ಹೆಚ್ಚು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts