More

    ಈ ಹುಡುಗ ಕಾಲೇಜಿಗೆ ಹೋಗೋದು ಬೈಕ್-ಕಾರ್​​​​ನಲ್ಲಿ ಅಲ್ಲ, ಫ್ಲೈಟ್​​​​ನಲ್ಲಿ… ಯಾಕೆ ‘ಏನಕ್ಕೆ’ ಅನ್ನೋದು ಗೊತ್ತಾದ್ರೆ ಬೆರಗಾಗ್ತೀರಾ!

    ಬೆಂಗಳೂರು: ಸಾಮಾನ್ಯವಾಗಿ ಕಾಲೇಜಿಗೆ ಹೋಗುವಾಗ ಯುವ ಜನತೆ ಬಹಳ ಉತ್ಸುಕರಾಗಿರುತ್ತಾರೆ. ಕಾರು, ಬಟ್ಟೆ, ಬೈಕ್​​​ ಬಗ್ಗೆ ಸಾಕಷ್ಟು ಕ್ರೇಜ್ ಇರುತ್ತದೆ. ಆದರೆ ಕೆನಡಾದಲ್ಲಿ ಕಾಲೇಜಿಗೆ ಹೋಗುವ ಹುಡುಗನೊಬ್ಬ ತನ್ನ ಕಾಲೇಜಿಗೆ ಬೈಕ್ ಅಥವಾ ಕಾರಿನಲ್ಲಿ ಅಲ್ಲ, ವಿಮಾನದಲ್ಲಿ ತೆರಳುತ್ತಾನೆ. ಸ್ಥಳೀಯ ಟಿವಿ ಚಾನೆಲ್​​​ನವರು ಹುಡುಗ ಏಕೆ ಹೀಗೆ ಮಾಡುತ್ತಾನೆ ಎಂಬುದರ ಹಿಂದಿನ ಕಾರಣವನ್ನೂ ಕೇಳಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಹುಡುಗ ವ್ಯಾಂಕೋವರ್‌ನಲ್ಲಿರುವ ಕಾಲೇಜಿನಲ್ಲಿ ಓದಲು ಕೆನಡಾದ ಕ್ಯಾಲ್ಗರಿಯಿಂದ ಹೋಗುತ್ತಾನೆ. ಅವನು ಕಾಲೇಜಿಗೆ ಹೋಗಲು ವಿಮಾನದಲ್ಲಿ ಪ್ರಯಾಣಿಸುತ್ತಾನೆ. ಈ ರೀತಿ ಮಾಡಲು ಹುಡುಗ ನೀಡಿದ ಕಾರಣವೆಂದರೆ ಅವನು ವಾರಕ್ಕೆ ಎರಡು ಬಾರಿ ಕಾಲೇಜಿಗೆ ಹೋಗಲು ಕ್ಯಾಲ್ಗರಿಯಿಂದ ವ್ಯಾಂಕೋವರ್‌ಗೆ ವಿಮಾನದಲ್ಲಿ ಹೋಗುತ್ತಾನೆ. ಪ್ರತಿ ರೌಂಡ್-ಟ್ರಿಪ್ ಫ್ಲೈಟ್‌ಗೆ ಸುಮಾರು $150 ವೆಚ್ಚವಾಗುತ್ತದೆ, ಇದು ತಿಂಗಳಿಗೆ ಸುಮಾರು $1200 (ಸುಮಾರು 1 ಲಕ್ಷ ರೂ.) ಆಗುತ್ತದೆ.

    ಒಂದು ವೇಳೆ ವಿದ್ಯಾರ್ಥಿಯು ಈ ರೀತಿ ವಿಮಾನದಲ್ಲಿ ಓಡಾಡದೆ ವ್ಯಾಂಕೋವರ್‌ನಲ್ಲಿಯೇ ವಾಸಿಸುತ್ತಿದ್ದರೆ, ಅವನಿಗೆ ತಿಂಗಳಿಗೆ ಸುಮಾರು $ 2500 ಬಾಡಿಗೆಗೆ ಖರ್ಚು ಮಾಡಬೇಕಾಗುತ್ತದೆ. ಆದರೆ ವಿಮಾನದಲ್ಲಿ ಪ್ರಯಾಣಿಸಲು ಕೇವಲ 150 ಡಾಲರ್‌ಗಳು. ಅಂದರೆ ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳುವ ವೆಚ್ಚದ ಅರ್ಧದಷ್ಟು. ಹಾಗಾಗಿ ಹಣವನ್ನು ಉಳಿಸಲು ಅವನು ಈ ರೀತಿ ಮಾಡುತ್ತಾನೆ.

    @historyinmemes ಹೆಸರಿನ ಖಾತೆಯಲ್ಲಿ ಈ ವೈರಲ್ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಬರೆಯುವವರೆಗೆ, 66 ಮಿಲಿಯನ್ ಜನರು ಇದನ್ನು ವೀಕ್ಷಿಸಿದ್ದಾರೆ ಮತ್ತು 2.5 ಲಕ್ಷ ಜನರು ಅದನ್ನು ಲೈಕ್ ಮಾಡಿದ್ದಾರೆ. ವಿಡಿಯೋ ವೈರಲ್ ಆದ ತಕ್ಷಣ, ಜನರು ಅದಕ್ಕೆ ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿರುವುದು ಕಂಡುಬಂದಿದೆ. ಬಹುತೇಕರು “ವಿದ್ಯಾರ್ಥಿಯ ಈ ನಿರ್ಧಾರ ಸರಿಯಾಗಿದೆ ಎಂದು ಹೇಳಿದರೆ, ಹಲವರು ಅವನ ನಿರ್ಧಾರವನ್ನು ಟೀಕಿಸಿದ್ದಾರೆ”.

    ಅಂದಹಾಗೆ ಈ ಹುಡುಗನ ಐಡಿಯಾ ನಿಮಗೆ ಇಷ್ಟವಾಯಿತಾ? ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

    ಇಡ್ಲಿ-ರಾಜ್ಮಾ ಪ್ರಕೃತಿಯ ವೈರಿಗಳಾದರೆ ಆಲೂ ಪರೋಟ ಉತ್ತಮವೇ…ಈ ಹೊಸ ಸಂಶೋಧನೆಯಿಂದ ಹೊರ ಬಂತು ಸೀಕ್ರೆಟ್!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts