More

    60ರಲ್ಲಿ ಬದುಕು ಮುಗಿಸಿಕೊಂಡ ಕರೊನಾ ವಾರಿಯರ್: ಸೋಂಕಿಗೆ ಬಲಿಯಾಗಿ ಆತ್ಮಹತ್ಯೆಗೆ ಶರಣಾದ ಅಜ್ಜಿ

    ಹೈದರಾಬಾದ್: ಕೋವಿಡ್-19 ತನ್ನ ಕರಾಳ ಬಾಹುಗಳನ್ನು ಚಾಚಿ ಅಟ್ಟಹಾಸ ಮೆರೆಯುತ್ತಲೇ ಇದೆ. ಈ ಮಹಾಮಾರಿಯಿಂದ ಪ್ರತಿದಿನವೂ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಬಡವ, ಶ್ರೀಮಂತ ಎಂಬ ಭೇದ ಭಾವವಿಲ್ಲದೆ ಯಾರನ್ನೂ ಬೇಕಾದರೂ ಇದು ನುಂಗಬಲ್ಲದು. ಸೋಂಕು ದೃಢಪಟ್ಟವರು ಈ ರೋಗದಿಂದ ತಮ್ಮ ಸಾವು ಇನ್ನೂ ಮುಂದೆ ಇದ್ದರೂ ಅದರಿಂದಾಗುವ ದೈಹಿಕ, ಮಾನಸಿಕ ನೋವು ಸಹಿಸಲಾಗದೇ ಸಹಜ ಸಾವಿಗೆ ಮುಂಚೆಯೇ ಆತ್ಮಹತ್ಯೆ ಮಾಡಿಕೊಂಡು ಬದುಕನ್ನು ಕೊನೆಗೊಳಿಸಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ಸೇನೆಯ ಭಾರಿ ಕಾರ್ಯಾಚರಣೆ: ಶಸ್ತ್ರಾಸ್ತ್ರಗಳ ಅಡಗುದಾಣ, ಮಾದಕ ವಸ್ತು ವಶಕ್ಕೆ

    ಅಂಥದ್ದೇ ಒಂದು ಪ್ರಸಂಗ ತೀರ ಇತ್ತೀಚೆಗಷ್ಟೇ ನಡೆದಿದೆ. ಕಸಗೂಡಿಸುವವರು ಮತ್ತು ಇತರ ನೈರ್ಮಲ್ಯ ಕಾರ್ಮಿಕರು ಮುಂಚೂಣಿಯಲ್ಲಿರುವ ‘ಕರೊನಾ ಯೋಧರು’, ಕರೊನಾವೈರಸ್ ಹರಡದಂತೆ ತಡೆಗಟ್ಟಲು ಮತ್ತು ಮುಂಜಾಗೃತಾ ಕ್ರಮವಾಗಿ ಬೃಹತ್ ಸಂಖ್ಯೆಯ ಜನರು ಇಂದು ಮನೆಯಿಂದಲೇ ಕೆಲಸ ಮಾಡುತ್ತಿರುವುದರ ಮಧ್ಯದಲ್ಲೇ ಕರೊನಾ ಸೇನಾನಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಪ್ರತಿದಿನ ಅನಿರ್ದಿಷ್ಟಾವಧಿ ವರೆಗೆ ಮನೆಯಿಂದ ಹೊರಗೇ ಉಳಿಯಬೇಕಾದ ಪರಿಸ್ಥಿತಿ. ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಯಲ್ಲಿ ಸಫಾಯ್ ಕೆಲಸ ಮಾಡುತ್ತಿದ್ದ 60 ವರ್ಷದ ಮಹಿಳೆ, COVID-19 ಸೋಂಕು ಉಂಟುಮಾಡುವ SARS-CoV-2 ವೈರಸ್‌ ಸೋಂಕು ದೃಢಪಟ್ಟ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಇದನ್ನೂ ಓದಿ:  ಕಾಸರಗೋಡಿನಲ್ಲಿ 540 ಹಾಸಿಗೆಗಳ ಹೈಟೆಕ್ ಕಂಟೇನರ್​ ಆಸ್ಪತ್ರೆ; ಟಾಟಾ ನೆರವು

    ಈ ಘಟನೆ ನಡೆದಿದ್ದು ಜಿಲ್ಲೆಯ ಹಸನ್‌ಪಾರ್ಥಿ ಪಟ್ಟಣದಲ್ಲಿ. ಮೃತ ಮಹಿಳೆ ಶೀತ ಮತ್ತು ಜ್ವರದಿಂದ ಬಳಲುತ್ತಿದ್ದ ಕಾರಣ ಅವಳು ಕರೊನಾವೈರಸ್ ಪರೀಕ್ಷೆಗೊಳಗಾದಳು. ಶನಿವಾರ  ಆಶಾ ಕಾರ್ಯಕರ್ತೆಯೊಬ್ಬರು ಆಕೆ ಸೋಂಕಿಗೆ ತುತ್ತಾಗಿರುವುದನ್ನು ಪರೀಕ್ಷಾ ವರದಿ ಖಚಿತಪಡಿಸಿದೆ ಎಂದು ಹೇಳಿದರು. ಇದಲ್ಲದೆ, ಮುನ್ನೆಚ್ಚರಿಕೆ ಕ್ರಮವಾಗಿ, ಆಶಾ ಕಾರ್ಯಕರ್ತೆ ಆಕೆಗೆ ಮನೆಯ ಹೊರಗೆ ಹೆಜ್ಜೆ ಹಾಕದಂತೆ ತಿಳಿಸಿದರು.
    COVID-ಸೋಂಕು ದೃಢಪಟ್ಟ ನಂತರ ವೃದ್ಧೆ ಕೀಟನಾಶಕ ಸೇವಿಸಿ ಪ್ರಜ್ಞೆ ತಪ್ಪಿ ರಸ್ತೆಯ ಮೇಲೆ ಬಿದ್ದಳು. ಇದನ್ನು ಗಮನಿಸಿದ ಜನರು ಆಕೆಯ ರಕ್ಷಣೆಗೆ ಧಾವಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆ ಸಾವಿಗೀಡಾಗಿರುವುದಾಗಿ ತಿಳಿಸಿದರು. ಅಧಿಕಾರಿಗಳ ಪ್ರಕಾರ, ಮೃತಳು ಯಾವುದೇ ಆತ್ಮಹತ್ಯೆ ಪತ್ರ ಇಟ್ಟಿಲ್ಲ. COVID-19 ಸೋಂಕಿನಿಂದಾಗಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಆಕೆಯ ಕುಟುಂಬ ಸದಸ್ಯರು ಸಂಶಯಿಸಿದ್ದಾರೆ.

    ರಾಮಮಂದಿರದ ಭವಿಷ್ಯದ ಸುರಕ್ಷತೆಗೆ ಹೀಗೊಂದು ಪ್ಲ್ಯಾನ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts